UN NETWORKS
ಪಜೀರು: ಹಿರಿಯರ ಪರಿಶ್ರಮದ ಫಲವಾಗಿ ಗ್ರಾಮಚಾವಡಿ – ಬೋಳಿಯಾರ್ ರಸ್ತೆ ಆಭಿವೃದ್ಧಿಯಾಗಿದ್ದು, ಇದೀಗ ಸಂಪೂರ್ಣ ಡಾಮರೀಕರಣಗೊಂಡ ರಸ್ತೆ ಶೀಘ್ರದಲ್ಲೇ ಉದ್ಘಾಟನೆಗೊಳ್ಳಲಿದ್ದು ಶಾಸಕರ ಆನುದಾನದಿಂದ ಗ್ರಾಮದ ಅಭಿರ್ವದ್ಧಿ ಕಾರ್ಯ ನಡೆದಿದೆ ಎಂದು ಪಜೀರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಭರತ್‍ರಾಜ್ ಶೆಟ್ಟಿ ಪಜೀರುಗುತ್ತು ಅಭಿಪ್ರಾಯಪಟ್ಟರು.
ಪಜೀರು ಗ್ರಾಮದ ಅಗರಿಮಾರ್ ಎಂಬಲ್ಲಿ ನೂತನ ಟ್ರಾನ್ಸ್ ಫಾರ್ಮರ್ ಹಾಗೂ ಗಿರಿಜಾ ಪೂಜಾರಿ ಎಂಬವರ ಮನೆಗೆ ದೀನ್ ದಯಾಳ್ ಯೋಜನೆಯಡಿ ವಿದ್ಯುತ್ ವ್ಯವಸ್ಥೆಗೆ ಚಾಲನೆ ನೀಡಿ ಮಾತಾಡಿದ ಆವರು ಬಂಟ್ವಾಳ ಅಥವಾ ಮಂಗಳೂರು ತಾಲೂಕು ನಡುವೆ ತೀರಾ ಕುಗ್ರಾಮವಾಗಿದ್ದ ಪಜೀರು ವೆಂಕಪ್ಪ ಕಾಜವ ಹಾಗೂ ತಾನು ಅಧ್ಯಕ್ಷತೆ ಅವಧಿಯಲ್ಲಿ ಗ್ರಾಮಚಾವಡಿ-ಬೋಳಿಯಾರ್ ರಸ್ತೆ ಸಂಪರ್ಕಿಸಲಾಗಿತ್ತು. ಈಗಾಗಲೇ ಸಚಿವ ಯು.ಟಿ.ಖಾದರ್ ಅವರು ಬಿ.ಸಿ.ರೋಡು-ಗ್ರಾಮಚಾವಡಿ ರಸ್ತೆ, ಸೇತುವೆ ನಿರ್ಮಾಣಕ್ಕೆ 3.40 ಕೋಟಿ ಅನುದಾನ ನೀಡಿದ್ದು ಸೇತುವೆ ಶೀಘ್ರ ಉದ್ಘಾಟನೆ ನಡೆಯಲಿದೆ. ರಸ್ತೆ ನಿರ್ಮಾಣಕ್ಕೆ ನಿರ್ಮಲ್ ಶೆಟ್ಟಿ ಅವರು ಬೆಲೆ ಬಾಳುವ ಜಮೀನು ಬಿಟ್ಟುಕೊಟ್ಟಿದ್ದಾರೆ ಎಂದರು.
ಪಜೀರ್ ಗ್ರಾಮ ಪಂಚಾಯತ್ ಅಧ್ಯಕ್ಷ ಸೀತಾರಾಮ ಶೆಟ್ಟಿ ಮಾತನಾಡಿ, ದೀನ್ ದಯಾಳ್ ಯೋಜನೆಯಡಿ ಆರ್ಥಿಕವಾಗಿ ತೀರಾ ಹಿಂದುಳಿದ ಮನೆಗೆ ಭರತ್ ರಾಜ್ ಶೆಟ್ಟಿ ಪಜೀರ್ ಅವರ ಪ್ರಯತ್ನದ ಫಲವಾಗಿ ವಿದ್ಯುತ್ ವ್ಯವಸ್ಥೆ ಮಾಡಲಾಗಿದೆ. ಎರಡು ಮನೆಗಳಿಗೆ ಶೌಚಗೃಹ ವ್ಯವಸ್ಥೆ ಶೀಘ್ರ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಹಿರಿಯಾದ ನಿರ್ಮಲ್ ಶೆಟ್ಟಿ ಟ್ರಾನ್ಸ್ ಫಾರ್ಮರ್ ಉದ್ಘಾಟಿಸಿದರು. ತಾಲೂಕು ಪಂಚಾಯತ್ ಸದಸ್ಯ ನವೀನ್ ಪಾದಲ್ಪಾಡಿ, ಪಜೀರ್ ಗ್ರಾಮ ಪಂಚಾಯತ್ ಸದಸ್ಯರಾದ ಫ್ಲೋರಿನ್ ಡಿ’ಸೋಜ, ಶೇಖರ್ ಬೀಜಗುರಿ, ಪ್ರೆಸಿಲ್ಲಾ ಡಿ’ಸೋಜ, ವೀಣಾ, ಲೈನ್‍ಮ್ಯಾನ್‍ಗಳಾದ ಸಾಗರ್, ರೊನಾಲ್ಡ್, ಸ್ಥಳೀಯರಾದ ನವೀನ್ ಅಗರೀಮಾರ್, ಹನೀಫ್, ಜಯ ಶೆಟ್ಟಿ, ದಾಮೋದರ ಗಟ್ಟಿ ಮೊದಲಾದವರು ಉಪಸ್ಥಿತರಿದ್ದರು.


