UN NETWORKS
ಉಳ್ಳಾಲ: ಬಡ ವಿದ್ಯಾರ್ಥಿಗಳು ಅವಿಧ್ಯಾವಂತರಾಗಬರದು ಎಂಬ ಉದ್ಯೇಶದಿಂದ ಸರಕಾರ ಹಲವಾರು ಸೌಕರ್ಯಗಳನ್ನು ಉಚಿತವಾಗಿ ನೀಡಿದ್ದು ವಿದ್ಯಾರ್ಥಿಗಳು ಸದುಪಯೋಗಗೊಳಿಸಬೇಕು ಎಂದು ಬೆಳ್ಮ ಗ್ರಾಮ ಪಂಚಾಯತ್ ಅಧ್ಯಕ್ಷ ವಿಜಯ ಕೃಷ್ಣ ಪೂಜಾರಿ ಹೇಳಿದರು.
ಅವರು ದೇರಳಕಟ್ಟೆಯ ದ.ಕ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ರಾಜ್ಯ ಸರಕಾರದ ಶೂ ಭಾಗ್ಯ ಯೋಜನೆಯ ಶೂ ವಿತರಿಸಿ ಮಾತನಾಡಿದರು.ಶಾಲಾ ಕೊಠಡಿ ಇಲ್ಲದ ಕಾಲವಿತ್ತು ಎಂದು ಎಲ್ಲಾ ಕೊರತೆಗಳು ದೂರವಾಗಿದೆ ಸೌಕರ್ಯಗಳು ಹೆಚ್ಚಾಗಿದೆ ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಉಪಯೋಗಿಸಿ ಎಂದು ಹೆಳಿದರು.
ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಬಿ.ಎ ಖಾದರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.ಮಂಗಳೂರು ತಾ.ಪಂ ಸದಸ್ಯೆ ನೂರಜಾಹನ್, ಬೆಳ್ಮ ಗ್ರಾ.ಪಂ ಅಧ್ಯಕ್ಷ ವಿಜಯ ಕೃಷ್ಣ ಪೂಜಾರಿ, ಉಪಾಧ್ಯಕ್ಷ ಬಿ.ಎಂ ಅಬ್ದುಲ್ ಸತ್ತಾರ್, ಸದಸ್ಯ ಕಬೀರ್.ಡಿ, ಉಪಾಧ್ಯಕ್ಷೆ ಜಯಂತಿ, ಉದ್ಯಮಿ ಪಿ.ಎಂ ಇಬ್ರಾಹೀಂ ಕತ್ತಾರ್, ಹಳೇ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಐ.ಖಾದರ್ ಉಪಸ್ಥಿತರಿದರು.
ಶಾಲಾ ಮುಖ್ಯ ಶಿಕ್ಷಕಿ ಸಿಲ್ಲಿಯಿಯ ಬಿ.ಎಂ ಮೆನೆಜೇಸ್ ಸ್ವಾಗತಿಸಿದರು.ಶಿಕ್ಷಕಿ ಮಮತ ಎ. ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಮೇಬಲ್ ವೇಗಸ್ ವಂದಿಸಿದರು.


