UN NETWORKS
ಉಳ್ಳಾಲ: ಕ್ರೀಡೆಯ ಮೂಲಕ ಸಾಮಾಜಿಕ ಸಾಮರಸ್ಯದೊಂದಿಗೆ ಸಮಾನತೆಯನ್ನು ಕಾಣಲು ಸಾಧ್ಯವಿದ್ದು, ಕ್ರೀಡಾಪಟುಗಳು ಸ್ಪರ್ಧಾ ಸ್ಪೂರ್ತಿಯೊಂದಿಗೆ ಆಟವಾಡುವ ಮೂಲಕ ಕ್ರೀಡಾ ದಕ್ಷತೆಯನ್ನು ಮೆರೆಯಬೇಕು ಎಂದು ಕಣಚೂರು ಶಿಕ್ಷಣ ಸಂಸ್ಥೆಗಳ ಹಣಕಾಸು ನಿರ್ದೇಶಕ ಅಬ್ದುಲ್ ರಹ್ಮಾನ್ ಕಣಚೂರು ಅಭಿಪ್ರಾಯಪಟ್ಟರು.
ತೊಕ್ಕೊಟ್ಟು ಚೆಂಬುಗುಡ್ಡೆ ಮಂಗಳೂರು ಒನ್ ಶಿಕ್ಷಣ ಸಂಸ್ಥೆಯ ಮೈದಾನದಲ್ಲಿ ಕೆರೆಬೈಲ್ ಫ್ರೆಂಡ್ಸ್ ವತಿಯಿಂದ ನಡೆದ ಕೆಪಿಎಲ್ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.ನಗರಸಭಾ ಸದಸ್ಯೆ ಶಶಿಕಲಾ ಕೀಡಾಂಗಣ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಡಾ| ಯು.ಟಿ.ಇಫ್ತಿಕಾರ್, ಉದ್ಯಮಿ ಅಬ್ದುಲ್ ರಹ್ಮಾನ್, ನಝೀರ್ ಅಹ್ಮದ್, ಗುತ್ತಿಗೆದಾರ ಮನ್ಸೂರ್ ಮಂಚಿಲ,ಉಪಸ್ಥಿತರಿದ್ದರು. ಕೀಡಾಕೂಟದ ಸಂಘಟಕ ಅಶ್ರಫ್ ಕೆರೆಬೈಲ್ ಸ್ವಾಗತಿಸಿದರು. ಅಖ್ತರ್ ಅಲಿ ವಂದಿಸಿದರು.


