UN NETWORKS
ಮಲಾರ್ :ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ದೇಶದಾದ್ಯಂತ ಜನಾರೋಗ್ಯವೇ ರಾಷ್ಟ್ರ ಶಕ್ತಿ ಅಭಿಯಾನದ ಅಂಗವಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯ ಮಲಾರ್ ವಲಯದ ವತಿಯಿಂದ ಮ್ಯಾರಾಥಾನ್ ಓಟ ಹಾಗೂ ಯೋಗ ಪ್ರದರ್ಶನ ಮತ್ತು ಸಭಾ ಕಾರ್ಯಕ್ರಮ ನಡೆಯಿತು.
ಹರೇಕಳ ಕೊಜಪಾಡಿಯಿಂದ ಪಾವೂರು ಕಡವಿನ ಬಳಿ ವರೆಗೆ ನಡೆದ ಮ್ಯಾರಾಥಾನ್ ಓಟಕ್ಕೆ ಪಾಪ್ಯುಲರ್ ಫ್ರಂಟ್ ಮಲಾರ್ ವಲಯ ಅಧ್ಯಕ್ಷರಾದ ಎಸ್.ಎಂ.ಬಶೀರ್ ರವರು ಧ್ವಜವನ್ನು ಹಸ್ತಾಂತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಕಾರ್ಯದರ್ಶಿ ಅಬ್ದುಲ್ ರಝಾಕ್ ಕೆಮ್ಮಾರ “ಸದೃಢ ,ಭಯಮುಕ್ತ ಭಾರತ ನಿರ್ಮಾಣಕ್ಕಾಗಿ ಪ್ರತಿಯೊಬ್ಬರೂ ದೈಹಿಕ ಹಾಗೂ ಮಾನಸಿಕ ವಾಗಿ ಸನ್ನದ್ಧರಾಗಬೇಕೆಂದು” ಕರೆ ನೀಡಿದರು. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯ ಮಲಾರ್ ವಲಯ ಕಾರ್ಯದರ್ಶಿ ನಾಸಿರ್ ಮಲಾರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು
ಈ ಸಂದರ್ಭದಲ್ಲಿ ಪಿಎಫ್ಐ ಮಲಾರ್ ವಲಯ ಸಮಿತಿ ಸದಸ್ಯರಾದ ಹಾರೀಶ್ ಮಲಾರ್, SDPI ಜಿಲ್ಲಾ ಸಮಿತಿ ಸದಸ್ಯರಾದ ಝಾಹೀದ್ ಮಲಾರ್, ಮುಂತಾದವರು ಉಪಸ್ಥಿತರಿದ್ದರು.ಪಾಪ್ಯುಲರ್ ಫ್ರಂಟ್ ಹರೇಕಳ ಏರಿಯ ಅಧ್ಯಕ್ಷ ಝೈನುದ್ದೀನ್ ಕಾರ್ಯಕ್ರಮದಲ್ಲಿ ಸ್ವಾಗತಿಸಿದರು . ಹಮೀದ್ ಫಜೀರ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದಗೈದರು.


