UN NETWORKS
ಅಸೈಗೋಳಿ: ಕೇವಲ ಪ್ರಶಸ್ತಿಗಾಗಿ ಕ್ರೀಡೆಯಲ್ಲಿ ಭಾಗವಹಿಸದೆ ಕ್ರೀಡಾ ಮನೋಭಾವದೊಂದಿಗೆ ಉತ್ತಮ ಆರೋಗ್ಯ ಮತ್ತು ಮನೋರಂಜನೆಯ ದೃಷ್ಟಿಯಲ್ಲಿ ಭಾಗವಹಿಸುವುದರಿಂದ ಸೌಹಾರ್ದಯುತ ಸಮಾಜ ನಿರ್ಮಾಣ ಸಾಧ್ಯ ಎಂದು ಯುವ ಉದ್ಯಮಿ ಅರುಣ್ ಶೆಟ್ಟಿ ಅಭಿಪ್ರಾಯಪಟ್ಟರು.
ಅಸೈಗೋಳಿ ಯುವಕ ಮಂಡಲ ಮತ್ತು ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ಸಮಿತಿಯ ಜಂಟಿ ಆಶ್ರಯದಲ್ಲಿ ಭಾನುವಾರ ಅಸೈಗೋಳಿ ಕೇಂದ್ರ ಮೈದಾನದಲ್ಲಿ 31ನೇ ವರ್ಷದ ಮೊಸರು ಕುಡಿಕೆ ಉತ್ಸವ ಪ್ರಯುಕ್ತ ನಡೆದ ಸಾರ್ವಜನಿಕ ಕ್ರೀಡೋತ್ಸವ ಉದ್ಘಾಟಿಸಿ ಮಾತನಾಡಿದರು.
ಸಮಿತಿಯ ಗೌರವಾಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಪುಲ್ಲು ಅಧ್ಯಕ್ಷತೆ ವಹಿಸಿದ್ದರು. ಸಲಹೆಗಾರರಾದ ಆನಂದ ಕೆ.ಅಸೈಗೋಳಿ, ಉಪಾಧ್ಯಕ್ಷೆ ಲಲಿತಾ ಎಸ್.ರಾವ್, ಕೋಶಾಧಿಕಾರಿ ಸುಧಾಕರ್ ಭಟ್, ಸ್ವಾಗತ ಸಮಿತಿ ಸದಸ್ಯೆ ದೇವಕಿ ಮುಂತಾದವರು ಉಪಸ್ಥಿತರಿದ್ದರು.
ಸಮಿತಿಯ ಪದಾಧಿಕಾರಿಗಳಾದ ಕೃಷ್ಣಪ್ಪ ಎನ್.ಕೊಣಾಜೆ, ದೀಕ್ಷಿತ್, ದೀಪಕ್, ಪುರಂದರ ಶೆಟ್ಟಿ ಅಸೈ, ಪ್ರಣಾಮ, ಮಧುಕಾಂತ್ ಸಹಕರಿಸಿದರು. ಕ್ರೀಡಾ ಸಂಚಾಲಕ ರಾಧಕೃಷ್ಣ ರೈ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ತ್ಯಾಗಂ ಹರೇಕಳ ಪ್ರಸ್ತಾವಿಕವಾಗಿ ಮಾತನಾಡಿದರು. ಸಾಂಸ್ಕೃತಿಕ ಕಾರ್ಯದರ್ಶಿ ರತ್ನ ಕುಮಾರ್ ವಂದಿಸಿದರು.
ಕ್ರೀಡೆಯಲ್ಲಿ ವಿಜೇತರಾದವರು
ಮುಕ್ತ ಕಬಡ್ಡಿ ಪಂದ್ಯಾಟ: ಅಸೈಗೋಳಿ ಹನುಮಾನ್ ಫ್ರೆಂಡ್ಸ್ ಪ್ರಥಮ, ತತ್ವಮಸಿ ಬಗಂಬಿಲ ದ್ವಿತೀಯ.
ಮುಕ್ತ ಹಗ್ಗಜಗ್ಗಾಟ: ಹನುಮಾನ್ ಫ್ರೆಂಡ್ಸ್ ಪ್ರಥಮ, ತ್ರಿಶೂಲ್ ಫ್ರೆಂಡ್ಸ್ ಅಸೈಗೋಳಿ ದ್ವಿತೀಯ.
ಮಕ್ಕಳ ಕಬಡ್ಡಿ ಪಂದ್ಯಾಟ: ಹೃತಿಕ್ ಮತ್ತು ತಂಡ ಪ್ರಥಮ, ಚಂದನ್ ಮತ್ತು ತಂಡ ದ್ವಿತೀಯ.
ನರ್ಸರಿ ಮಕ್ಕಳ 25 ಮೀಟರ್ ಓಟ: ಪರಿಣತ ಪ್ರಥಮ, ದ್ವಿತೀಯ ನಿಶಾನ್, ತೃತೀಯ ರಮ್ಯ.
ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಬಾಲ್ ಪಾಸಿಂಗ್: ಪ್ರತೀಕ್ ಪ್ರಥಮ, ಜೊಸ್ಟಲ್ ದ್ವಿತೀಯ, ಅಮನ್ ತೃತೀಯ.
ಸಂಗೀತ ಕುರ್ಚಿ: ತೃಷಾ ಪ್ರಥಮ, ಅಮನ್ ದ್ವಿತೀಯ, ಜೊಸ್ಟಲ್ ತೃತೀಯ.
ಮಕ್ಕಳ ಸಂಗೀತ ಕುರ್ಚಿ: ಸ್ನೇಹ ಪ್ರಥಮ, ಮಾಧುರಿ ದ್ವಿತೀಯ.
ಲಿಂಬೆ ಚಮಟ ಓಟ: ಶರ್ಮಿಳ ಪ್ರಥಮ, ಮೇಘಶ್ರೀ ದ್ವಿತೀಯ.
ಸಂಗೀತ ಕುರ್ಚಿ (ಮಹಿಳೆಯರ ವಿಭಾಗ): ಶರ್ಮಿಳ ಪ್ರಥಮ, ಚಂಚಲಾಕ್ಷಿ ದ್ವಿತೀಯ, ಭಾರತಿ ತೃತೀಯ.
ಲಿಂಬೆ ಚಮಚ ಓಟ: ಲಲಿತ ಎಸ್.ರಾವ್ ಪ್ರಥಮ, ರಾಧಾ ದ್ವಿತೀಯ, ದೇವಕಿ ತೃತೀಯ.
ಪಟ್ಟಣದಲ್ಲಿ ಚೆಂಡು ಸ್ಪರ್ಧೆ: ಮಲ್ಲಿಕಾ ಪ್ರಥಮ, ನಿರೀಕ್ಷಾ ದ್ವಿತೀಯ, ಪೂರ್ಣಿಮ ತೃತೀಯ.
ಬಾಟಲ್ಗೆ ನೀರು ತುಂಬಿಸುವ ಸ್ಪರ್ಧೆ: ಆಶಾ ಪ್ರಥಮ, ಭಾರತಿ ದ್ವಿತೀಯ, ದೇವಕಿ ತೃತೀಯ ಸ್ಥಾನವನ್ನು ಪಡೆದರು.


