UN NETWORKS
ಉಳ್ಳಾಲ: ಫಿಝಾ ಗ್ರೂಪ್‍ನ ಮಾಲೀಕ, ವಿಧಾನ ಪರಿಷತ್ ಸದಸ್ಯ ಬಿ.ಎಂ ಫಾರೂಕ್ ಅವರ ಪುತ್ರಿ ಫಿಜಾ ಹಾಗೂ ಕೇರಳದ ಉದ್ಯಮಿ ರೋಶನ್ ಅವರ ಅದ್ದೂರಿ ನಿಖಾಹ್ ಸಮಾರಂಭ ಉಳ್ಳಾಲ ಸಮುದ್ರತಟದ ವಿಶಾಲ ಬಂಗ್ಲೆಯ ಕ್ಯಾಂಪಸ್‍ನಲ್ಲಿ ಶುಕ್ರವಾರ ಸಂಜೆ ನಡೆಯಿತು. ಸಮಾರಂಭದಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಕುಟುಂಬದ ಸದಸ್ಯರು ಸೇರಿದಂತೆ ಗಣ್ಯರು ಪಾಲ್ಗೊಂಡರು.
ಫಾರೂಕ್ ಅವರ ಮನೆ ಸೇರಿದಂತೆ ಕ್ಯಾಂಪಸ್‍ನ್ನು ಕೋಟಿ ಕೋಟಿಗೂ ಅಧಿಕ ವೆಚ್ಚದಲ್ಲಿ ವಿದ್ಯುತ್ ದೀಪ, ಹೂವಿನಿಂದ ಅಲಂಕರಿಸಲಾಗಿತ್ತು. ಫಾರೂಕ್ ಪುತ್ರಿ ವಧುವಿಗೆ ಹಾಗೂ ವರ ರೋಶನ್‍ಗೆ ನಿಖಾಹ್ ಹಾಗೂ ವಿಶ್ರಾಂತಿಗಾಗಿ ವಿಶೇಷ ವೇದಿಕೆ ನಿರ್ಮಿಸಲಾಗಿತ್ತು. ಮನೆಯ ಮುಂಭಾಗದಲ್ಲಿ ಅತಿಥಿಗಳನ್ನು ಸ್ವಾಗತಿಸಿದ ಬಳಿಕ ಮನೆಯ ಹಿಂಭಾಗದ ಸಮುದ್ರತಟದ ಕ್ಯಾಂಪಸ್‍ನಲ್ಲಿ ಭೋಜನ, ಸಂಗೀತ ರಸಿಕರಿಗಾಗಿ ಗಝಲ್ ಎಲ್ಲವೂ ಒಂದಕ್ಕಿಂತ ಒಂದು ಮೇಳೈಸಿತ್ತು. ಸಂಜೆ ವಿಮಾನದಲ್ಲಿ ಬಜ್ಪೆಯಲ್ಲಿ ಬಂದು ಇಳಿದ ಅವರು ನೇರವಾಗಿ ಉಳ್ಳಾಲ ರಾಣಿ ಅಬ್ಬಕ್ಕ ಸರ್ಕಲ್ ಬಳಿಯ ಫಾರೂಕ್ ಅವರ ಬಂಗಲೆಗೆ ಆಗಮಿಸಿದರು.
ಮದುವೆ ಸಮಾರಂಭದಲ್ಲಿ ಮುಖ್ಯಮಂತ್ರಿಗಳ ಆಗಮನಕ್ಕಾಗಿ ಫಾರೂಕ್ ಕುಟುಂಬದ ಸದಸ್ಯರು ಸೇರಿದಂತೆ ಗಣ್ಯರು ಕಾಯುತ್ತಿದ್ದರು. ಕ್ಯಾಂಪಸ್ ಉದ್ದಕ್ಕೂ ಗಣ್ಯರ ದಂಡೇ ನೆರೆದಿತ್ತು. ಮಾಜಿ ಪ್ರಧಾನಿ ಎಚ್. ಡಿ. ದೇವೆಗೌಡ, ಅವರ ಪತ್ನಿ ಚೆನ್ನಮ್ಮ, ಕುಮಾರ ಸ್ವಾಮಿ ಪತ್ನಿ ಶಾಸಕಿ ಅನಿತಾ ಕುಮಾರಸ್ವಾಮಿ, ಸಚಿವ ಎಚ್.ಡಿ. ರೇವಣ್ಣ, ಪತ್ನಿ ಭವಾನಿ ರೇವಣ್ಣ, ಕುಮಾರಸ್ವಾಮಿ ಪುತ್ರ ಚಿತ್ರನಟ ನಿಖಿಲ್ ಗೌಡ, ಯುವ ನಾಯಕ ಪ್ರಜ್ವಲ್, ಸಚಿವ ಜಮೀರ್ ಅಹ್ಮದ್, ಸಂಸದ ಎಲ್. ಶಿವರಾಮೇಗೌಡ, ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ವಿಧಾನ ಪರಿಷತ್ ಸದಸ್ಯ ಭೋಜೇಗೌಡ, ಶಾಸಕ ಬಸವರಾಜ್ ಹೊರಟ್ಟಿ, ಫಾರೂಕ್ ಅವರ ಸಹೋದರ ಮಂಗಳೂರು ಉತ್ತರ ಕ್ಷೇತ್ರದ ಮಾಜಿ ಶಾಸಕ ಮಾಜಿ ಶಾಸಕ ಮೊೈದಿನ್ ಬಾವಾ, ಮಾಜಿ ಸಚಿವರಾದ ಅಮರನಾಥ ಶೆಟ್ಟಿ, ಬಿ. ರಮನಾಥ ರೈ,ಮದುವೆ ಸಮಾರಂಭದಲ್ಲಿ ನೂತನ ವಧೂವರರನ್ನು ಹಾರೈಸಿದ ಅವರು ಬಳಿಕ ಸಮುದ್ರ ತಟದಲ್ಲಿ ನಡೆದ ಔತಣ ಕೂಟದಲ್ಲಿ ಪಾಲ್ಗೊಂಡರು.


