UN NETWORKS
ಉಳ್ಳಾಲ: ಶಿಕ್ಷಣ ಪಡೆದ ವಿದ್ಯಾರ್ಥಿಗಳು , ಶಿಕ್ಷಕರನ್ನು ಗುರುತಿಸಿ ಗೌರವಿಸುವಂತಹ ಕಾರ್ಯ ಶ್ಲಾಘನೀಯ ಎಂದು ಪಿಲಾರು ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಶ್ರೀಧರ್ ಮಾಸ್ತರ್ ಅಭಿಪ್ರಾಯಪಟ್ಟರು.

ಪಿಲಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ 2008ನೇ ಸಾಲಿನ ಹಳೇ ವಿದ್ಯಾರ್ಥಿಗಳಿಂದ ಶಾಲೆಯಲ್ಲಿ ಗುರುವಾರ ಶಿಕ್ಷಕರಿಗೆ ನಡೆದ ಗುರುವಂದನೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ವಿದ್ಯೆ ಪಡೆದ ವಿದ್ಯಾರ್ಥಿಗಳು ಗುರುತಿಸಿ ಗೌರವಿಸುವ ಕಾರ್ಯ ಸಂತಸ ಕೊಡುತ್ತದೆ. ಪಿಲಾರು ಶಾಲೆಯಲ್ಲಿ ಕಲಿತವರು ವೈದ್ಯರೂ ಆಗಿದ್ದಾರೆ. ಅಪಘಾತ ಪ್ರಕರಣ ಸಂದರ್ಭ ವಿದ್ಯಾರ್ಥಿನಿಯೊಬ್ಬಳು ವೈದ್ಯೆಯಾಗಿ ಸಿಕ್ಕಿದ್ದು, ಹೈಕೋರ್ಟಿನಲ್ಲಿ ವಕೀಲರಾಗಿ ಸಿಕ್ಕಿರುವುದು ವೃತ್ತಿ ಜೀವನದ ಸಾರ್ಥಕತೆಯನ್ನು ಕೊಡುತ್ತದೆ ಎಂದರು.
ನಿವೃತ್ತ ಮುಖ್ಯೋಪಾಧ್ಯಾಯಿನಿ ಕಮಲಾ ಬಾೈ, ಹಿರಿಯ ಶಿಕ್ಷಕರುಗಳಾದ ಕಾತ್ಯಾಯಿನಿ, ಮೇರಿ, ಐಡಾ ಡಿಸೋಜ, ಪ್ರವೀಣಾ, ಪುಷ್ಪಾವತಿ ಉಚ್ಚಿಲ್, ವಿಶಾಲಾಕ್ಷಿ, ನಾಗವೇಣಿ, ಸ್ಮಿತಾ, ಭಾರತಿ, ಪ್ರೇಮಲತಾ, ಗುಲಾಬಿ ಹಾಗೂ ಎಸ್ ಡಿಎಂಸಿ ಅಧ್ಯಕ್ಷ ಆಸೀಫ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಹಳೇ ವಿದ್ಯಾರ್ಥಿಗಳಾದ ಅನುಷಾ .ಬಿ ಸ್ವಾಗತಿಸಿದರು. ತೇಜೇಶ್ ಮತ್ತು ಮಧುಶ್ರೀ ಕಾರ್ಯಕ್ರಮ ನಿರೂಪಿಸಿದರು. ಅರ್ಷಾದ್ ಖಾನ್ ವಂದಿಸಿದರು.


