UN NETWORKS
ಮಂಡ್ಯ: ಮಂಡ್ಯದ ಚಾಮುಂಡೇಶ್ವರಿ ನಗರದ ಬನ್ನೂರು ರಸ್ತೆಯ ಪಿ.ಇ.ಎಸ್ ಇಂಜಿನಿಯರಿಂಗ್ ಕಾಲೇಜಿನ ಹತ್ತಿರದ ಎಂ.ಸಿ ಕಾಂಪ್ಲೆಕ್ಸ್ ನಲ್ಲಿ ಗುರುವಾರ ಕುಲುಕ್ಕಿ (ಮೀಟ್, ಈಟ್ ಆಂಡ್ ಡ್ರಿಂಕ್) ಷರಬತ್ತು ಮಳಿಗೆಗೆ ಕನ್ನಡ ಚಿತ್ರರಂಗದ ಖ್ಯಾತ ನಟ ಪ್ರೇಮ್ ಚಾಲನೆ ನೀಡಿದರು.
ಆರೋಗ್ಯದಾಯಕ ಪಾನೀಯವಾಗಿರುವ ಕುಲುಕ್ಕಿಯನ್ನು ಮಂಡ್ಯದ ಜನತೆಗೆ ಪರಿಚಯಿಸುತ್ತಿರುವ ಸ್ನೇಹಿತರ ಕಾರ್ಯ ಯಶಸ್ಸಿನತ್ತ ಸಾಗಲಿ. ರೈತರು ಬೆಳೆಯುವ ಮಾವಿನಕಾಯಿ, ಮೆಣಸು ಇದನ್ನು ಬಳಸುವ ಮೂಲಕವೇ ಷರಬತ್ತನ್ನು ತಯಾರು ಆಗುವುದರಿಂದ ರೈತರಿಗೆ ಬೆಳೆಗೆ ಉತ್ತಮ ಪ್ರೋತ್ಸಾಹ ನೀಡಿದಂತೆ ಆಗುವುದು. ಮಂಡ್ಯದ ಜನತೆ ಇದನ್ನು ಪ್ರೋತ್ಸಾಹಿಸಲಿದ್ದಾರೆ ಎಂದು ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಖ್ಯಾತ ನಾಯಕನ ನಟ ನಿನಾಸಂ ಸತೀಶ ಮಾತನಾಡಿ ಹೊಸ ಜನರೇಷನ್ನಿನವರು ಒಪ್ಪಿಕೊಳ್ಳುವಂತಹ ಹೊಸ ಟೇಸ್ಟ ಕುಲುಕ್ಕಿ ಸಂಸ್ಥೆಯವರು ನೀಡಿದ್ದಾರೆ. ಮಂಡ್ಯದ ಜನತೆಗೆ ಇದೊಂದು ಸಂತಸದ ಸುದ್ಧಿ. ಸಂಸ್ಥೆ ಯಶಸ್ವಿಯಾಗಿ ಬೆಳೆದು ಇನ್ನಷ್ಟು ಶಾಖೆಗಳನ್ನು ತೆರೆಯಲಿ ಎಂದು ಹಾರೈಸಿದರು.
1987 ಆರಂಭವಾದ ಎಂಕೆಹೆಚ್ ಸಂಸ್ಥೆ ಯಶಸ್ಸಿನ ಹಾದಿಯಲ್ಲಿ ಸಾಗುತ್ತಾ ಕಳೆದ 7 ವರ್ಷಗಳಿಂದ ಕುಲುಕ್ಕಿ ಆಹಾರ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಕುಲುಕ್ಕಿ ಡ್ರಿಂಕ್ ನ ಮೊದಲನೆ ಶಾಖೆ ಕಾಸರಗೋಡಿನಲ್ಲಿ ಆರಂಭಗೊಂಡಿದೆ. ಎರಡನೆಯದಾಗಿ ಬೆಂಗಳೂರು ಕೋರಮಂಗಲ , ಮೂರನೆಯದಾಗಿ ಮಂಡ್ಯದಲ್ಲಿ ಚಾಲನೆ ದೊರೆತಿದೆ. ಮುಂದೆ ಮೈಸೂರು, ಹಾಸನ, ಕಲ್ಲಿಕೋಟೆ, ಗುಜರಾತ್ , ಚೆನ್ನೈನಲ್ಲೂ ಶೀಘ್ರದಲ್ಲೇ ಔಟ್ ಲೆಟ್ ಆರಂಭವಾಗಲಿದೆ. ಅಂತರಾಷ್ಟ್ರೀಯವಾಗಿ ಶೀಘ್ರದಲ್ಲೇ ದುಬೈನಲ್ಲೂ ಸಂಸ್ಥೆ ಔಟ್ಲೆಟನ್ನು ತೆರೆಯಲಿದೆ ಎಂದು ಸಂಸ್ಥೆಯ ಪಾಲುದಾರ ಮಸೂದ್ ತಿಳಿಸಿದರು.
ಈ ಸಂದರ್ಭ ಮಾಲೀಕರುಗಳಾದ ನೌಷಾದ್, ಮೊಯ್ದೀನ್, ಎಂ.ಕೆ.ಹೆಚ್ ಸಂಸ್ಥೆ ಸ್ಥಾಪಕ ಸದಸ್ಯ ಇಬ್ರಾಹೀಂ ಖಲೀಲ್, ಐಡಿಯಲ್ ಕೆಫೆ ಅಂಡ್ ಕುಲುಕಿಯ ಮಾಲೀಕ ಹನುಮೇ ಗೌಡ, ಪಾಲುದಾರ ನಾಗೇಶ್, ಜಗದೀಶ್, ಹರೀಶ್, ಸುನೀತಾ, ಸೌಮ್ಯ ಮಂಡ್ಯ ಉಪಸ್ಥಿತರಿದರು.














