UN NETWORKS
ಉಳ್ಳಾಲ: ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ ಮಂಗಳೂರು ಇದರ ವತಿಯಿಂದ ರಾಷ್ಟ್ರೀಯ ಬಾಯಿ ಸ್ವಚ್ಛಾತಾ ದಿನದ ಅಂಗವಾಗಿ ಸೈಂಟ್ ಸೆಬಾಸ್ಟಿನ್ ಅನುದಾನಿತ ಹಿರಿಯ ಪ್ರಾಥಾಮಿಕ ಶಾಲೆ ಅಡಂಕುದ್ರು, ಪೆರ್ಮನ್ನೂರು ಮಂಗಳೂರು ಇಲ್ಲಿನ ವಿದ್ಯಾರ್ಥಿಗಳಿಗೆ ಬಾಯಿ ಆರೋಗ್ಯ ಮತ್ತು ಬಾಯಿ ಸ್ವಚ್ಛತೆಯ ಅಗತ್ಯತೆ ಬಗ್ಗೆ ದಂತ ಆರೋಗ್ಯ ಮಾಹಿತಿ ಶಿಬಿರ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪ್ರತಿಷ್ಠಾನದ ಕಾರ್ಯದರ್ಶಿ ಡಾ| ಮುರಲೀ ಮೋಹನ್ ಚೂಂತಾರು ಇವರು ಮಾತನಾಡುತ್ತಾ ಬಾಯಿಯ ಆರೋಗ್ಯ ದೇಹದ ಆರೋಗ್ಯಕ್ಕೆ ಅತೀ ಅಗತ್ಯ. ಬಾಯಿ ನಮ್ಮ ದೇಹದ ಹೆಬ್ಬಾಗಿಲು ಇದ್ದಂತೆ. ನಾವು ತಿನ್ನುವ ಆಹಾರ ಪಚನವಾಗಲು, ಮಾತನಾಡಲು ಮತ್ತು ಆತ್ಮವಿಶ್ವಾಸ ಹೆಚ್ಚಿಸಲು ಸುಂದರ ಸುದೃಡ ಹಲ್ಲುಗಳು ಅತೀ ಅಗತ್ಯ ಎಂದು ಅಭಿಪ್ರಾಯಪಟ್ಟರು.
ಬಾಯಿಯ ಶುಚಿತ್ವ ಮತ್ತು ಸ್ವಚ್ಚತೆ ಕಾಪಾಡಿಕೊಂಡಲ್ಲಿ ಆರೋಗ್ಯವಂತರಾಗಿ ದೇಶದ ಪ್ರಗತಿಗೆ ವಿದ್ಯಾರ್ಥಿಗಳು ಸಹಾಯ ಮಾಡಬಲ್ಲರು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಶಾಲೆಯ ಮುಖ್ಯ ಶಿಕ್ಷಕಿ ಲಿಡಿಯ ಡಿಸೋಜ, ಶಿಕ್ಷಕಿಯರಾದ ಕವಿತ, ಸುಮ, ಐರಿನ್ ಡಿಸೋಜ ಮುಂತಾದವರು ಈ ಶಿಬಿರದಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶಾಲಾ ಶಿಕ್ಷಕಿಯರಿಗೆ ಮತ್ತು ಶಾಲಾ ಗ್ರಂಥಾಲಯಕ್ಕೆ ದಂತ ಆರೋಗ್ಯದ ಬಗೆಗಿನ ಪರಿಪೂರ್ಣ ಮಾಹಿತಿ ಇರುವ ಸುರಕ್ಷಾ ದಂತ ಮಾರ್ಗದರ್ಶಿ ಪುಸ್ತಕವನ್ನು ಪ್ರತಿಷ್ಠಾನದ ವತಿಯಿಂದ ಉಚಿತವಾಗಿ ನೀಡಲಾಯಿತು. ಸುಮಾರು 40 ವಿದ್ಯಾರ್ಥಿಗಳು ಈ ಶಿಬಿರದ ಪ್ರಯೋಜನ ಪಡೆದರು.


