UN NETWORKS
ಕಿನ್ಯ: ಬುಖಾರಿ ಜುಮಾ ಮಸ್ಜಿದ್ ಬದ್ರಿಯ ನಗರ ಕಿನ್ಯ ಇದರ ವತಿಯಿಂದ ಪವಿತ್ರವಾದ ಹಜ್ಜ್ ಕರ್ಮ ನಿರ್ವಹಿಸಲು ಯಾತ್ರೆಗೈಯ್ಯುವ ಬುಖಾರಿ ಜುಮಾ ಮಸೀದಿಯ ಪ್ರಧಾನ ಕಾರ್ಯಧರ್ಶಿ ಅಬ್ಬಾಸ್ ನಾಟೆಕಲ್ ಅವರಿಗೆ ಬೀಳ್ಕೊಡುವ ಸಮಾರಂಭ ಸೋಮವಾರ ಕಿನ್ಯ ಬುಖಾರಿ ಮಸೀದಿಯಲ್ಲಿ ನಡೆಯಿತು.
ಈ ಸಂದರ್ಭ ಮಾತನಾಡಿದ ಸೈಯ್ಯದ್ ಜಲಾಲುಧ್ಧೀನ್ ಸಹದಿ ತಂಙಳ್‍ರವರು ಹಜ್ಜ್ ಇಸ್ಲಾಮಿನ ಪುಣ್ಯ ಕರ್ಮವಾಗಿದ್ದು, ಇದಕ್ಕೆ ಅರ್ಹರಾದವರು ಯಾತ್ರೆ ಮಾಡಲೇಬೇಕು. ಅದೇ ರೀತಿ ಹಜ್ಜ್‍ಯಾತ್ರಿಕರನ್ನು ಗೌರವಿಸುವುದು ಕೂಡಾ ಉತ್ತಮ ಕಾರ್ಯ ಎಂದರು. ಈ ಸಂದರ್ಭದಲ್ಲಿ ಅವರನ್ನು ಬುಖಾರಿ ಮಸೀದಿಯ ಜಮಾಅತ್ ವತಿಯಿಂದ ಶಾಲು ಹೂದಿಸಿ ಬೀಳ್ಕೂಡಲಾಯಿತು ಕಾರ್ಯಕ್ರಮದಲ್ಲಿ ಸೈಯ್ಯದ್ ಅಲವಿತಂಙಳ್,ಉಸ್ಮಾನ್ ಸಖಾಫಿ, ಕೆ.ಎಸ್. ಹಮ್ಮದ್ ಕುಂಞ, ವಿ.ಎ. ಮೊಹಮ್ಮದ್ ಮುಸ್ಲಿಯಾರ್,ಕೆ.ಎಂ.ಮುಸ್ತಫ ನಹೀಮಿ,ಕೆ.ಹೆಚ್. ಮೂಸಕುಂಞ, ಎಂ.ಕೆ.ಎಂ. ಇಸ್ಮಾಯಿಲ್,ಹೈದರ್ ಮುಸ್ಲಿಯಾರ್ ಮೊದಲಾದವರು ಉಪಸ್ಥಿತರಿದ್ದರು.ಮೆಹಬೂಬ್ ಸಖಾಫಿ ಕಿನ್ಯ ಸ್ವಾಗತಿಸಿದರು.


