UN NETWORKS
ಉಳ್ಳಾಲ: ಅಧ್ಯಾಪನಾ ವೃತ್ತಿ ಅತ್ಯಂತ ಶ್ರೇಷ್ಠವಾದ ವೃತ್ತಿಯಾಗಿದ್ದು, ನಾನು ಆಧ್ಯಾಪಕನಾಗಿ, ನೃತ್ಯ ಗುರುವಾಗಿ ಎರಡೂ ಕ್ಷೇತ್ರದಲ್ಲೂ ಅಸಂಖ್ಯಾತ ಶಿಷ್ಯರನ್ನು ಪಡೆಯುವ ಮೂಲಕ ಜೀವನದಲ್ಲಿ ಕೃತಾರ್ಥನಾಗಿದ್ಧೇನೆ ಎಂದು ಶಾಂತಲಾ ಪ್ರಶಸ್ತಿ ಪುರಸ್ಕೃತ ಕರ್ನಾಟಕ ಕಲಾತಿಲಕ ನಾಟ್ಯಾಚಾರ್ಯ ಉಳ್ಳಾಲ ಮೋಹನ್ ಕುಮಾರ್ ಅಭಿಪ್ರಾಯಪಟ್ಟರು.
ಗುರುದಶಮಿ ಪ್ರಯುಕ್ತ ಉಳ್ಳಾಲ ಮೊಗವೀರ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ `ಮಂತ್ರ ನಾಟ್ಯಕಲಾ ಗುರುಕುಲ’ಉಳ್ಳಾಲ ಇದರ ಆಶ್ರಯದಲ್ಲಿ ಮೊಗವೀರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಶಾಲಾ ಶಿಕ್ಷಕರಿಗೆ ಗುರುವಂದನೆ ಹಾಗೂ ನೃತ್ಯ ಕಾರ್ಯಕ್ರಮ `ಕೃತಾರ್ಥ` ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾನಾಡಿದರು
.ನನ್ನ ಪ್ರಾರಂಭದ ಜೀವನ ಅಧ್ಯಾಪಕನಾಗಿ ಪ್ರಾರಂಭಿಸಿದ್ದೆ. ಅದರಲ್ಲೂ ಉಳ್ಳಾಲ ಮೊಗವೀರ ಶಾಲಾ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿರುವಾಗ ಮತ್ತು ನಿವೃತ್ತಿಯ ಬಳಿಕವೂ ದಾರಿಯಲ್ಲಿ ಸಿಗುವ ಶಿಷ್ಯ ವೃಂದ ನೀಡುತ್ತಿದ್ದ ಗೌರವ ಮನಸ್ಸಿನಲ್ಲಿ ಇನ್ನೂ ಅಚ್ಚಳಿಯದೆ ಉಳಿದಿದೆ. ಶಿಕ್ಷಕನಾಗಿ ಭರತನಾಟ್ಯ ನೃತ್ಯ ಕಲೆಯನ್ನು ಪ್ರವೃತ್ತಿಯನ್ನಾಗಿ ಸ್ವೀಕರಿಸಿದ ಬಳಿಕವೂ ಅಸಂಖ್ಯಾತ ಶಿಷ್ಯ ವೃಂದವನ್ನು ಪಡೆದಿದ್ದು, ಕಳೆದ 60 ವರ್ಷದ ಕಲಾ ಜೀವನದಲ್ಲಿ ಶಿಷ್ಯರಾಗಿದ್ದ ಸುಮಾರು 60ಕ್ಕೂ ಹೆಚ್ಚು ಶಿಷ್ಯರು ಮಂಗಳೂರು ಸೇರಿದಂತೆ ದೇಶ ವಿದೇಶಗಳಲ್ಲಿ ನೃತ್ಯ ಶಿಕ್ಷಕರಾಗಿ ನೃತ್ಯ ಪರಂಪರೆಯನ್ನು ಮುಂದುವರೆಸುತ್ತಿದ್ದು, ಅವರಲ್ಲಿ ಒಬ್ಬರಾಗಿರುವ ಕೃತಾರ್ಥ ಕಾರ್ಯಕ್ರಮವನ್ನು ಸಂಘಟಿಸಿರುವ ಮಂತ್ರ ನಾಟ್ಯಕಲಾ ಗುರುಕುಲವನ್ನು ಸ್ಥಾಪಿಸಿದ್ದ ಶ್ರಾವಣ್ ಉಳ್ಳಾಲ್ ಅವರ ಐದು ವರ್ಷದ ಕಾರ್ಯಕ್ರಮಗಳಲ್ಲೂ ಭಾಗಿಯಾಗಿ ಆಶೀರ್ವಾದ ನೀಡಿದ್ದು ಮುಂದೆಯೂ ಈ ಸಂಸ್ಥೆ ಇನ್ನಷ್ಟು ಬೆಳಗಲಿ ಎಂದು ಹಾರೈಸಿದರು.
ಅಬ್ಬಕ ಉತ್ಸವ ಸಮಿತಿಯ ಅಧ್ಯಕ್ಷ ದಿನಕರ ಉಳ್ಳಾಲ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಮೊಗವೀರ ಸಂಘ ಉಳ್ಳಾಲದ ಮಾಜಿ ಅಧ್ಯಕ್ಷ ಸದಾನಂದ ಬಂಗೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮೊಗವೀರ ಹಿರಿಯ ಪ್ರಾಥಮಿಕ ಶಾಲಾ ಹಳೆ ವಿದ್ಯಾರ್ಥಿ ಸಂಘ ಮತ್ತು ಬ್ರದರ್ಸ್ ಸ್ಪೋಟ್ರ್ಸ್ ಕ್ಲಬ್ನ ಅಧ್ಯಕ್ಷ ಮಧುರಾಜ್ ಅಮೀನ್, ಉಳ್ಳಾಲ ಉಳಿಯ ಗಾಣಿಗರ ಸಂಘದ ಅಧ್ಯಕ್ಷ ಪ್ರಕಾಶ್ ಎಚ್, ಉಳ್ಳಾಲ ವೀರ ಭದ್ರ ದುರ್ಗಾ ದೇವಸ್ಥಾನದ ಕಾರ್ಯದರ್ಶಿ ಐತಪ್ಪ ಶೆಟ್ಟಿಗಾರ್, ಪರಿಸರ ಪ್ರೇಮಿ ಮಾಧವ ಉಳ್ಳಾಲ್, ನಾರಾಯಣ ಗುರು ಬಿಲ್ಲವ ಸೇವಾ ಸಂಘ ಉಳ್ಳಾಲದ ಅಧ್ಯಕ್ಷ ಯು.ಕೆ.ಗೋಪಾಲ್, ವಿಜಯ್ ಕುಮಾರ್ ಬಸ್ತಿಪಡ್ಪು ಉಳ್ಳಾಲ್, ಜಾಗೃತ ವಿವಿದೊದ್ದೇಶ ಸಹಕಾರಿ ಸಂಘದ ಪ್ರಭಾರ ಪ್ರಧಾನ ವ್ಯವಸ್ಥಾಪಕಿ ಮಲ್ಲಿಕಾ ಸುಧೀರ್, ಎನ್.ಎಂ.ಪಿ.ಟಿ.ಯ ರವಿರಾಜ್ ಉಳ್ಳಾಲ್, ಮಾರುತಿ ಯುವಕ ಮಂಡಲ ಇದರ ಅಧ್ಯಕ್ಷ ಅಶ್ವಿನ್ ಕೋಟ್ಯಾನ್, ಮಂತ್ರ ನಾಟ್ಯಕಲಾ ಗುರುಕುಲದ ಅಧ್ಯಕ್ಷೆ ಶಕೀಲಾ ಜನಾರ್ಧನ್, ಶೈನಾ ಶ್ರವಾಣ್ ಉಳ್ಳಾಲ್, ಬಬಿತಾ ಕಿರಣ್ ಉಳ್ಳಾಲ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮೊಗವೀರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದ್ದ ಉಳ್ಳಾಲ ಮೋಹನ ಕುಮಾರ್, ಗಿರಿಜ ಟೀಚರ್, ಜಾನಕಿ ಪುತ್ರನ್ ಟೀಚರ್,ಎಸ್.ವಿಶಾಲ ಟೀಚರ್, ಸುಶೀಲ ಟೀಚರ್, ವೇದಾವತಿ ಟೀಚರ್, ಶೋಭಾ ಸುವರ್ಣ ಟೀಚರ್, ವೀಣಾ ಕುಮಾರಿ ಟೀಚರ್, ಶಶಿಕಲಾ ಎಮ್. ಟೀಚರ್, ಪಾವನಾ ಟೀಚರ್, ರಾಜೀವಿ ಟೀಚರ್, ಫಾತಿಮಾ ಯು. ಟೀಚರ್, ಭವಾನಿ ಶಂಕರ್, ಮಾದಪ್ಪ ಮಾದರ, ವನಜಾಕ್ಷಿ ಗಂಗಾದರ್, , ಮಮತ ಟೀಚರ್, ಮಂತ್ರ ನಾಟ್ಯಕಲಾ ಗುರುಕುಲದ ನೃತ್ಯಗುರು ವಿದ್ವಾನ್ ಶ್ರಾವಣ್ ಉಳ್ಳಾಲ್ ಸ್ವಾಗತಿಸಿದರು. ಉಪನ್ಯಾಸಕ ಅರುಣ್ ಕುಮಾರ್ ಉಳ್ಳಾಲ್ ಕಾರ್ಯಕ್ರಮ ನಿರ್ವಹಿಸಿದರು. ಕಿರಣ್ ಉಳ್ಳಾಲ್ ವಂದಿಸಿದರು.


