UN NETWORKS
ತಲಪಾಡಿ: ತಲಪಾಡಿಯ ಉಚ್ಚಿಲ ಸಸಿಹಿತ್ಲು ಪ್ರದೇಶದ ಸಮುದ್ರ ತೀರದಿಂದ ನಡೆಯುತ್ತಿದ್ದ ಅಕ್ರಮ ಅಡ್ಡೆಗೆ ದಾಳಿ ನಡೆಸಿರುವ ಉಳ್ಳಾಲ ಠಾಣಾಧಿಕಾರಿ ಗೋಪಿಕೃಷ್ಣ ನೇತೃತ್ವದ ಪೊಲೀಸ್ ತಂಡ 16 ದೋಣಿ ಸಹಿತ ಟನ್ ಗಟ್ಟಲೆ ಮರಳು ವಶಕ್ಕೆ ಪಡೆದಿದೆ.


ಕರ್ನಾಟಕ-ಕೇರಳ ಗಡಿಭಾಗ ಉಚ್ಚಿಲ ಸಸಿಹಿತ್ಲು ಸಮುದ್ರ ತೀರದಿಂದ ಮರಳುಗಾರಿಕೆ ನಡೆಸುತ್ತಿದ್ದ ತಂಡ ಹಲವು ದೋಣಿಗಳ ಮೂಲಕ ಸಸಿಹಿತ್ಲು ಸಮೀಪ ದಾಸ್ತಾನಿರಿಸಿ ರಾತ್ರಿ ವೇಳೆ ಕೇರಳ ಕಡೆಗೆ ಮರಳು ಸಾಗಾಟ ನಡೆಸುತ್ತಿತ್ತು. ಖಚಿತ ಮಾಹಿತಿ ಪಡೆದ ಪೊಲೀಸ್ ತಂಡ ಬುಧವಾರ ಬೆಳಿಗ್ಗೆ ಕಾರ್ಯಾಚರಣೆಗೆ ಇಳಿದಾಗ ಪ್ರಮುಖ ಆರೋಪಿ ದೋಣಿ ಸಹಿತ ಪರಾರಿಯಾಗಿದ್ದು, ಇತರರು ಪರಾರಿಯಾಗಿದ್ದಾರೆ. ನೀರಿನಲ್ಲಿ ನಿಲ್ಲಿಸಲಾಗಿದ್ದ 16 ದೋಣಿಗಳನ್ನು ಉಳ್ಳಾಲ ಠಾಣೆಯ ಹಲವು ಸಿಬ್ಬಂದಿ ನೇತೃತ್ವದಲ್ಲಿ ದೋಣಿಗಳನ್ನು ಕ್ರೇನ್ ಮೂಲಕ ಮೇಲಕ್ಕೆತ್ತಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಸ್ಥಳಕ್ಕೆ ಭೂ ಮತ್ತು ಗಣಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪ್ರಕರಣ ದಾಖಲಿಸಬೇಕಿತ್ತಾದರೂ, ಬೆಳಿಗ್ಗಿನಿಂದ ಸಂಜೆಯವರೆಗೂ ಅಧಿಕಾರಿಗಳು ಭೇಟಿ ನೀಡದೇ ಇರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ


