Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
UllalavaniUllalavani
ಅಂಬ್ಲಮೊಗರು

ಅಂಬ್ಲಮೊಗರು:2018-19 ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆ

UllalaVaniBy UllalaVaniJuly 17, 2018No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

UN NETWORKS

ಅಂಬ್ಲಮೊಗರು: ಅಂಬ್ಲಮೊಗರು ಗ್ರಾಮದ ತಿಲಕನಗರದಲ್ಲಿ ನಗರಪ್ರದೇಶದ ರೀತಿಯಲ್ಲಿ ಸರಕಾರದ ವಸತಿ ಸಂಕೀರ್ಣ ರಚಿಸಲು ಉದ್ದೇಶಿಸಲಾಗಿದ್ದು, ಇದು ರಾಜ್ಯದಲ್ಲೇ ಪ್ರಥಮ ಯೋಜನೆಯಾಗಿದೆ ಎಂದು ಅಂಬ್ಲಮೊಗರು ಗ್ರಾಮ ಪಂಚಾಯಿತಿನ ಅಧ್ಯಕ್ಷ ಎಸ್.ಎಂ ರಫೀಕ್ ಹೇಳಿದರು.ಅವರು ಅಂಬ್ಲಮೊಗರು ಗ್ರಾಮ ಪಂಚಾಯಿತಿನ 2018-19 ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತಿಲಕನಗರದಲ್ಲಿ ವಸತಿ ಸಂಕೀರ್ಣ : ಅಂಬ್ಲಮೊಗರು ಗ್ರಾಮದ ತಿಲಕನಗರದಲ್ಲಿ ಸರಕಾರದ ವಸತಿ ಸಂಕೀರ್ಣ ರಚಿಸುವ ಉದ್ದೇಶವನ್ನು ಸಚಿವರು ಇಟ್ಟುಕೊಂಡಿದ್ದಾರೆ. ಜಾಗವನ್ನು ಸ್ಲಂ ಬೋರ್ಡಿಗೆ ಸೇರಿಸುವ ಮೂಲಕ ನಗರ ವ್ಯಾಪ್ತಿಗಳಲ್ಲಿ ಬರುವಂತಹ ವಸತಿ ಸಂಕೀರ್ಣ ನಿರ್ಮಿಸಲಾಗುವುದು. ಪ್ರತಿಯೊಂದು ಮನೆಯಲ್ಲಿ ಎರಡು ಬೆಡ್ ರೂಂ , ಹಾಲ್ ಮತ್ತು ಅಡುಗೆ ಕೋಣೆಯಿರುತ್ತದೆ. ಕರ್ನಾಟಕದಲ್ಲೇ ಇದು ಮೊದಲ ಯೋಜನೆಯಾಗಿದೆ. ಗ್ರಾಮಸ್ಥರಿಗೆ ಇದೊಂದು ಒಳ್ಳೆಯ ಅವಕಾಶ ಎಂದಿದ್ದಾರೆ.

ಬೀದಿ ದೀಪ ಸಮಸ್ಯೆ : ಗ್ರಾಮದಲ್ಲಿ ಬೀದಿ ದೀಪಗಳ ಸಮಸ್ಯೆ ಎದುರಾಗುತ್ತಿದೆ. ಇದರಿಂದ ಸಂಜೆ ನಂತರ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ ಅನ್ನುವ ಮಹಿಳೆಯ ಪ್ರಶ್ನೆಗೆ ಉತ್ತರಿಸಿದ ಅಭಿವೃದ್ಧಿ ಅಧಿಕಾರಿ ಕೃಷ್ಣ ನಾಯಕ್ ಸಾಧ್ಯವಾದಷ್ಟು ಬೀದಿ ದೀಪಗಳು ದುರಸ್ತಿಯಲ್ಲಿರುವಂತೆ ನೋಡಲಾಗುತ್ತಿದೆ. ಮಳೆಗಾಲವಾಗಿರುವುದರಿಂದ ಹೆಚ್ಚಾಗಿ ಹಾಳಾಗುತ್ತಿದೆ. ಕೂಡಲೇ ದುರಸ್ತಿಪಡಿಸಲು ಸಾಧ್ಯವಾಗುತ್ತಿಲ್ಲ ಅಂದರು.

ವೀರರಾಣಿ ಅಬ್ಬಕ್ಕ ಆಟದ ಮೈದಾನಕ್ಕೆ ಕಾರ್ಯ ಸ್ಥಗಿತವಾಗಿದೆ. ಗ್ರಾ.ಪಂ ಆಡಳಿತ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಗ್ರಾಮಕ್ಕೆ ಆಟದ ಮೈದಾನ ಅಗತ್ಯವಿದೆ ಅನ್ನುವ ಗ್ರಾಮಸ್ಥ ಇಬ್ರಾಹಿಂ ಪ್ರಶ್ನೆಗೆ ಉತ್ತರಿಸಿದ ಅಧಿಕಾರಿಗಳು ಕಂಡಿಲ ಭಾಗದಲ್ಲಿ ಮೈದಾನಕ್ಕೆ ಜಾಗ ಮಂಜೂರಾಗಿ ಬಂದಲ್ಲಿ ಶೀಘ್ರವೇ ಪಂಚಾಯಿತಿ ಅದರ ಕಾರ್ಯವನ್ನು ಮುಂದುವರಿಸುತ್ತದೆ. ಈವರೆಗೂ ಜಾಗದ ಕಡತಗಳು ಪಂಚಾಯಿತಿಗೆ ಹಸ್ತಾಂತರವಾಗಿಲ್ಲ. ಈ ನಡುವೆ ಖಾಸಗಿಯವರು ಜಾಗದ ತಕರಾರಿನಿಂದ ಹೈಕೋರ್ಟಿನ ಮೊರೆ ಹೋಗಿದ್ದಾರೆ. ನ್ಯಾಯಾಲಯದಲ್ಲಿ ದಾವೆ ಇರುವುದರಿಂದ ಈ ಕುರಿತು ಪಂಚಾಯಿತಿ ಯಾವುದೇ ನಿರ್ಣಯ ಕೈಗೊಳ್ಳಲು ಸಾಧ್ಯವಿಲ್ಲ . ಅಂಬ್ಲಮೊಗರು ಸರಕಾರಿ ಹೈಸ್ಕೂಲಿಗೆ ಜಿಲ್ಲಾಧಿಕಾರಿ ಮತ್ತು ಪಂಚಾಯಿತಿ ಗುರುತಿಸಲಾದ ಜಾಗಕ್ಕೆ ಸಂಬಂಧಪಟ್ಟು ದಾವೆ ನ್ಯಾಯಾಲಯದಲ್ಲಿದೆ. ಇದರಲ್ಲಿ ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರು, ತಹಶೀಲ್ದಾರ್, ಡಿಡಿಪಿಐ ಮತ್ತು ಬಿಇಒ ಅವರನ್ನು ಒಳಗೊಂಡಿದೆ. ಗ್ರಾಮಸಭೆಯಲ್ಲಿ ವಿಚಾರದ ಕುರಿತು ಮಾತನಾಡುವ ಬದಲು ಶಾಲಾ ಅಭಿವೃದ್ಧಿ ಸಮಿತಿಯಲ್ಲಿ ಮಾತನಾಡಿ ಮುಂದಿನ ತೀರ್ಮಾನ ಕೈಗೊಳ್ಳಬೇಕಿದೆ ಎಂದು ಪಂ.ಅಧ್ಯಕ್ಷರು ಸಲಹೆ ನೀಡಿದರು. ಮದಕ ಜಂಕ್ಷನ್ನಿನಲ್ಲಿ ರಿಕ್ಷಾ ನಿಲ್ದಾಣ ನಿರ್ಮಿಸಿಕೊಡಬೇಕೆಂಬ ರಿಕ್ಷಾ ಚಾಲಕರ ಮನವಿಗೆ ಸ್ಥಳೀಯ ಮನೆಯೊಂದರ ಮಾಲೀಕರ ಆಕ್ಷೇಪಣೆಯಿದೆ. ಮನೆಯಲ್ಲಿ ಹೆಣ್ಮಕ್ಕಳಿರುವ ಸಮಯದಲ್ಲಿ ಮನೆ ಎದುರುಗಡೆ ರಿಕ್ಷಾ ನಿಲ್ದಾಣ ರಚಿಸಲು ವಿರೋಧಿಸಿದ್ದಾರೆ. ಅದಕ್ಕಾಗಿ ಜಂಕ್ಷನ್ನಿನ ಮೇಲಿನ ಸ್ಥಳದಲ್ಲಿ ಎರಡು ರಿಕ್ಷಾಗಳನ್ನು ನಿಲ್ಲಿಸುವ ವ್ಯವಸ್ಥೆ ಮಾಡಲು ಪಂಚಾಯಿತಿ ಸಿದ್ಧ ಎಂದು ಅಧ್ಯಕ್ಷರು ವಿಶ್ವಾಸ ವ್ಯಕ್ತಪಡಿಸಿದರು.

ಕೆರೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು : ಗ್ರಾಮದಲ್ಲಿ ಒಂಭತ್ತು ಕೆರೆಗಳಿವೆ. ಅಂತರ್ಜಲ ಹೆಚ್ಚಿಸುವ ಉದ್ದೇಶದಿಂದ ಸಚಿವರು ಕೆರೆ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಈ ಪೈಕಿ ಬಸ್ತಿಕಟ್ಟೆ ಕೆರೆಯ ಅಭಿವೃದ್ಧಿಗೆ ರೂ.24.97 ಲಕ್ಷ ಅನುದಾನ ಮಂಜೂರುಗೊಳಿಸಿದ್ದಾರೆ. ಶೇ.85 ಕಾಮಗಾರಿ ಪೂರ್ಣಗೊಳಿಸಿದ್ದಾರೆ. ಮುಂದೆ ವಾಡಕೆರೆ ಅಭಿವೃದ್ಧಿಗೆ ಮೂಡ ಸಂಬಂಧಿಸಿದ ಅನುದಾನ ಮಂಜೂರುಗೊಳಿಸುವ ಉದ್ದೇಶ ಇಟ್ಟುಕೊಂಡಿದ್ದಾರೆ. ಗ್ರಾಮಸ್ಥರು ಸಹಕರಿಸಿದಲ್ಲಿ ನೀರಿನ ಅಭಾವದಿಂದ ಪಾರಾಗಲು ಸಾಧ್ಯ.

ಇಂಗುಗುಂಡಿಗೆ ಹೆಚ್ಚಿನ ಆದ್ಯತೆ : ಗ್ರಾಮದಲ್ಲಿ ಇಂಗುಗುಂಡಿ ರಚಿಸಲು ಹೆಚ್ಚಿನ ಪ್ರೋತ್ಸಾಹವನ್ನು ನೀಡಲಾಗುತ್ತಿದೆ. ಇಂಗುಗುಂಡಿ ರಚಿಸುವ ಮನೆಮಂದಿಗೆ ಸೂಕ್ತ ದಾಖಲೆಗಳಿದ್ದಲ್ಲಿ ರೂ.14,000 ಸಹಾಯಧನ ವಿತರಿಸಲಾಗುವುದು. ಗುಂಡಿ ರಚಿಸುವ ಮುನ್ನವೇ ಅರ್ಜಿ ಸಲ್ಲಿಸಬೇಕಿದೆ. ಜಿಪಿಎಸ್ ಪ್ರಕ್ರಿಯೆ ನಂತರ ಸಹಾಯಧನ ವಿತರಿಸಲಾಗುವುದು ಎಂದು ಅಭಿವೃದ್ಧಿ ಅಧಿಕಾರಿ ಕೃಷ್ಣ ನಾಯಕ್ ತಿಳಿಸಿದರು.
ನೋಡೆಲ್ ಅಧಿಕಾರಿಯಾಗಿ ಶಿಕ್ಷಣ ಇಲಾಖೆಯ ದುರ್ಗಾಲತಾ ಉಪಸ್ಥಿತರಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಧನಲಕ್ಷ್ಮೀ ಗಟ್ಟಿ, ಗ್ರಾ.ಪಂ ಅಧ್ಯಕ್ಷ ಎಸ್.ಎಂ ರಫೀಕ್, ಉಪಾಧ್ಯಕ್ಷೆ ಯಶೋಧಾ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...
Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಉಳ್ಳಾಲದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಕಬಡ್ಡಿ ತರಬೇತಿ ಶಿಬಿರ

March 17, 2026

ಭಕ್ತಿ ಶ್ರದ್ಧೆಯ ಆರಾಧನೆ,ದಾನ,ಧರ್ಮಗಳ ಆಧಾರದಡಿ ಕ್ಷೇತ್ರದ ಶಕ್ತಿ ಬೆಳಗುತ್ತದೆ; ಕೆ.ಆರ್.ಚಂದ್ರ

March 17, 2026

ಮಂಗಳೂರು ವಿವಿಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

March 17, 2026
Leave A Reply

Advertise
ಸಂಪರ್ಕಿಸಿ

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025

ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನೇತ್ರಾ ತಪಾಸಣಾ ಶಿಬಿರ

December 6, 2025

ನೂತನ ಅತ್ಯಾಧುನಿಕ ಫಿಸಿಯೋಥೆರಪಿ ಚಿಕಿತ್ಸಾ ಕ್ಲಿನಿಕ್ ಉದ್ಘಾಟನೆ

November 12, 2025
suddi

ಮೂಡಬಿದ್ರೆ ಪೊಲೀಸ್ ಇನ್ಸ್‌ಪೆಕ್ಟರ್ ಸಂದೇಶ್ ಅಮಾನತು

By UllalaVaniMarch 17, 20260

ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಅವರ ಆದೇಶದಂತೆ ಮೂಡಬಿದ್ರೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸಂದೇಶ್ ಅವರನ್ನು ಅಮಾನತು ಮಾಡಲಾಗಿದೆ.…

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

ದ್ವಿತೀಯ ಪಿಯು ಪರೀಕ್ಷೆಯ ಮೌಲ್ಯಮಾಪನ ಬಹಿಷ್ಕಾರಕ್ಕೆ ಉಪನ್ಯಾಸಕರ, ಪ್ರಾಂಶುಪಾಲರ ಸಂಘ ನಿರ್ಧಾರ

March 17, 2026

ಉಳ್ಳಾಲದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಕಬಡ್ಡಿ ತರಬೇತಿ ಶಿಬಿರ

March 17, 2026

ಭಕ್ತಿ ಶ್ರದ್ಧೆಯ ಆರಾಧನೆ,ದಾನ,ಧರ್ಮಗಳ ಆಧಾರದಡಿ ಕ್ಷೇತ್ರದ ಶಕ್ತಿ ಬೆಳಗುತ್ತದೆ; ಕೆ.ಆರ್.ಚಂದ್ರ

March 17, 2026
1 2 3 … 1,836 Next
Automatic YouTube Gallery

ಕಾಡು ಬೆಂಕಿಯಿoದ ನಾಶವಾದ ಸಸ್ಯ-ಜೀವಿಗಳಿಗೆ ಶ್ರದ್ಧಾಂಜಲಿ

ಪ್ಲಾಸ್ಟಿಕ್‌ಗೆ ತಗುಲಿದ ಬೆಂಕಿಯಿoದ ಕಾಡಿಗೆ ಹಾನಿ ; ಕೊಣಾಜೆಯಲ್ಲಿ ಜೀವಸಂಕುಲಕ್ಕೆ ಶ್ರದ್ಧಾಂಜಲಿ

ಅಪ್ನಾ ದೇಶ್ ಮಾದರಿ ಗ್ರಾಮ ಅಭಿಯಾನದಿಂದ ಕಾರ್ಯಕ್ರಮ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ ...
Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಕಾಡು ಬೆಂಕಿಯಿoದ ನಾಶವಾದ ಸಸ್ಯ-ಜೀವಿಗಳಿಗೆ ಶ್ರದ್ಧಾಂಜಲಿ
Now Playing
ಕಾಡು ಬೆಂಕಿಯಿoದ ನಾಶವಾದ ಸಸ್ಯ-ಜೀವಿಗಳಿಗೆ ಶ್ರದ್ಧಾಂಜಲಿ
ಪ್ಲಾಸ್ಟಿಕ್‌ಗೆ ತಗುಲಿದ ಬೆಂಕಿಯಿoದ ಕಾಡಿಗೆ ಹಾನಿ ; ಕೊಣಾಜೆಯಲ್ಲಿ ಜೀವಸಂಕುಲಕ್ಕೆ ...
ಪ್ಲಾಸ್ಟಿಕ್‌ಗೆ ತಗುಲಿದ ಬೆಂಕಿಯಿoದ ಕಾಡಿಗೆ ಹಾನಿ ; ಕೊಣಾಜೆಯಲ್ಲಿ ಜೀವಸಂಕುಲಕ್ಕೆ ಶ್ರದ್ಧಾಂಜಲಿ

ಅಪ್ನಾ ದೇಶ್ ಮಾದರಿ ಗ್ರಾಮ ಅಭಿಯಾನದಿಂದ ಕಾರ್ಯಕ್ರಮ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ ...
Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಕಾಂಗ್ರೆಸ್ ಕೋಮುವಾದಕ್ಕೆ ಪರಿಹಾರ..??- ಪತ್ರಕರ್ತ ನವೀನ್ ಸೂರಿಂಜೆ
Now Playing
ಕಾಂಗ್ರೆಸ್ ಕೋಮುವಾದಕ್ಕೆ ಪರಿಹಾರ..??- ಪತ್ರಕರ್ತ ನವೀನ್ ಸೂರಿಂಜೆ
ದ್ವೇಷಭಾಷಣಕಾರರನ್ನು ಮಟ್ಟಹಾಕುವಲ್ಲಿ ಇವರುಗಳು ವಿಫಲ; ಕೋಮುವಾದಿಗಳನ್ನು ...
ದ್ವೇಷಭಾಷಣಕಾರರನ್ನು ಮಟ್ಟಹಾಕುವಲ್ಲಿ ಇವರುಗಳು ವಿಫಲ; ಕೋಮುವಾದಿಗಳನ್ನು ಜೈಲಿಗಟ್ಟಬೇಕು

ಕುತ್ತಾರಿನಲ್ಲಿ ಡಿವೈಎಫ್‌ಐ ಬಹಿರಂಗ ಸಭೆಯಲ್ಲಿ ಪತ್ರಕರ್ತ ನವೀನ್ ಸೂರಿಂಜೆ ಕಿಡಿ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ...
ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version
%d