UN NETWORKS
ಉಳ್ಳಾಲ: ಹಿಂದೆ ಗ್ರಾಮೀಣ ಕ್ರೀಡೆಯಾಗಿದ್ದ ಕಬಡ್ಡಿ ಇಂದು ದೇಶದ ಕ್ರೀಡೆಯಾಗಿ ಮಾರ್ಪಟ್ಟಿದ್ದು ಇದರಲ್ಲಿ ಭಾಗವಹಿಸಲು ಆಟಗಾರರು ಪೈಪೋಟಿ ನಡೆಸುತ್ತಿದ್ದಾರೆ ಎಂದು ಉಳ್ಳಾಲ ಸಯ್ಯಿದ್ ಮದನಿ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಅಭಿಪ್ರಾಯಪಟ್ಟರು.
ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ-ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮಂಗಳೂರು ದಕ್ಷಿಣ ವಲಯ ಹಾಗೂ ಕೋಟೆಪುರ ಟಿಪ್ಪು ಸುಲ್ತಾನ್ ಶಿಕ್ಷಣ ಸಂಸ್ಥೆಯ ಸರಕಾರದಲ್ಲಿ ಉಳ್ಳಾಲ ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ಬಾಲಕ-ಬಾಲಕಿಯರ ಕಬಡ್ಡಿ ಪಂದ್ಯಾಟ ಉದ್ಘಾಟಿಸಿ ಮಾತನಾಡಿದರು.
ಗೆಲುವಿನ ಗುರಿಯೊಂದಿಗೆ ಆಟದಲ್ಲಿ ಭಾಗವಹಿಸಬೇಕಿದೆ. ಸೋತರೆ ಮುಂದಿನ ಬಾರಿ ಗೆಲುವು ಸಾಧಿಸಬಹುದು. ಇಂದು ಶಾಲಾ ಮಟ್ಟದ ಆಟದಲ್ಲಿ ಭಾಗಿಯಾದವರು ಮುಂದೆ ಜಿಲ್ಲಡ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಿಕಟಪೂರ್ವ ಶಿಕ್ಷಣ ಸಂಯೋಜಕಿ ಹಿಲ್ಡಾ ಕ್ಲೆಮೆನ್ಸಿಯಾ ಪಿಂಟೋ, ಸಿಆರ್ ಪಿ ನಳಿನಿ ಹಾಗೂ ಶಾಲೆಯ ಹಳೆ ವಿದ್ಯಾರ್ಥಿ ಅನ್ಸಾರ್ ಇನೋಳಿ ಇವರನ್ನು ಸನ್ಮಾನಿಸಲಾಯಿತು.
ದರ್ಗಾ ಉಪಾಧ್ಯಕ್ಷ ಮೋನು ಇಸ್ಮಾಯಿಲ್, ಸದಸ್ಯ ಇಬ್ರಾಹಿಂ, ಮತ್ಸ್ಯೋದ್ಯಮಿ ಎಚ್.ಕೆ.ಖಾದರ್, ಚಾರಿಟೇಬಲ್ ಟ್ರಸ್ಟ್ ಸದಸ್ಯ ಹಸೈನಾರ್ ಯು.ಎ., ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ತ್ಯಾಗಂ ಹರೇಕಳ, ಜಿಲ್ಲಾ ಅನುದಾನಿತ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎಂ.ಕೆ.ಮಂಜನಾಡಿ, ನೋಡೆಲ್ ಅಧಿಕಾರಿಗಳಾಗದ ಮೋಹನ್ ಶಿರ್ಲಾಲ್, ಉರ್ಬನ್ ಮಸ್ಕರೇನಸ್,ಕೋಟೆಪುರ ಜಮಾತ್ ಸದಸ್ಯ ಹಮ್ಮಬ್ಬ, ವಿಷ್ಣು ಹೆಬ್ಬಾರ್, ಅಬ್ಬಾಸ್ ಕೋಟೆಪುರ ಮೊದಲಾದವರು ಉಪಸ್ಥಿತರಿದ್ದರು.ಟಿಪ್ಪು ಸುಲ್ತಾನ್ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಂ.ಎಚ್.ಮಲಾರ್ ಸ್ವಾಗತಿಸಿದರು.ಪ್ರಭಾರ ಮುಖ್ಯ ಶಿಕ್ಷಕಿ ಗೀತ ವಂದಿಸಿದರು.ಚಿತ್ರಕಲಾ ಶಿಕ್ಷಕ ರಫೀಕ್ ತುಂಬೆ ಕಾರ್ಯಕ್ರಮ ನಿರೂಪಿಸಿದರು.
‘ಇಲಾಖೆಯ ಯಾವುದೇ ಕಾರ್ಯಕ್ರಮಗಳಾದರೂ ಅದನ್ನು ವಹಿಸಿಕೊಂಡು ಯಶಸ್ವಿಯಾಗಿ ನಿರ್ವಹಿಸುವುದರಲ್ಲಿ ಅನುದಾನಿತ ಶಾಲೆಗಳ ಪೈಕಿ ಟಿಪ್ಪು ಸುಲ್ತಾನ್ ಹಾಗೂ ಹಳೆಕೋಟೆಯ ಸಯ್ಯಿದ್ ಮದನಿ ಶಾಲೆ ಮುಂಚೂಣಿಯಲ್ಲಿದೆ’
ಹಿಲ್ಡಾ ಕ್ಲೆಮೆನ್ಸಿಯಾ ಪಿಂಟೋ, ನಿಕಟಪೂರ್ವ ಶಿಕ್ಷಣ ಸಂಯೋಜಕಿ


