UN NETWORKS
ಉಳ್ಳಾಲ: ದೇರಳಕಟ್ಟೆ ಬದ್ರಿಯ ಜುಮಾ ಮಸೀದಿ ಅಧೀನದ ಹಯಾತುಲ್ ಇಸ್ಲಾಂ ಮದರಸ ವತಿಯಿಂದ 72ನೇ ಸ್ವಾತಂತ್ರ್ಯೋತ್ಸವ ಅಚರಿಸಲಾಯಿತು.ಬದ್ರಿಯ ಜುಮಾ ಮಸೀದಿ ಅಧ್ಯಕ್ಷ ಡಿ.ಅಬ್ಬಾಸ್ ಹಾಜಿ ಧ್ವಜಾರೋಹಣಗೈದರು.ಬದ್ರಿಯ ಜುಮಾ ಮಸೀದಿ ಖತೀಬ್ ಮುಹಮ್ಮದ್ ಶರೀಫ್ ಅರ್ಶದಿ ಸಂದೇಶ ಭಾಷಣಗೈದರು.
ದೇರಳಕಟ್ಟೆ ಪಬ್ಲಿಕ್ ಸ್ಕೂಲ್ ಟ್ರಸ್ಟ್ ಅಧ್ಯಕ್ಷ ಅಬೂಬಕ್ಕರ್ ಹಾಜಿ ನಾಟೆಕಲ್, ಬದ್ರಿಯ ಜುಮಾ ಮಸೀದಿ ಉಪಾಧ್ಯಕ್ಷ ಅಬ್ದುಲ್ ಅಝೀಝ್,ಪ್ರ.ಕಾರ್ಯದರ್ಶಿ ಸೇಟ್ ಮೋನು, ಎಸ್ಕೆಎಸ್ಸೆಸ್ಸೆಫ್ ಮುಖಂಡ ತಬುಕ್ ದಾರಿಮಿ, ಶೇಕಬ್ಬ ಹಾಜಿ,ದೇರಳಕಟ್ಟೆ ಮದರಸ ಮ್ಯಾನೇಜ್ಮೆಂಟ್ ಅಧ್ಯಕ್ಷ ಇಸ್ಮಾಯಿಲ್ ಹಾಜಿ, ಹಯಾತುಲ್ ಇಸ್ಲಾಂ ಮದರಸ ಸದರ್ ಮುಹಲೀಂ ಅಬ್ದುಲ್ಲಾ ಫೈಝಿ, ಹಯಾತುಲ್ ಇಸ್ಲಾಂ ಮದರಸ ಉಸ್ತುವಾರಿಗಳಾದ ಹನೀಫ್ ಜೆ. ಹಂಝ ಎಚ್.ಆರ್ ಮದರಸ ಅಧ್ಯಾಪಕರಾದ ಅಬ್ದುಲ್ ಜಬ್ಬಾರ್ ಮುಸ್ಲಿಯಾರ್, ಬಶೀರ್ ಅಝ್ಹರಿ ಉಪಸ್ಥಿತರಿದರು.


