UN NETWORKS
ಉಳ್ಳಾಲ: ವಿದ್ಯಾರ್ಥಿನಿಯರು ಪಠ್ಯೇತರ ಚಟುವಟಿಕೆಗಳಲ್ಲಿ ಸಿಕ್ಕಿದ ಅವಕಾಶಗಳನ್ನು ಸರಿಯಾಗಿ ಉಪಯೋಗಿಸಿಕೊಂಡು ತಮ್ಮಲ್ಲಿ ಅಡಗಿರುವ ಪ್ರತಿಭೆಗಳ ಅನಾವರಣ ಮಾಡಬೇಕು ಎಂದು ಕಣಚೂರು ಇನ್‍ಸ್ಟಿಟ್ಯೂಟ್ ಆಫ್ ಫ್ಯಾರ ಮೆಡಿಕಲ್ ಸೈನ್ಸ್ ಕಾಲೇಜಿನ ಪ್ರಾಂಶುಪಾಲ ಡಾ| ವಿವಿಯನ್ ಡಿಸೋಜ ಅಭಿಪ್ರಾಯಪಟ್ಟರು.
ಕಣಚೂರು ಶಿಕ್ಷಣ ಸಂಸ್ಥೆಯಲ್ಲಿ ವಿವಿಧ ಸಂಘಗಳ ಉದ್ಛಾಟನೆ ನೆರವೇರಿಸಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ| ಇಕ್ಬಾಲ್ ಅಹಮ್ಮದ್ ಯು.ಟಿ.ಮಾತಾಡಿ ಪಠ್ಯೇತರ ಚಟುವಟಿಕೆಗಳ ಧ್ಯೇಯ ಮತ್ತು ಉದ್ದೇಶದ ಬಗ್ಗೆ ವಿದ್ಯಾರ್ಥಿನಿಯರಿಗೆ ತಿಳಿಸಿದರು.
ವಿವಿಧ ಸಂಘಗಳ ಸಂಘಟಕರಾದ, ಮಾನವಿಕ ಸಂಘದ ಸತ್ಯಾನಾರಾಯಣ ಭಟ್, ಸಾಹಿತ್ಯ ಸಂಘದ ಲತಾ, ವಾಣಿಜ್ಯ ಸಂಘದ ಉಷಾ, ಎನ್. ಎಸ್.ಎಸ್ ಸಂಘದ ಕುಮಾರಿ ಸೌಮ್ಯ , ವೇದಿಕೆಯಲ್ಲಿ ಉಪಸ್ಥಿತರಿದ್ದರು. ತೃತೀಯ ಬಿ.ಕಾಂ. ವಿದ್ಯಾರ್ಥಿನಿ ಮುಫೀದಾ ಸ್ವಾಗತಿಸಿದರು. ತೃತೀಯ ಬಿ.ಸಿ.ಎ ವಿದ್ಯಾರ್ಥಿನಿ ಬಶರಿಯಾ ಮೊನೆಕೋ ವಂದಿಸಿದರು. ದ್ವೀತಿಯ ಬಿ.ಸಿ.ಎ ವಿದ್ಯಾರ್ಥಿನಿ ಮನಾಲ್ ಕಾರ್ಯಕ್ರಮ ನಿರೂಪಿಸಿದರು.


