UN NETWORKS
ದೇರಳಕಟ್ಟೆ: ದೇರಳಕಟ್ಟೆಯ ಯೇನೆಪೊಯ ವಿಶ್ವವಿದ್ಯಾನಿಲಯದ ಯೇನೆಪೊಯ ಫಾರ್ಮಸಿ ಕಾಲೇಜು ಮತ್ತು ಸಂಶೋಧನ ಕೇಂದ್ರದಲ್ಲಿ ರಾಷ್ಟ್ರೀಯ ಔಷಧ ವಿಜ್ಞಾನ ಸಪ್ತಾಹ ಆಚರಿಸಲಾಯಿತು.
“ಆರೋಗ್ಯಕರ ಭಾರತಕ್ಕಾಗಿ ಔಷಧಿಕಾರರು” ಎಂಬ ವಿಷಯದ ಮೇಲೆ ನಡೆದ ರಾಷ್ಟ್ರೀಯ ಔಷಧ ವಿಜ್ಞಾನ ಸಪ್ತಾಹದಲ್ಲಿ ಸಂಸ್ಥೆಯ ಎಲ್ಲಾ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ತರಬೇತಿಯ ಭೋಧಕ, ಭೋಧಕೇತರ ಮತ್ತು ವಿದ್ಯಾರ್ಥಿ ವರ್ಗ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಮೈಸೂರಿನ ಉನ್ನತ ಶಿಕ್ಷಣ ಕೌಶಲ್ಯ ಅಭಿವೃದ್ಧಿ ಮತ್ತು ಸಂಶೋಧನಾ ಕೇಂದ್ರದ ಡಾ| ಬಿ.ಜಿ. ನಾಗವಿ ಹೆಸ್ದಾರ್ ಕಾರ್ಯಕ್ರಮ ಉದ್ಘಾಟಿಸಿ ಔಷಧಿಕಾರರ ಔಷಧಾಲಯದ ಪಾತ್ರ ಮತ್ತು ವ್ಯಾಪ್ತಿಯನ್ನು ವಿವರಿಸಿದರು.
ಯೇನೆಪೊಯ ವಿಶ್ವವಿದ್ಯಾನಿಲಯದ ಕುಲಸಚಿವ ಡಾ| ಗಂಗಾಧರ ಸೋಮಾಯಾಜಿ ಕೆ. ಎಸ್. ಉಪಸ್ಥಿತರಿದ್ದರು.ಸಹಾಯಕ ಪ್ರಾಧ್ಯಾಪಕಿ ನಿಶ್ಮಿತಾ ಗ್ರೆಟ್ಟಾ ಡಿ’ಸೋಜಾ ಇವರು ರಾಷ್ಟ್ರೀಯ ಔಷಧ ವಿಜ್ಞಾನ ಸಪ್ತಾಹದ ಮಹತ್ವವನ್ನು ತಿಳಿಸಿದರು .ಯೇನೆಪೊಯ ಫಾರ್ಮಸಿ ಕಾಲೇಜು ಮತ್ತು ಸಂಶೋಧನ ಕೇಂದ್ರದ ಪ್ರಾಂಶುಪಾಲೆ ಡಾ| ಮೊಹಮ್ಮದ್ ಗುಲ್ಜಾರ್ ಅಹಮ್ಮದ್ ಸ್ವಾಗತಿಸಿದರು.ಡಾ| ಸುನಿಲ್ ಎಸ್ ಮೆಂಘಾನಿ ಅವರು ಕಾರ್ಯಕ್ರಮದ ವರದಿಯನ್ನು ವಿವರಿಸಿದರು. ಹಾಗೂ ಸಹಾಯಕ ಪ್ರಾಧ್ಯಾಪಕಿ ಸಂಧ್ಯಾ ವಿ. ವಂದಿಸಿದರು.


