UN NETWORKS
ತೊಕ್ಕೊಟ್ಟು: ಪ್ರಕೃತಿ ವಿಕೋಪ ತಡೆಗಟ್ಟಲು ಭಗವಂತನಿಂದ ಮಾತ್ರ ಸಾಧ್ಯ. ಆದರೆ ನೊಂದವರಿಗೆ ಸಹಾಯ, ಸಾಂತ್ವನ ಹೇಳುವುದು ಮಾನವ ಧರ್ಮ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅಭಿಪ್ರಾಯಪಟ್ಟರು.
ಕೊಡಗು ಮತ್ತು ಕೇರಳದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಹೆಲ್ಪ್ ಇಂಡಿಯಾ ವತಿಯಿಂದ ದಾನಿಗಳಿಂದ ಸಂಗ್ರಹಿಸಿದ ವಸ್ತುಗಳನ್ನು ರವಾನಿಸುವ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿದರು.ಪ್ರಕೃತಿ ವಿಕೋಪ ಹಿನ್ನೆಲೆಯಲ್ಲಿ ಎಲ್ಲ ಧರ್ಮೀಯರು ಒಗ್ಗಟು ಕಾಪಾಡಿಕೊಳ್ಳುವ ಮೂಲಕ ಸೌಹಾರ್ದ ವಾತಾವರಣ ಸೃಷ್ಟಿಯಾಗಿದೆ. ಇದು ನಿರಂತರವಾಗಿರಲಿ. ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ಪೂರೈಸುವ ಸಂದರ್ಭ ಹೆಲ್ಪ್ ಇಂಡಿಯಾ ಫೌಂಡೇಶನ್ ಗುಣಮಟ್ಟಕ್ಕೆ ಆದ್ಯತೆ ನೀಡಿದೆ ಎಂದು ಶ್ಲಾಘಿಸಿದರು.
ಕೇವಲ ಸಾಮಾಜಿಕ ಜಾಲತಾಣದಲ್ಲಿ ಹತ್ತು ದಿನಗಳ ಹಿಂದೆ ಮಾಡಿದ ಮನವಿಗೆ ಜನ ಅದ್ಭುತವಾಗಿ ಸ್ಪಂದಿಸುವ ಮೂಲಕ ವಸ್ತ್ರ, ಆಹಾರ, ಔಷಧ ನೀಡಿದ್ದಾರೆ. ಮುಂದಿನ ಮನೆ ಶುದ್ಧೀಕರಣ ಮಾಡಲು ಬಳಸುವಂತಹ ವಸ್ತುಗಳ ಅಗತ್ಯ ಇರುವ ಪರಿಕರ ಬೇಕಾಗಿದ್ದು ದಾನಿಗಳು ನೀಡಿದರೆ ಸ್ವೀಕರಿಸ್ತೇವೆ ಎಂದು ಹೆಲ್ಪ್ ಇಂಡಿಯಾ ಫೌಂಡೇಶನ್ ಸ್ಥಾಪಕ ರಾಝಿಕ್ ಉಳ್ಳಾಲ್ ಹೇಳಿದರು.
ಇಎನ್ಎನ್ಸಿಪಿಎಸ್ ಮಂಗಳೂರು ನಗರ ಪೊಲೀಸ್ ನಿರೀಕ್ಷಕ ಕೆ.ಎಂ. ಶರೀಫ್, ಹೆಲ್ಪ್ ಇಂಡಿಯಾ ಸ್ಥಾಪಕ ಫಾರೂಕ್ ಪಟ್ಲ, ಸ್ಥಾಪಕ ಸದಸ್ಯರಾದ ಝಾಕೀರ್, ಸಿರಾಜ್, ತೌಸೀಫ್, ತನ್ವೀರ್, ಜಲೀಲ್, ಶರೀಫ್ ಪಟ್ಲ, ಸುಲೈಮಾನ್, ಕಮಾಲ್, ಅಶ್ರಫ್ ಕೆನರಾ ಹಾಗೂ ಅಶ್ರಫ್ ಉಪಸ್ಥಿತರಿದ್ದರು.


