UN NETWORKS
ಮಂಜೇಶ್ವರ: ಅರ್ಬುದ ರೋಗದಿಂದ ಬಳಲುತ್ತಿರುವ ವರ್ಕಾಡಿ ಗ್ರಾಮದ ತೋಕೆ ನಿವಾಸಿ ಹರಿಶ್ಚಂದ್ರ ಶೆಟ್ಟಿಗಾರ್ ಪತ್ನಿ ಗೀತಾ ಶೆಟ್ಟಿಗಾರ್ ಅವರಿಗೆ ಮಂಜೇಶ್ವರದ ಜೈ ಶ್ರೀ ರಾಮ್ ಸಮಾಜ ಸೇವಾ ಸಂಸ್ಥೆ ತನ್ನ 15ನೇ ಯೋಜನೆಯ ಸಹಾಯ ಹಸ್ತ ನೀಡಿದರು.
ತೌಡುಗೋಳಿ ಸಮೀಪದ ಗೀತಾ ಅವರ ಪತಿ ಕೂಲಿ ಕೆಲಸ ಮಾಡುತ್ತಾ ಮೂರು ಮಕ್ಕಳ ವಿದ್ಯಾಭ್ಯಾಸ, ದಿನ ನಿತ್ಯದ ಮನೆ ಖರ್ಚು, ಪತ್ನಿಯ ಔಷಧಿಯ ಖರ್ಚು ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಮಗಳು ಕಲಿಕೆಯಲ್ಲಿ ಮುಂದಿದ್ದರೂ ಆರ್ಥಿಕ ಸಮಸ್ಯೆಯಿಂದಾಗಿ ವಿಧ್ಯಾಭ್ಯಾಸ ಅರ್ಧದಲ್ಲಿ ಮೊಟಕುಗೊಳಿಸಿದ್ದರು. ಇದೀಗ ಮನೆ ಕೆಲಸ ಪೂರೈಸಿ ತೆರಳುತ್ತಿದ್ದಾರೆ. ಅವರ ಸಂಕಷ್ಟಮಯ ಬದುಕಿನ ಬವಣೆಯನ್ನು ಅರಿತ ಜೈ ಶ್ರೀ ರಾಮ್ ಸಮಾಜ ಸೇವಾ ಸಂಸ್ಥೆಯು ತಮ್ಮ ಸದಸ್ಯರಿಂದಲೇ ಸಂಗ್ರಹಿಸಿದ ಮೊತ್ತವನ್ನು ಭಾನುವಾರ ಗೀತಾ ಅವರ ಮನೆಗೆ ತೆರಳಿ ಪತಿ ಹರಿಶ್ಚಂದ್ರ ಶೆಟ್ಟಿಗಾರರಿಗೆ ಸಂಸ್ಥೆಯ ಗೌರವ ಮಾರ್ಗದರ್ಶಕ ಶ್ರೀ ರಾಜ ಬೆಳ್ಚಪ್ಪಾಡ ಮನೆ ದೇವರಲ್ಲಿ ಪ್ರಾರ್ಥಿಸಿ 10ಸಾವಿರ ರೂ. ನೀಡಿದರು.
ಸಂಸ್ಥೆಯ ಪಧಾಧಿಕಾರಿಗಳಾದ ಆಶಾ ಲೋಕೇಶ್ ಮಾಡ, ಗಿರಿ ವೀರನಗರ, ರತನ್ ಕುಮಾರ್ ಹೊಸಂಗಡಿ, ಪ್ರದೀಪ್ ಮುರತನೆ, ಲೋಕೇಶ್ ಮಾಡ, ಸುಕೇಶ್ ಬೆಜ್ಜ, ಸತ್ಯ ವೀರ ನಗರ, ಸುರೇಶ್ ಶೆಟ್ಟಿ ಪರಂಕಿಲ, ಕಿಶೋರ್ ಭಗವತಿ, ಗಿರೀಶ್ ಮುನ್ನೀಪ್ಪಾಡಿ, ರೂಪೇಶ್ ಜೋಡುಕಲ್ಲು, ರಾಜೇಶ್ ಅಂಗಡಿಪದವು, ತುಳಸಿದಾಸ್ ಮಂಜೇಶ್ವರ, ದೀಪಕ್ ರಾಜ್ ಉಪ್ಪಳ, ವಸಂತ್ ಶೆಟ್ಟಿಗಾರ್ ಬೋರ್ಕಳ ಹಾಗೂ ಸಂದೇಶ್ ಕಡಂಬಾರ್ ಕಟ್ಟೆ ಉಪಸ್ಥಿತರಿದ್ದರು.


