UN NETWORKS
ನಾಟೆಕಲ್: ಶುಚಿತ್ವವು ಈಮಾನಿನ ಒಂದು ಭಾಗವಾಗಿದೆ, ಇಸ್ಲಾಮ್ ಸುಚಿತ್ವಕ್ಕೆ ಬಹಳಷ್ಟು ಮಹತ್ವ ಕಲ್ಪಿಸಿದೆ. “ನೀವು ಶುಚಿತ್ವ ಪಾಲಿಸಿ ಇಸ್ಲಾಮ್ ಶುಚಿವುಳ್ಳದ್ದಾಗಿದೆ” ಎಂದು ನಬಿ. ಸ.ಅ. ರವರ ತಿರು ವಚನದಂತೆ.
S S Fನಾಟೆಕಲ್ ಶಾಖಾ ವತಿಯಿಂದ ಬೆಳಿಗ್ಗೆ S S F ಧ್ವಜ ದಿನದ ಅಂಗವಾಗಿ ನಾಟಕಲ್ ಪರಿಸರ ಮತ್ತು ಸರಕಾರಿ ಆಸ್ಪತ್ರೆಯ ವಾರಾಂಡದಲ್ಲಿ ಶುಚಿತ್ವ ಕಾರ್ಯಕ್ರಮ ಮತ್ತು ಶುಚಿತ್ವ ಅಭಿಯಾನವು ಶಾಖಾ ಅಧ್ಯಕ್ಷರಾದ ಹಮೀದ್ ಸಹಾರ ನಾಟಕಲ್ ಇವರ ನೇತೃತ್ವದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಸ್ಥಳೀಯ ಪಂಚಾಯತ್ ಸದಸ್ಯರಾದ ಅಬ್ಬಾಸ್ ಮದಪಾಡಿ, ರಹ್ಮಾನಿಯ ಮದ್ರಸ ಪ್ರ.ಕಾರ್ಯದರ್ಶಿ ಸಿದ್ದಿಕ್ ಮದನಿ, ಹಿರಿಯ ಸದಸ್ಯರಾದ ಇಬ್ರಾಹಿಂ ನಾಟಕಲ್, ಶಾಖಾ ಉಪಾಧ್ಯಕ್ಷರಾದ ಫಾರೂಕ್ ನಾಟೆಕಲ್ ಪ್ರ. ಕಾರ್ಯದರ್ಶಿ ಹಮೀದ್ ah, ಕೋಶಾಧಿಕಾರಿ ಅಷ್ಫಾಕ್ , kcf ಸದಸ್ಯರಾದ ಇಕ್ಬಾಲ್ mn ನಾಟೆಕಲ್ ಸೇರಿದಂತೆ ಹಲವಾರು ಸದಸ್ಯರು ಪಾಲ್ಗೊಂಡು ಅಭಿಯಾನವನ್ನು ಯಶಸ್ವಿಗೊಳಿಸಿದರು.


