UN NETWORKS
ಕೋಟೆಕಾರು : ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿರುವ ಪನೀರಿನ 11ನೇ ಮತ್ತು 13 ಅವಾರ್ಡ್ ನ್ನು ಸಂಪರ್ಕಿಸುವ ರಸ್ತೆಯು ಕಳೆದ 50 ವರ್ಷಗಳಿಂದಲೂ ಕಾಲುದಾರಿಯಾಗಿತ್ತು ಮತ್ತು ಕಾಲುವೆ ಮುಖಾಂತರ ಸಂಪರ್ಕ ಸಾಧಿಸುತ್ತಿತ್ತು. ಯಾವುದೇ ವಾಹನಗಳಿಂದ ಸಂಪರ್ಕ ಸಾಧ್ಯವಾಗುತ್ತಿರಲಿಲ್ಲ.
ಇದೀಗ ಜಮೀನಿನ ಮಾಲಕರು ಸಾರ್ವಜನಿಕ ಸುಗಮ ಸಂಚಾರಕ್ಕೆ ಜಾಗವನ್ನು ದಾನ ಮಾಡಿದ್ದು ಊರ ಜನರು ತಾತ್ಕಾಲಿಕ ರಸ್ತೆ ನಿರ್ಮಿಸಿದ್ದಾರೆ. ಇವಾಗ ದ್ವಿಚಕ್ರ ,ರಿಕ್ಷಾ,ಕಾರುಗಳು ಸಂಚರಿಸುತ್ತಿದ್ದು ಆದಷ್ಟು ಬೇಗ ಈ ರಸ್ತೆಗೆ ಸರ್ಕಾರದಿಂದ ಅನುದಾನ ಒದಗಿಸಿ ರಸ್ತೆ ಕಾಂಕ್ರಿಟೀಕರಣ ಮತ್ತು ಅಗಲೀಕರಣ ಮಾಡಿ ಈ ಊರಿನ ಬಹಳ ವರ್ಷಗಳ ಬೇಡಿಕೆಯನ್ನು ಆದಷ್ಟು ಬೇಗ ಈಡೇರಿಸಬೇಕಾಗಿ ಜನತೆಯ ಪರವಾಗಿ ಸಹಿಗಳನ್ನು ಸಂಗ್ರಹಿಸಿ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಪನೀರ್ ಬ್ರಾಂಚ್ ಕೋಟೆಕಾರು ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿ ಹಾಗೂ ಅಧ್ಯಕ್ಷರಿಗೆ ಮನವಿಯನ್ನು ಸಲ್ಲಿಸಲಾಯ್ತು. ನಿಯೋಗದಲ್ಲಿ ಬ್ರಾಂಚಿನ ಪ್ರಧಾನ ಕಾರ್ಯದರ್ಶಿ ಪಿ.ಎ ಅಬುಸಾಲಿ ಪನೀರ್, ಕೋಶಾಧಿಕಾರಿ ಇಕ್ಬಾಲ್ ಪನೀರ್, ಸಮೀರ್ ಪಿ.ಬಿ ,ಮನ್ಸೂರ್ ಪಿ.ಎ,ಇಕ್ಬಾಲ್ ಕೆ.ಬಿ, ಜಮಾಲ್ ಪಿ.ಎ ಉಪಸ್ಥಿತಿದ್ದರು.


