UN NETWORKS
ಉಳ್ಳಾಲ: ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಸಂಘ 2017-18ನೇ ಸಾಲಿನಲ್ಲಿ ಸಂಘದ 62ವರ್ಷಗಳ ಇತಿಹಾಸದಲ್ಲಿ ಗರಿಷ್ಠ 379.11ಕೋಟಿ ರೂ. ಗಳ ವ್ಯವಹಾರ ನಡೆಸಿ 1.40ಕೋಟಿ ರೂ. ನಿವ್ವಳ ಲಾಭಾಂಶ ಗಳಿಸಿದೆ ಎಂದು ಸಂಘದ ಅಧ್ಯಕ ಎಂ. ಎ. ಮಹಮ್ಮದ್ ಬಶೀರ್ ಹೇಳಿದರು.
ಸಂಘದ ಪ್ರಧಾನ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದೊಡ್ಡ ಮೊತ್ತದ ಲಾಭಾಂಶ ಗಳಿಸಲು ಸಾಧ್ಯವಾಗಿರುವುದಕ್ಕೆ ಸಂಘಧ ಸದಸ್ಯರು, ಗ್ರಾಹಕರು ಸೇವೆಯನ್ನು ಶ್ಲಾಘಿಸಿದ ಸಂಘ ನಿರಂತರವಾಗಿ ಪ್ರಗತಿಯನ್ನು ಸಾಧಿಸುತ್ತ ಮುನ್ನಡೆಯುತ್ತಿದೆ ಎಂದು ನುಡಿದರು.
ಠೇವಣಿ: ಕಳೆದ ಸಾಲಿನಲ್ಲಿ ಸಂಘ “ಎ” ತರಗತಿಯ 9304ಸದಸ್ಯರಿಂದ1.48ಕೋಟಿ ರೂ. ಗಳ ಪಾಲು ಬಂಡವಾಳವನ್ನು ಹೊಂದಿದ್ದು, ಪ್ರಸ್ತುತ ಸಾಲಿನಲ್ಲಿ 171.63 ಕೋಟಿ ಠೇವಣಿ ಸಂಗ್ರಹವಾಗಿದೆ.171.68ಕೋಟಿ ರೂ. ಠೇವಣಿದಾರರಿಗೆ ಹಿಂದಕ್ಕೆ ನೀಡಿ ವರ್ಷಾಂತ್ಯಕ್ಕೆ 86.96ಕೋಟಿ ರೂ. ಠೇವಣಿ ಹೊಂದಿದೆ.
ಸಾಲ: ಕಳೆದ 86.92ಕೋಟಿ ರೂ. ಸಾಲ ವಿತರಿಸಿದ್ದು, 81.32ಕೋಟಿ ರೂ. ಸಾಲ ವಸೂಲಿಯಾಗಿದೆ. ವರ್ಷಾಂತ್ಯಕ್ಕೆ 60.16ಕೋಟಿ ರೂ. ಹೊರಬಾಕಿ ಸಾಲವಿರುತ್ತದೆ. ಸಾಲ ವಸೂಲಾತಿಯಲ್ಲಿ 95ಶೇ. ಪ್ರಗತಿ ಸಾಧಿಸಿರುತ್ತದೆ. ಸಂಘದ ಆಡಿಟ್ ವರ್ಗೀಕರಣ ಕಳೆದ ಹಲವು ವರ್ಷಗಳಿಂದ ನಿರಂತರವಾಗಿ “ಎ” ತರಗತಿಯನ್ನು ಪಡೆದಿರುತ್ತದೆ.
ವಿನಿಯೋಗ: ಸಂಘ ವಿವಿಧ ಹಣಕಾಸು ಸಂಸ್ಥೆಗಳಲ್ಲಿ 34.26ಕೋಟಿ ರೂ. ಗಳನ್ನು ಠೇವಣಿಯಾಗಿ ವಿನಿಯೋಗಿಸಲಾಗಿದೆ.
ಶಾಖೆ: ಬೋಳಿಯಾರು ಗ್ರಾಮದಲ್ಲಿ ಸಂಪೂರ್ಣ ಗಣಕೀಕೃತ ಸಂಘಧ 6ನೇ ಶಾS ಆರಂಭಿಸಲಾಗಿದೆ.
ಡಿವಿಡೆಂಡ್: ಸಂಘವು ನಿರಂತರವಾಗಿ ಹಲವು ವರ್ಷಗಳಿಂದ ತನ್ನ ಷೇರುದಾರರಿರಿಗೆ 25ಶೇ. ಡಿವಿಡೆಂಡ್ ನೀಡುತ್ತಾ ಬಂದಿದೆ. ಈ ಬಾರಿ 25ಶೇ. ಡಿವಿಡೆಂಡ್ ನೀಡಲು ಸಂಘದ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿದ್ದು ಮಂಜೂರಾತಿಗಾಗಿ ಸೆ. 22ರಂದು ನಡೆಯುವ ಮಹಾಸಭೆ ಮಂಡಿಸಲಾಗುವುದು.
ಸಂಘದ ಪ್ರಧಾನ ಕಚೇರಿಯ ನೂತನ ಕಟ್ಟಡ: ವರದಿ ಸಾಲಿನಲ್ಲಿ ಸಂಘದ ಪ್ರಧಾನ ಕಚೇರಿಯ ನೂತನ ನವೀಕೃತ ಕಟ್ಟಡ ಅ. 15ರಂದು ಉದ್ಘಾಟನೆಗೊಂಡಿದೆ.
ಪ್ರಶಸ್ತಿ: ಸಂಘ 2017-18ನೇ ಸಾಲಿನಲ್ಲಿ ಸಾಧಿಸಿದ ಅತ್ಯುತ್ತಮ ಸಾಧನೆಗೈದ .P.À ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನಿಂದ ಪ್ರೋತ್ಸಾಹಕ ಬಹುಮಾನ ಪಡೆದಿರುತ್ತದೆ.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷೆ ಪದ್ಮಾವತಿ ಎಸ್. ಶೆಟ್ಟಿ, ನಿರ್ದೇಶಕರುಗಳಾದ ಗಂಗಾಧರ ಉಳ್ಳಾಲ್, ಕೃಷ್ಣಪ್ಪ ಸಾಲಿಯಾನ್, ಉದಯ ಕುಮಾರ್ ಶೆಟ್ಟಿ, ಅರುಣ್ ಕುಮಾರ್ ಉಳ್ಳಾಲ್, ಗಣೇಶ್ ಶೆಟ್ಟಿ “ರಕ್ಷ” ತಲಪಾಡಿ, ಕೆ. ಬಿ. ಅಬುಸಾಲಿ, ನಾರಾಯಣ ತಲಪಾಡಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೇಣುಗೋಪಾಲ ಯು. ಹಾಗೂ ಸಹಾಯಕ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಸಾದ್ ಮಡ್ಯಾರ್ ಉಪಸ್ಥಿತರಿದ್ದರು.


