Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
UllalavaniUllalavani
ಅಪರಾಧ ಸುದ್ದಿಗಳು

ತಲಪಾಡಿ: ಟೋಲ್ ಗೇಟ್ ಎದುರು‌ ಪ್ರತಿಭಟನೆ

UllalaVaniBy UllalaVaniSeptember 21, 2018Updated:September 21, 2018No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

UN NETWORKS

ತಲಪಾಡಿ: ಅವ್ಯವಸ್ಥೆಯ ಗೂಡಾಗಿರುವ ಕುಂದಾಪುರ-ತಲಪಾಡಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾನೂನು ವಿರುದ್ಧವಾಗಿ ಟೋಲ್ ಸಂಗ್ರಹಿಸುತ್ತಿರುವುದು ಜನಸಾಮಾನ್ಯರಿಗೆ ಗುತ್ತಿಗೆ ಕಂಪೆನಿ ನಡೆಸುತ್ತಿರುವ ಅನ್ಯಾಯ ಎಂದು ವಿಧಾನಪರಿಷತ್ ಮುಖ್ಯಸಚೇತಕ ಐವನ್ ಡಿಸೋಜ ಹೇಳಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ವತಿಯಿಂದ ಅಸಮರ್ಪಕ, ಅವೈಜ್ಞಾನಿಕ ಕಾಮಗಾರಿ, ಸರ್ವಿಸ್ ರಸ್ತೆ ನಿರ್ಮಾಣ ಅಪಘಾತ ವಲಯಗಳಲ್ಲಿ ಸುರಕ್ಷತೆ ಹಾಗೂ ಸ್ಥಳೀಯ ನೋಂದಾಯಿತ ವಾಹನಗಳಿಗೆ ಸಂಪೂರ್ಣ ಸುಂಕ ವಿನಾಯತಿಗೆ ಆಗ್ರಹಿಸಿ ತಲಪಾಡಿ ಟೋಲ್ ಗೇಟ್ ಬಳಿ ಗುರುವಾರ ಆಯೋಜಿಸಲಾಗಿದ್ದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯಲ್ಲಿ ಮೇಲ್ಛಾವಣಿಯಿಲ್ಲ, ಫ್ಲೈಓವರ್ ಇನ್ನೂ ಆಗಿಲ್ಲ. ಆರು ವರ್ಷಗಳಿಂದ ನಾಲ್ಕು ಕುಂದಗಳನ್ನು ಮಾತ್ರ ಹಾಕಿ 1,2 ಕಿಮೀ ಮೇಲ್ಛಾವಣಿ ಮಾತ್ರ ಹಾಕಲಾಗಿದೆ. ರಾಷ್ಟ್ರೀಯ ಹೆದ್ದಾರಿಯ ರಸ್ತೆಗಳು ಅವ್ಯವಸ್ಥೆಯ ಗೂಡಾಗಿದೆ. ಆದರೂ ಟೋಲ್ ಸಂಗ್ರಹಿಸಲಾಗುತ್ತಿದೆ. ಕಾನೂನುಬದ್ದವಾಗಿ ರಸ್ತೆ ವ್ಯವಸ್ಥೆಯನ್ನು ಸರಿಪಡಿಸಿದ ನಂತರವೇ ಟೋಲ್ ಸಂಗ್ರಹಿಸಬೇಕಿದೆ. ತಲಪಾಡಿಯಿಂದ ಕುಂದಾಪುರದವೆರೆಗೆ ರಸ್ತೆ ವ್ಯವಸ್ಥೆಯೇ ಸರಿಯಿಲ್ಲ. ರಸ್ತೆ ಅವ್ಯವಸ್ಥೆಯಿಂದ ಸಾವು ಅಥವಾ ಹಾನಿ ಸಂಭವಿಸಿದಲ್ಲಿ ರಸ್ತೆ ಗುತ್ತಿಗೆ ವಹಿಸಿಕೊಂಡ ಕಂಪೆನಿಯೇ ಜವಾಬ್ದಾರಿ. ಅವರಿಂದಲೇ ಪರಿಹಾರ ನೀಡಬೇಕು ಹೊರತು ಸರಕಾರದಿಂದಲ್ಲ. ಕ್ರಮವನ್ನು ಅನುಸರಿಸದೇ ಇದ್ದಲ್ಲಿ ಕಂಪೆನಿ ವಿರುದ್ಧವೇ ಪ್ರಕರಣ ದಾಖಲಿಸಲಾಗುವುದು ಅನ್ನುವ ಉಡುಪಿ ಜಿಲ್ಲಾಧಿಕಾರಿಗಳ ಹೇಳಿಕೆ ಅಭಿನಂದನೀಯ. ಇದು ಜಿಲ್ಲೆಯಲ್ಲಿಯೂ ಜಾರಿಯಾಗಬೇಕಿದೆ. ಜನರಿಂದಲೇ ಅಸ್ತಿತ್ವಕ್ಕೆ ಬಂದಿರುವ ಸರಕಾರದ ಮಾತು ಕೇಳದ ಜನರ ವಿರುದ್ಧವೇ ಕಂಪೆನಿ ಕಾರ್ಯಾಚರಿಸುತ್ತಿರುವುದರಲ್ಲಿ ಅರ್ಥವಿಲ್ಲ ಅಂದ ಅವರು ಶೀಘ್ರವೇ ಗುತ್ತಿಗೆ ವಹಿಸಿಕೊಂಡಿರುವ ಕಂಪೆನಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಹಾಗೂ ಜನರ ಬೇಡಿಕೆಗಳಿಗೆ ಸ್ಪಂಧಿಸಿ ಮತ್ತೆ ಪ್ರತಿಭಟನೆಗೆ ಅವಕಾಶ ಮಾಡದಂತೆ ನೋಡಬೇಕಿದೆ ಎಂದು ಆಗ್ರಹಿಸಿದರು.

ಸೆ.30ರ ಸುಂಕ ಪಡೆದಲ್ಲಿ ರಾ.ಹೆ. ಬಂದ್ !
ಕಂಪೆನಿಯ ಕುಮ್ಮಕ್ಕಿನಿಂದ ಕನ್ನಡಿಗರ ಮೇಲೆ ದೌರ್ಜನ್ಯಗಳು ಮುಂದುವರಿದಲ್ಲಿ ಅದಕ್ಕೆ ತಕ್ಕುದಾದ ರೀತಿಯಲ್ಲಿ ಪ್ರತಿಭಟಿಸಿ ಅವರಿಗೆ ಬುದ್ಧಿ ಕಲಿಸುತ್ತೇವೆ. ಇದೀಗ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲಾಗಿದೆ. ಸೆ.30 ರ ನಂತರ ಸ್ಥಳೀಯರಿಗೆ ಸುಂಕ ವಸೂಲಾತಿ ಕಡ್ಡಾಯ ಮಾಡಿದಲ್ಲಿ ಉಗ್ರವಾಗಿ ಹೋರಾಡಿ ರಾ.ಹೆ.ಯನ್ನು ಬಂದ್ ನಡೆಸಿ ನಾಲ್ಕು ಟೋಲ್ ಗೇಟ್ ಸಮಿತಿಯವರು ಒಟ್ಟಾಗಿ, ಎಲ್ಲಾ ರಾಜಕೀಯ ಪಕ್ಷಗಳನ್ನು ಜತೆಗೂಡಿಸಿ, ಸ್ಥಳೀಯರನ್ನು ಒಗ್ಗೂಡಿಸಿ ತಲಪಾಡಿಯಿಂದ ಸಾಸ್ತಾನದವರೆಗೆ ರಸ್ತೆ ಬಂದ್ ನಡೆಸಿ ಪ್ರತಿಭಟನೆ ಮಾಡುತ್ತೇವೆ. ರಾ.ಹೆ ಕಾಮಗಾರಿಯನ್ನು ತ್ವರಿತಗೊಳಿಸದೇ ಇದ್ದಲ್ಲಿ ಟೋಲ್ ಗೇಟನ್ನು ಸಂಪೂರ್ಣವಾಗಿ ನಿಲ್ಲಿಸುತ್ತೇವೆ ಎಂದು ಗಡಿನಾಡು ರಕ್ಷಣಾ ವೇದಿಕೆ ಅಧ್ಯಕ್ಷ ಸಿದ್ದೀಖ್ ತಲಪಾಡಿ ಹೇಳಿದ್ದಾರೆ.

ತಲಪಾಡಿ ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ವಿನಯ ನಾಯ್ಕ್ ಮಾತನಾಡಿ 90 ಕಿ.ಮೀ ಅಂತರದಲ್ಲಿ ಐದು ಟೋಲ್ ದಾಟಬೇಕಿದೆ. ಇದೊಂದು ಬಹಳಷ್ಟು ತೊಂದರೆಗೊಳಗಾಗುವ ಸ್ಥಿತಿ. ಕಾನೂನನ್ನು ಗಾಳಿಗೆ ತೂರಿ, ಜನರ ಸಮಸ್ಯೆಗೆ ಸ್ಪಂಧಿಸದ ಅಧಿಕಾರಿಗಳು ಎಲ್ಲರ ಕೋಪಕ್ಕೆ ಬಲಿಯಾಗಬೇಕಿದೆ. ಮಂಗಳವಾರದ ತೊಕ್ಕೊಟ್ಟು ಅಪಘಾತದಲ್ಲಿ ಯುವಕನೋರ್ವನ ಜೀವ ಬಲಿಯಾಗಿದೆ.ಅಂತಹದ್ದೇ ರೀತಿಯಲ್ಲಿ ಹಲವವು ಬಲಿಗಳಾಗಬೇಕಿದೆ. ಈ ಅನ್ಯಾಯದ ವಿರುದ್ಧ ಇಡೀ ರಾಜ್ಯದ ಜನ ಒಗ್ಗಟ್ಟಾಗಿ ಹೋರಾಡಬೇಕಾದ ಅನಿವಾರ್ಯತೆ ಎದುರಾಗಬಹುದು ಎಂದರು.

ಮಂಜೇಶ್ವರ ಜಿಲ್ಲಾ ಪಂಚಾಯಿತಿ ಸದಸ್ಯ ಹರ್ಷಾದ್ ವರ್ಕಾಡಿ, ತಾ.ಪಂ ಸದಸ್ಯ ಸಿದ್ದೀಖ್ ಕೊಳಂಗೆರೆ, ಗಣೇಶ್ ಶೆಟ್ಟಿ ತಲಪಾಡಿ, ಟಿ.ಯಸ್.ಇಸ್ಮಾಯಿಲ್, ಇಸ್ಮಾಯಿಲ್, ಅರುಣ್ ಭಂಡಾರಿ, ಬಿ.ಯಸ್. ಇಸ್ಮಾಯಿಲ್, ಸಲಾಂ ಉಚ್ಚಿಲ, ಇಬ್ರಾಹಿಂ ಕೆ.ಸಿ.ರೋಡ್, ತಲಪಾಡಿ ಗ್ರಾ.ಪಂ ಸದಸ್ಯ ವಿನಯ ಕುಮಾರ್ ಶೆಟ್ಟಿ, ಹುಸೈನ್ ತಲಪಾಡಿ, ಶಾಫಿ ಕಿನ್ಯಾ ಉಪಸ್ಥಿತರಿದ್ದರು. ತಲಪಾಡಿ ಟೋಲ್ ಎದುರುಗಡೆ ನಡೆದ ಪ್ರತಿಭಟನೆಗೆ ಉಳ್ಳಾಲ ಪೊಲೀಸರು ಹಾಗೂ ಕೆಎಸ್ ಆರ್ ಪಿ ಪೊಲೀಸ್ ಪಡೆ ಬಿಗಿಬಂದೋಬಸ್ತ್ ಆಯೋಜಿಸಿತ್ತು.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...
Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಉಳ್ಳಾಲ ಮಸೀದಿ ವಿರುದ್ಧ ಕಮೆಂಟ್ ಮಾಡಿದ ಆರೋಪಿ ಬಂಧನ…..!

March 4, 2026

ಉಳ್ಳಾಲ ಮಸೀದಿಗೆ ಬಾಂಬ್ ಬೆದರಿಕೆ ಪೋಸ್ಟ್: ಕಠಿಣ ಕ್ರಮಕ್ಕೆ ಯು.ಟಿ. ಖಾದರ್ ಸೂಚನೆ

March 3, 2026

ವಿದೇಶಿ ಕರೆನ್ಸಿ ಅಕ್ರಮ ಸಾಗಾಟ – ಓರ್ವ ಪುರುಷ, ಇಬ್ಬರು ಮಹಿಳೆಯರು ಸೆರೆ

March 2, 2026
Leave A Reply

Advertise
ಸಂಪರ್ಕಿಸಿ

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025

ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನೇತ್ರಾ ತಪಾಸಣಾ ಶಿಬಿರ

December 6, 2025

ನೂತನ ಅತ್ಯಾಧುನಿಕ ಫಿಸಿಯೋಥೆರಪಿ ಚಿಕಿತ್ಸಾ ಕ್ಲಿನಿಕ್ ಉದ್ಘಾಟನೆ

November 12, 2025
suddi

ಉಳ್ಳಾಲ ಮಸೀದಿ ವಿರುದ್ಧ ಕಮೆಂಟ್ ಮಾಡಿದ ಆರೋಪಿ ಬಂಧನ…..!

By UllalaVaniMarch 4, 20260

ಉಳ್ಳಾಲ : “Support madi bro Ullal masjid hathira bomb blast madthini” ಎಂಬುದಾಗಿ ಇನ್‌ಸ್ಟಾಗ್ರಾಂನಲ್ಲಿ ಪ್ರಚೋದನಕಾರಿ ಕಾಮೆಂಟ್…

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

ಯುಕೆಟಿಎಲ್ ಪರಿಹಾರ ವಿವಾದ: ಕರ್ನಾಟಕಕ್ಕಿಂತ ಕೇರಳದ ರೈತರಿಗೆ ಹೆಚ್ಚಿನ ಪರಿಹಾರ ಸಿಕ್ಕಿದೆಯೇ? ಇಲ್ಲಿದೆ ಅಸಲಿ ಲೆಕ್ಕಾಚಾರ

March 3, 2026

ಉಳ್ಳಾಲ ಮಸೀದಿಗೆ ಬಾಂಬ್ ಬೆದರಿಕೆ ಪೋಸ್ಟ್: ಕಠಿಣ ಕ್ರಮಕ್ಕೆ ಯು.ಟಿ. ಖಾದರ್ ಸೂಚನೆ

March 3, 2026

ವಿದೇಶಿ ಕರೆನ್ಸಿ ಅಕ್ರಮ ಸಾಗಾಟ – ಓರ್ವ ಪುರುಷ, ಇಬ್ಬರು ಮಹಿಳೆಯರು ಸೆರೆ

March 2, 2026
1 2 3 … 1,819 Next
Automatic YouTube Gallery

ಉಳ್ಳಾಲ ಖಿಲೇರಿಯಾ ರಸ್ತೆ ಕಾಂಕ್ರಿಟೀಕರಣ | ಚರಂಡಿ ನಿರ್ಮಾಣಕ್ಕೆ ಸ್ಪಿಕರ್ ಯು.ಟಿ.ಖಾದರ್ ಶಿಲಾನ್ಯಾಸ

ಉಳ್ಳಾಲ ಖಿಲೇರಿಯಾ ರಸ್ತೆ ಕಾಂಕ್ರಿಟೀಕರಣ ಚರಂಡಿ ನಿರ್ಮಾಣಕ್ಕೆ ಯು.ಟಿ.ಖಾದರ್ ಶಿಲಾನ್ಯಾಸ; ಹಿರಿಯರಾದ ಮಹಮ್ಮದ್ ಮುಕಚ್ಚೇರಿ ಸಮ್ಮುಖದಲ್ಲೇ ಶಂಕು ಸ್ಥಾಪನೆ

ಕಾಮಗಾರಿಗೆ ಅಡ್ಡಿಪಡಿಸಿದ ಜನರ ಬಗ್ಗೆ ಯು.ಟಿ.ಕೆ ಹೇಳಿದ್ದೇನು..?
#ullalavani #news #Utkhader #Road #Ullala
ಉಳ್ಳಾಲ ಖಿಲೇರಿಯಾ ರಸ್ತೆ ಕಾಂಕ್ರಿಟೀಕರಣ | ಚರಂಡಿ ನಿರ್ಮಾಣಕ್ಕೆ ಸ್ಪಿಕರ್ ಯು.ಟಿ.ಖಾದರ್   ಶಿಲಾನ್ಯಾಸ
Now Playing
ಉಳ್ಳಾಲ ಖಿಲೇರಿಯಾ ರಸ್ತೆ ಕಾಂಕ್ರಿಟೀಕರಣ | ಚರಂಡಿ ನಿರ್ಮಾಣಕ್ಕೆ ಸ್ಪಿಕರ್ ಯು.ಟಿ.ಖಾದರ್ ಶಿಲಾನ್ಯಾಸ
ಉಳ್ಳಾಲ ಖಿಲೇರಿಯಾ ರಸ್ತೆ ಕಾಂಕ್ರಿಟೀಕರಣ ಚರಂಡಿ ನಿರ್ಮಾಣಕ್ಕೆ ಯು.ಟಿ.ಖಾದರ್ ...
ಉಳ್ಳಾಲ ಖಿಲೇರಿಯಾ ರಸ್ತೆ ಕಾಂಕ್ರಿಟೀಕರಣ ಚರಂಡಿ ನಿರ್ಮಾಣಕ್ಕೆ ಯು.ಟಿ.ಖಾದರ್ ಶಿಲಾನ್ಯಾಸ; ಹಿರಿಯರಾದ ಮಹಮ್ಮದ್ ಮುಕಚ್ಚೇರಿ ಸಮ್ಮುಖದಲ್ಲೇ ಶಂಕು ಸ್ಥಾಪನೆ

ಕಾಮಗಾರಿಗೆ ಅಡ್ಡಿಪಡಿಸಿದ ಜನರ ಬಗ್ಗೆ ಯು.ಟಿ.ಕೆ ಹೇಳಿದ್ದೇನು..?
#ullalavani #news #Utkhader #Road #Ullala
ಮಾ.4-8ರಂದು ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಕಾರ್ಯಕ್ರಮ
Now Playing
ಮಾ.4-8ರಂದು ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಕಾರ್ಯಕ್ರಮ
ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದ ಬ್ರಹ್ಮಕಲಶೋತ್ಸವ;ಮಾ.4ರಂದು ವಿವಿಧ ಧಾರ್ಮಿಕ ...
ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದ ಬ್ರಹ್ಮಕಲಶೋತ್ಸವ;ಮಾ.4ರಂದು ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಆರಂಭ

ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನಳೀನ್ ಕಟೀಲ್ ಮಾಹಿತಿ

#ullalavani #news #tulunad #ullala #latestnews #breakingnews #package #mangalore #Sasihitlutemple
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version
%d