UN NETWORKS
ಮಂಗಳೂರು: ಹಿಂದೂಗಳ ಶ್ರದ್ಧಾ ಕೇಂದ್ರ ಅಯೋದ್ಯೆಯಲ್ಲಿ ಪ್ರಭು ಶ್ರೀರಾಮಚಂದ್ರರ ಭವ್ಯವಾದ ಮಂದಿರ ನಿರ್ಮಾಣದ ಆಗ್ರಹಕ್ಕಾಗಿ ವಿಶ್ವಹಿಂದೂ ಪರಿಷತ್ ನವೆಂಬರ್ 25 ರಂದು ಮಂಗಳೂರಿನಲ್ಲಿ ಹಮ್ಮಿಕೊಂಡ ಬೃಹತ್ ಜನಾಗ್ರಹ ಸಭೆಗೆ ಹಿಂದೂ ಯುವ ಸೇನೆ ಕೇಂದ್ರೀಯ ಮಂಡಳಿ ಸಂಪೂರ್ಣ ಬೆಂಬಲ ಘೋಷಿಸಿದೆ.
ಹಿಂದೂ ಯುವ ಸೇನಾ ಎಲ್ಲಾ ಶಾಖೆಗಳ ಕಾರ್ಯಕರ್ತರು ಪಾಲ್ಗೊಳ್ಳಲಿದ್ದು, ಆದಿನ ಶೋಭಯಾತ್ರೆಯಲ್ಲಿ ಆಗಮಿಸುವ ರಾಮಭಕ್ತರಿಗೆ ಜ್ಯೋತಿ ವೃತ್ತದಲ್ಲಿ ಮಜ್ಜಿಗೆ ಮತ್ತು ಕುಡಿಯುವ ನೀರಿನ ವ್ಯವಸ್ಥೆಯನ್ನು ಹಿಂದೂ ಯುವ ಸೇನೆಯಿಂದ ಮಾಡಲಾಗುವುದು ಎಂದು ಹಿಂದೂ ಯುವ ಸೇನೆ ಕೇಂದ್ರೀಯ ಮಂಡಳಿಯ ಗೌರವಾದ್ಯಕ್ಷ ಭಾಸ್ಕರಚಂದ್ರ ಶೆಟ್ಟಿ, ಅದ್ಯಕ್ಷ ಯಶೋಧರ ಚೌಟ, ಜಿಲ್ಲಾದ್ಯಕ್ಷ ವೀರಪ್ಪ ಮೂಡುಶೆಡ್ಡೆ, ಕಾರ್ಯದರ್ಶಿ ರವಿಚಂದ್ರ ಎಕ್ಕೂರು ತಿಳಿಸಿದ್ದಾರೆ.


