UN NETWORKS
ಕೊಣಾಜೆ: ಮಂಗಳೂರು ವಿಶ್ವವಿದ್ಯಾಲಯದ ಶಿಕ್ಷಕೇತರ ಉದ್ಯೋಗಿಗಳ ಸಂಘ(ರಿ)ದ ವತಿಯಿಂದ ಮಂಗಳೂರು ವಿವಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಶಿಕ್ಷಕೇತರ ಸಿಬ್ಬಂದಿಗಳಿಗೆ ಸನ್ಮಾನ ಕಾರ್ಯಕ್ರಮವು ಶನಿವಾರ ವಿಶ್ವವಿದ್ಯಾಲಯದ ಸೆನೆಟ್ ಸಭಾಂಗಣದಲ್ಲಿ ನಡೆಯಿತು.
ಸಮಾರಂಭದಲ್ಲಿ ನಿವೃತ್ತ ಶಿಕ್ಷಕೇತರ ಸಿಬ್ಬಂದಿಗಳಿಗೆ ಸನ್ಮಾನವನ್ನು ನೆರವೇರಿಸಿ ಮಾತನಾಡಿದ ಮಂಗಳೂರು ವಿವಿ ಪ್ರಭಾರ ಕುಲಪತಿ ಡಾ.ಕಿಶೋರ್ ಕುಮಾರ್ ಸಿ.ಕೆ ಅವರು, ವಿಶ್ವವಿದ್ಯಾಲಯದ ಬೆಳವಣಿಗೆಯಲ್ಲಿ ಶಿಕ್ಷಕೇತರ ಸಿಬ್ಬಂದಿಗಳ ಪಾತ್ರವೂ ಪ್ರಮುಖವಾದುದು. ಶಿಕ್ಷಕೇತರ ಸಂಘವು ಇತ್ತೀಚಿನ ವರ್ಷಗಳಲ್ಲಿ ವಿವಿ ಅಭಿವೃದ್ದಿ ಚಟುವಟಿಕೆಗಳಿಗೆ ಉತ್ತಮ ಪ್ರೋತ್ಸಾಹವನ್ನು ನೀಡುತ್ತಾ ಬರುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿವಿಯಲ್ಲಿ ಸೇವೆ ಸಲ್ಲಿಸಿ ನಿವೃತರಾದ ಗ್ರಂಥಾಲಯದಲ್ಲಿ ಅನುಚರರಾಗಿ ಸೇವೆ ಸಲ್ಲಿಸಿರುವ ಕೆ.ಎಂ.ಅಶೋಕ, ರಮೇಶ, ವಿವಿ ವಾಹನ ಚಾಲಕರಾದ ರಾಮಚಂದ್ರ, ಜವಾನ ರಾಜೀವ ಎಂ, ಲ್ಯಾಬ್ ಅಸಿಸ್ಟೆಂಟ್ ಮನೋಹರ ಎಂ, ಸಹಾಯಕ ಹಣಕಾಸು ಅಧಿಕಾರಿ ಜಯಂತಿ ಎನ್.ಶೆಣೈ, ಬೆರಳಚ್ಚುಗಾರರಾದ ವಿಜಯಲಕ್ಷ್ಮೀ ಎಂ, ಪ್ರಥಮ ದರ್ಜೆ ಸಹಾಯಕ ಬಾಸ್ಕರ, ದ್ವಿತೀಯ ದರ್ಜೆ ಸಹಾಯಕ ವಿಶ್ವನಾಥ್ ನಾೈಕ್, ಪ್ರಥಮ ದರ್ಜೆ ಸಹಾಯಕ ಎಚ್.ಗೋಪಾಲ, ವಾಹನ ಚಾಲಕ ಪ್ರಸನ್ನ ಶೆಟ್ಟಿ, ಅನುಚರ ಸಂಜೀವ, ಸ್ವೀಪರ್ ವೆರೋನಿಕಾ ಡಿಸೋಜ, ವಾಹನ ಚಾಲಕ ಲಿಂಗಪ್ಪ ನಾಯ್ಕ್ ಮೊದಲಾದವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ.ಎ.ಎಂ.ಖಾನ್, ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಡಾ.ನಾಗಪ್ಪ ಗೌಡ, ಶಿಕ್ಷಕೇತರ ಸಂಘದ ಅಧ್ಯಕ್ಷರಾದ ಕಮಲಾಕ್ಷಿ, ಪ್ರಧಾನ ಕಾರ್ಯದರ್ಶಿ ತಜ್ನಝ್ ಬಾನು, ಎಸ್ಸಿ, ಎಸ್ಟಿ ಘಟಕದ ವಿಶೇಷಾಧಿಕಾರಿ ಪುಟ್ಟಣ್ಣ, ಕಾರ್ಯಕಾರಿ ಅಭಿಯಂತರರಾದ ಲವ ಮಹಾದೇವಪ್ಪ, ಹಾಗೂ ಶಿಕ್ಷಕೇತರ ಉದ್ಯೋಗಿಗಳ ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ದೇವೇಂದ್ರ ಕುಮಾರ್ ಅವರು ಸನ್ಮಾನಿತರ ವರದಿಯನ್ನು ವಾಚಿಸಿದರು. ಸಂಘದ ಅಧ್ಯಕ್ಷೆ ಕಮಲಾಕ್ಷಿ ಅವರು ಸ್ವಾಗತಿಸಿದರು. ತಜ್ನಝ್ ಬಾನು ವಂದಿಸಿದರು. ಬಾಲಿನಿ ಕಾರ್ಯಕ್ರಮ ನಿರೂಪಿಸಿದರು.



