UN NETWORKS
ಬೋಳಿಯಾರು: ಮನುಷ್ಯ ಹುಟ್ಟಿದಾಗ ಅಳಬೇಕು, ಸತ್ತಾಗ ನಗಬೇಕು. ಆದರೆ ಜನರು ನಗುವಂತೆ ಮಾಡಬಾರದು. ಜೀವಿತಾವಧಿಯಲ್ಲಿ ಸಮಾಜಕ್ಕಾಗಿ ಉತ್ತಮ ಕೆಲಸ ಮಾಡಿದಾಗ ನಾವು ಸತ್ತಾಗ ಜನ ಅಳುತ್ತಾರೆ ಎಂದು ಗ್ರಾಮಚಾವಡಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷ ಗಂಗಾಧರ ಪೂಜಾರಿ ಅಭಿಪ್ರಾಯಪಟ್ಟರು.
ಬೋಳಿಯಾರು ಧರ್ಮನಗರ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವ ಸಮಿತಿಯಿಂದ ಧರ್ಮನಗರದಲ್ಲಿ ಸೋಮವಾರ ನಡೆದ 13ನೇ ವರ್ಷದ ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ಪ್ರಯುಕ್ತ ನಡೆದ’ ಕೆಸರ್ಡ್ ಒಂಜಿ ದಿನ’ದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಆವರು ಮಾತನಾಡಿದರು.
ಶ್ರೀ ಕೃಷ್ಣನ ಬಾಲ ಲೀಲೆಗಳು ಆಟದಲ್ಲೇ ನಡೆಯುತ್ತಿದ್ದವು. ಪ್ರಸ್ತುತ ದಿನಗಳಲ್ಲಿ ಕ್ರೀಡಾಕೂಟ ಸಂಘಟಿಸುವ ಮೂಲಕ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದು ದೇರಳಕಟ್ಟೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಅಧ್ಯಕ್ಷ ರಾಜೇಶ್ ಶೆಟ್ಟಿ ಪಜೀರುಗುತ್ತು ಹೇಳಿದರು.
ಇನೋಳಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಹಾಸ ಪೂಂಜ ಕಿಲ್ಲೂರುಗುತ್ತು, ಕರ್ನಾಟಕ ಜೀವ ವೈವಿಧ್ಯ ಮಂಡಳಿ ಸದಸ್ಯ ಶಂಕರಾನಂದ ಎನ್. ಇನವಳ್ಳಿ, ಪಜೀರು ಗೋವನಿತಾಶ್ರಯ ಟ್ರಸ್ಟ್ ಟ್ರಸ್ಟಿ ರವಿ ರೈ ಪಜೀರು, ಬೋಳಿಯಾರು ಬಂಟರ ಸಂಘದ ಅಧ್ಯಕ್ಷ ಭಾಸ್ಕರ ಶೆಟ್ಟಿ ಕುಂಟುಪುಣಿ ಹಾಗೂ ಹೀಲ್ ಫೌಂಡೇಶನ್ ಮುಖ್ಯಸ್ಥ ಅಜಿತ್ ಪೂಜಾರಿ ಭಟ್ರೆಬೈಲ್, ಸಮಿತಿ ಅಧ್ಯಕ್ಷ ದಿನೇಶ್ ಆಂಚನ್ ಮರ್ಕಮೆ, ಸಂಚಾಲಕರಾದ ಸುಭಾಷ್ ಧರ್ಮನಗರ, ರೋಹಿನಾಥ್ ಶೆಟ್ಟಿ ಜಲಕದಕಟ್ಟೆ, ಉಪಾಧ್ಯಕ್ಷರುಗಳಾದ ಕಿಶೋರ್ ನೀರೋಳ್ಳೆ, ದೇವರಾಜ್ ಧರ್ಮನಗರ, ಸೌಮ್ಯ ನೀರೋಳ್ಳೆ, ಪ್ರಧಾನ ಕಾರ್ಯದರ್ಶಿ ರಂಜಿತ್ ನೀರೋಳ್ಳೆ, ಕೋಶಾಧಿಕಾರಿ ಯಶೋಧರ ಆಂಚನ್, ಜತೆ ಕಾರ್ಯದರ್ಶಿ ಜಯರಾಜ್ ಸುಣ್ಣಕಲ್ಲು ಹಾಗೂ ಸಹ ಕೋಶಾಧಿಕಾರಿ ಕಿಶೋರ್ ಧರ್ಮಕಲ್ಕಾರ್ ಉಪಸ್ಥಿತರಿದ್ದರು.
ತುಳು ಚಿತ್ರನಟ ಪ್ರಕಾಶ್ ಶೆಟ್ಟಿ ಧರ್ಮನಗರ ಕಾರ್ಯಕ್ರಮ ನಿರೂಪಿಸಿದರು.


