UN NETWORKS
ಮಂಗಳೂರು: ಮಂಗಳೂರು ಹವ್ಯಕ ಸಭಾ, ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ ಮತ್ತು ಲಯನ್ಸ್ ಕ್ಲಬ್ ಮಂಗಳೂರು ಜಂಟಿ ಆಶ್ರಯದಲ್ಲಿ ತೇಜಸ್ವಿನಿ ಆಸ್ಪತ್ರೆ ಸಹಕಾರದಲ್ಲಿ ನಂತೂರು ಶ್ರೀ ಭಾರತಿ ಕಾಲೇಜಿನಲ್ಲಿ ರಕ್ತದಾನ ಶಿಬಿರ ನಡೆಯಿತು.
ಮಂಗಳೂರು ಕೆ.ಎಂ.ಸಿಯ ಹಿರಿಯ ವೈದ್ಯ ಡಾ. ಸದಾಶಿವ ರಾವ್ ಮಾತನಾಡಿ ರಕ್ತದ ಅವಶ್ಯಕತೆ ಇದ್ದಾಗ ಇರುವ ಅತುರ, ರಕ್ತದಾನ ಮಾಡುವಾಗಲೂ ಇರಬೇಕು, ರಕ್ತದಾನದಿಂದ ಆರೋಗ್ಯಕ್ಕೂ ಒಳ್ಳೆಯದು ಎಂದು ಹೇಳಿದರು.ಮಂಗಳೂರು ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ವಿಜಯ ವಿಷ್ಣು ಮಯ್ಯ, ರಕ್ತದಾನ ಮಾಡಲು ಹಿಂಜರಿಕೆ ಇರಬಾರದು, ಅಪರೂಪದ ರಕ್ತದ ಮಾದರಿ ಅಗತ್ಯ ಇರುವಾಗ ಕೆಲವೊಮ್ಮೆ ಪರದಾಡುವ ಪರಿಸ್ಥಿತಿ ಇರುತ್ತದೆ ಎಂದು ರಕ್ತದಾನದ ಅಗತ್ಯವನ್ನು ವಿವರಿಸಿದರು.
ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನದ ಕಾರ್ಯದರ್ಶಿ ಡಾ. ಮುರಲೀ ಮೋಹನ್ ಚೂಂತಾರು ಮಾತನಾಡಿ ರಕ್ತದಾನ ನಿರಂತರವಾಗಿ ನಡೆಯುತ್ತಿರಬೇಕು, ರಕ್ತದಾನ ಮಾಡುವುದರಿಂದ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ರಕ್ತದಾನದ ಮಾಹಿತಿ ನೀಡಿದರು.
ಮಂಗಳೂರು ಲಯನ್ಸ್ ಕ್ಲಬ್ ಕಾರ್ಯದರ್ಶಿ ಕ್ಷೇಮ ರಾವ್, ಲಯನ್ಸ್ ಅಧ್ಯಕ್ಷೆ ಜ್ಯೋತಿ ಶೆಟ್ಟಿ ತೇಜಸ್ವಿನಿ ಆಸ್ಪತ್ರೆಯ ಡಾ. ಶ್ರೀ ದೇವಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಹವ್ಯಕ ಸಭಾ ಅಧ್ಯಕ್ಷ ಕೃಷ್ಣ ನೀರಮೂಲೆ ಕಾರ್ಯಕ್ರಮ ನಿರೂಪಿಸಿದರು.


