UN NETWORKS
ತೊಕ್ಕೊಟ್ಟು: ತೊಕ್ಕೊಟ್ಟಿನ ಗಂಗಾ ಕಾಂಪ್ಲೆಕ್ಸ್‌ನಲ್ಲಿ ಜಾತ್ಯಾತೀತ ಜನತಾದಳದ ಚುನಾವಣಾ ಕಚೇರಿಯನ್ನು ಹಿರಿಯ ನಾಯಕ ಹಾಜಿ ಅಬೂಬಕರ್ ನಾಟೆಕಲ್ ಉದ್ಘಾಟಿಸಿದರು.
ಗಂಗಾಧರ ಉಳ್ಳಾಲ್ ಅವರ ಕಟ್ಟಡದಲ್ಲಿರುವ ಬ್ಯಾಂಕ್‌ನ್ನು ತೆರವುಗೊಳಿಸಿ ಪಕ್ಷಕ್ಕಾಗಿ ಕಚೇರಿಯನ್ನು ನೀಡಿದರ ಬಗ್ಗೆ ಸಭೆಯಲ್ಲಿ ಪ್ರಶಂಸೆ ವ್ಯಕ್ತವಾಯಿತು.
ಜಿಲ್ಲಾಧ್ಯಕ್ಷ ಮುಹಮ್ಮದ್ ಕುಂಞಿ ಅಧ್ಯಕ್ಷತೆಯನ್ನು ವಹಿಸಿದ್ದರು.ಕ್ಷೇತ್ರಾಧ್ಯಕ್ಷ ಮೋಹನ್ ದಾಸ್, ದಿನಕರ್ ಉಳ್ಳಾಲ್ ಪುತ್ತುಮೋನು, ಮಹಿಳಾ ಘಟಕದ ಅಧ್ಯಕ್ಷೆ ರಾಜೇಶ್ವರಿ ಅಝೀಝ್ ಮಲಾರ್, ಯು.ಎಚ್. ಫಾರೂಕ್, ಝಾಕೀರ್ ಉಳ್ಳಾಲ್, ಅಲಪ್ಪಿ ಡಿಸೋಜ, ಯು.ಎನ್. ಬಶೀರ್ ಅಹ್ಮದ್, ಸಾಲಿಹ್ ಉಸ್ಮಾನ್, ಅಕ್ಸಾ, ಅಶ್ರಫ್ ಕೋಡಿ, ಜಬ್ಬಾರ್ ಉಳ್ಳಾಲ್ ಮುಂತಾದವರು ಉಪಸ್ಥಿತರಿದ್ದರು.
ನಝೀರ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು. ಮುನೀರ್ ಮುಕ್ಕಚೇರಿ ವಂದಿಸಿದರು.


