UN NETWORKS
ಉಳ್ಳಾಲ: ವಿದ್ಯುತ್ ಶಾಕ್ ತಗಲಿ ಶೀಟಿನ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕ ಮೃತಪಟ್ಟಿರುವ ಘಟನೆ ಉಳ್ಳಾಲದ ಸೈಯ್ಯದ್ ಮದನಿ ದರ್ಗಾ ವಠಾರದಲ್ಲಿ ಸೋಮವಾರ ಸಂಜೆ ವೇಳೆ ಸಂಭವಿಸಿದೆ.
ಇನೋಳಿ ಮಲಾರು ನಿವಾಸಿ ಯೂಸುಫ್ (22) ಮೃತರು. ಮಹಿಳಾ ಪ್ರಾರ್ಥನಾಲಯದ ಕಟ್ಟಡದ ಮೇಲಿನ ಭಾಗಕ್ಕೆ ಶೀಟ್ ಹಾಕುವ ಕೆಲಸಕ್ಕೆ ಗುತ್ತಿಗೆ ವಹಿಸಲಾಗಿತ್ತು. ಗುತ್ತಿಗೆದಾರರ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಯೂಸುಫ್ ಕೊನೆಯ ಶೀಟ್ ಹಾಕುವ ಸಂದರ್ಭ , ವಿದ್ಯುತ್ ತಂತಿಗೆ ತಗಲಿ ಶಾಕ್ ಉಂಟಾಗಿತ್ತು. ಕೂಡಲೇ ಅವರನ್ನು ತೊಕ್ಕೊಟ್ಟು ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ದಾರಿಮಧ್ಯೆ ಅವರು ಸಾವನ್ನಪ್ಪಿದ್ದಾರೆ. ಯೂಸುಫ್ ವಿವಾಹಿತರಾಗಿದ್ದು, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


