UN NETWORKS
ತೊಕ್ಕೊಟ್ಟು: ತೊಕ್ಕೊಟ್ಟಿನ ಬ್ರಹ್ಮ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಭಾನುವಾರ ರಕ್ಷಾಬಂಧನ ಆಚರಣೆ ನಡೆಯಿತು.
ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಬ್ರಹ್ಮ್ಮಕುಮಾರಿ ವಿಶ್ವೇಶ್ವರಿ ಮಾತನಾಡಿ ರಕ್ಷಾಬಂಧನದ ಮಹತ್ವ, ವರ್ತಮಾನದಲ್ಲಿ ನಡೆಯುತ್ತಿರುವ ಅಹಿತರ ಘಟನೆಗಳ ಬಗೆಯೂ ವಿವರಿಸುತ್ತಾ ಪರಮಾತ್ಮ ರಕ್ಷಣೆ ಅತೀ ಅವಶ್ಯ ಎಂದರು.
ಕಾರ್ಯಕ್ರಮದಲ್ಲಿ ಪುರುಷೋತ್ತಮ ಅಂಚನ್, ರೋಟರಿ ಕ್ಲಬ್ ದೇರಳಕಟ್ಟೆ ಕಾರ್ಯದರ್ಶಿ ಜಯಪ್ರಕಾಶ್ ರೈ ಉಪಸ್ಥಿತರಿದ್ದರು.
ರೋಟರಿ ಕ್ಲಬ್ ದೇರಳಕಟ್ಟೆ ಮಾಜಿ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ಹಾಗೂ ವಿಕ್ರಂ ದತ್ತ ಉಪಸ್ಥಿತರಿದ್ದರು.


