UN NETWORKS
ತೊಕ್ಕೊಟ್ಟು: ಬ್ಯಾಂಕಿಂಗ್ ವ್ಯವಹಾರ ಕ್ಷೇತ್ರದಲ್ಲಿ ತನ್ನದೇ ಆದ ಸೇವೆ, ಸೌಲಭ್ಯಗಳಿಂದ ಹೆಸರುಗಳಿಸಿದ ಫೆಡರಲ್ ಬ್ಯಾಂಕ್ ಜಾಗತಿಕ ಮಟ್ಟದಲ್ಲಿ ಛಾಪು ಮೂಡಿಸಿರುವುದು ತುಂಬಾ ಸಂತೋಷಕರ, ಈ ದೆಶೆಯಲ್ಲಿ ತೊಕ್ಕೊಟ್ಟಿನ ಶಾಖೆ ಇನ್ನಷ್ಟು ಬೆಳೆಯಲಿ ಎಂದು ತೊಕೊಟ್ಟು ಡಿವೈನ್ ರಿಟ್ರೇಟ್ ಕೇಂದ್ರದ ಧರ್ಮಗುರು ವಂ| ಫಾ| ಜೋಸೆಫ್ ವನಿಯಂತಾರ ಅಭಿಪ್ರಾಯಪಟ್ಟರು.
ಅವರು ಫೆಡರಲ್ ಬ್ಯಾಂಕ್ ತೊಕ್ಕೋಟ್ಟು ಶಾಖೆಯ 6ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಉಳ್ಳಾಲ ನಗರ ಸಭೆಯ ಪೌರಾಯುಕ್ತೆ ವಾಣಿ ವಿ.ಆಳ್ವ ಫೆಡರಲ್ ಬ್ಯಾಂಕ್ ತೊಕ್ಕೋಟ್ಟು ಶಾಖೆಯ ಸೇವೆಯನ್ನು ಶ್ಲಾಘಿಸಿದರು. ತೊಕ್ಕೊಟ್ಟಿನ ಉದ್ಯಮಿ ಇಸ್ಮಾಯಿಲ್, ಫೆಡರಲ್ ಬ್ಯಾಂಕಿನ ಪ್ರಾದೇಶಿಕ ಮುಖ್ಯಸ್ಥರಾದ ಶ್ರೀಕಾಂತ್.ಕೆ ರವರು, ಫೆಡರಲ್ ಬ್ಯಾಂಕಿನ ಪ್ರಾದೇಶಿಕ ವಲಯದಲ್ಲಿ ಒಟ್ಟು 7 ಜಿಲ್ಲೆಗಳು ಒಳಪಟ್ಟಿದ್ದು 26 ಶಾಖೆಗಳನ್ನು ಹೊಂದಿದ್ದು, ಬ್ಯಾಂಕಿಗೆ 70 ವರ್ಷಗಳ ಇತಿಹಾಸವಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಅನಿವಾಸಿ ಭಾರತೀಯರಿಗೆ ಕ್ಲಪ್ತ ಸಮಯಕ್ಕೆ ಸೇವೆ ಒದಗಿಸುತ್ತಿದ್ದು, ಅಂತರ್ ಜಾಲದಲ್ಲಿ ನೆಟ್ ಬ್ಯಾಂಕಿಂಗ್ ಆದುನಿಕರಣಗೊಳಿಸಿದ ದೇಶದಲ್ಲಿಯೇ ಪ್ರಥಮ ಬ್ಯಾಂಕ್ ಆಗಿದೆ ಎಂದು ವಿವರಿಸಿದರು.
ಬ್ಯಾಂಕ್ ನ ಸಿಬ್ಬಂದಿ ಅಕ್ಷಯ್ ರವರು ಫೆಡರಲ್ ಸೌಲಭ್ಯಗಳ ಮಾಹಿತಿ ನೀಡಿದರು. ಫೆಡರಲ್ ಬ್ಯಾಂಕಿನ ತೊಕ್ಕೋಟ್ಟು ಶಾಖಾ ಪ್ರಬಂಧಕ ರೋಶನ್ ಪಿರೇರ ಸ್ವಾಗತಿಸಿ ಪ್ರಸ್ತಾವನೆಗೈದರು. ಕ್ಷಮಾ ವಂದಿಸಿದರು. ಪ್ರವೀಣ್ ಎಸ್. ಕುಂಪಲ ಕಾರ್ಯಕ್ರಮ ನಿರೂಪಿಸಿದರು.


