UN NETWORKS
ಉಳ್ಳಾಲ: ಬ್ರಹ್ಮಶ್ರೀ ಬಿಲ್ಲವ ವೇದಿಕೆ ಕೇಂದ್ರ ಸಮಿತಿ ತೊಕ್ಕೋಟ್ಟು ಉಳ್ಳಾಲ ಇದರ ಆಶ್ರಯದಲ್ಲಿ ಬ್ರಹ್ಮಶ್ರೀ ಕುಟುಂಬ ಮಿಲನ “ಆಟಿ ವಿಶೇಷ ಕಾರ್ಯಕ್ರಮವು ಜಪ್ಪು ರಿವರ್ ಡೇಲ್ ಸಭಾಂಗಣದಲ್ಲಿ ಜರಗಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಮಲರಾಯ ಧೂಮವತಿ ಬಂಟ ದೈವಗಳ ಭಂಡಾರಮನೆಯ ಟ್ರಸ್ಟಿಯಾದಬಾಬು ಶಾಸ್ತ ಕಿನ್ಯ ಉದ್ಘಾಟಿಸಿ ಶುಭ ಹಾರೈಸಿದರು.ಅಧ್ಯಕ್ಷತೆಯನ್ನು ಕೆ.ಟಿ ಸುವರ್ಣ ವಹಿಸಿ ಆಟಿದ ವಿಶೇಷತೆಯ ಬಗ್ಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಪದಾಧಿಕಾರಿಗಳಾದ ಸತೀಶ್ ಕರ್ಕೇರ, ಕೆ.ಪಿ ಸುರೇಶ್, ಚಂದ್ರಶೇಖರ್ ಉಚ್ಚಿಲ್, ಆನಂದ ಕೆ ಅಸೈಗೊಳಿ, ಲಕ್ಷ್ಮಣ ಪೂಜಾರಿ, ಚಂದ್ರಹಾಸ್ ಪಂಡಿತ್ ಹೌಸ್, ಹರೀಶ್ ಅಂಬ್ಲಮೊಗರು, ರಾಜೇಶ್ ಉಳ್ಳಾಲ್, ಉದಯ ಆರ್.ಕೆ, ರವಿ ಸುವರ್ಣ ಉಪಸ್ಥಿತರಿದ್ದರು.
ವೇದಿಕೆಯ ಪ್ರ. ಕಾರ್ಯದರ್ಶಿ ಜೀವನ್ ಕುಮಾರ್ ಸ್ವಾಗತಿಸಿ , ಧನ್ಯವಾದ ವಿತ್ತರು.ಮನೋರಂಜನೆಯ ಅಂಗವಾಗಿ ವಿವಿಧ ಸ್ಪರ್ಧೆ , ಕ್ವಿಜ್ ಏರ್ಪಡಿಸಲಾಗಿತ್ತು. ಮಧ್ಯಾಹ್ನ ಆಟಿಯ ವಿಶೇಷ ತಿಂಡಿ ತಿನಿಸುಗಳನ್ನು ಸವಿಯಲಾಯಿತು.


