UN NETWORKS
ಉಳ್ಳಾಲ: ಬಿ.ಎಂ.ಪ್ರೌಢ ಶಾಲೆ,ಇದರ ಇಕೋ ಕ್ಲಬ್ ‘ಹನಿ’, ಎ.ಬಿ.ಶೆಟ್ಟಿ ಸ್ಮಾರಕ ದಂತ ವೈದ್ಯಕೀಯ ಕಾಲೇಜ್ – ಸಾರ್ವಜನಿಕ ದಂತ ಆರೋಗ್ಯ ವಿಭಾಗ, ಮತ್ತು ಕರ್ನಾಟಕ ಸರಕಾರ ಅರಣ್ಯ ಇಲಾಖೆ, ಮಂಗಳೂರು ವಲಯ, ಇವುಗಳ ಸಹಯೋಜಕತ್ವದಲ್ಲಿ ವನಮಹೋತ್ಸವ “ಪ್ರಕೃತಿ” ಕಾರ್ಯಕ್ರಮ ಬಿ.ಎಂ. ಪ್ರೌಢಶಾಲಾ ಸಭಾಂಗಣದಲ್ಲಿ ನೆರೆವೇರಿತು.
ಅರಣ್ಯ ಇಲಾಖೆ, ಮಂಗಳೂರು ವಲಯ ಉಪವಿಭಾಗಾಧಿಕಾರಿ, ಎಸ್. ರವಿಕುಮಾರ್ ಗಿಡ ನೆಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಗಿಡ ಬೆಳೆಸಿ, ಪ್ರಕೃತಿಯನ್ನು ಉಳಿಸುವಂತೆ ಮಕ್ಕಳಿಗೆ ಮಾಹಿತಿ ನೀಡಿದರು.ಎ.ಬಿ ಶೆಟ್ಟಿ ಸ್ಮಾರಕ ದಂತ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ, ಡಾ. ಯು. ಕೃಷ್ಣ ನಾಯಕ್ ಮುಖ್ಯ ಅತಿಥಿಯಾಗಿ, ಮಕ್ಕಳಿಗೆ ಗಿಡಗಳನ್ನು ವಿತರಿಸಿ, ಅದನ್ನು ಪೋಷಿಸಿ ರಕ್ಷಿಸಬೇಕೆಂದು ಸಲಹೆ ನೀಡಿದರು.
ಶಾಲಾ ಮುಖ್ಯ ಶಿಕ್ಷಕಿ ಜಯವಂತಿ ಸೋನ್ಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಎ.ಬಿ ಶೆಟ್ಟಿ ಸ್ಮಾರಕ ದಂತ ವೈದ್ಯಕೀಯ ಕಾಲೇಜಿನ ಸಾರ್ವಜನಿಕ ದಂತ ಆರೋಗ್ಯ ವಿಭಾಗದ ಮುಖ್ಯಸ್ಥೆ, ಆಡ್ರಿ ಎಂ. ಖಕ್ಯೂಟ್, ಡಾ. ಸಹನಾ ಮಾಬೆನ್, ಬಿಎಂ. ಪ್ರೌಢಶಾಲೆಯ ಇಕೋ ಕ್ಲಬ್ ‘ಹನಿ’ಯ ಮಾರ್ಗದರ್ಶಕರು, ಶಿಕ್ಷಕಿ, ಧನಲಕ್ಷ್ಮಿ ಟೀಚರ್, ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾಲಾ ಸೇವಾದಳದ ವಿದ್ಯಾರ್ಥಿಗಳು ಪ್ರಕೃತಿ ಗೀತೆ ಹಾಡಿದರು. ಯೋಗೀಶ್ ಕೆ. ಸ್ವಾಗತಿಸಿದರು. ಉಷಾ ಎಂ. ಕಾರ್ಯಕ್ರಮ ನಿರೂಪಿಸಿದರು. ವಸಂತ ಕುಮಾರ್ ಕೆ. ವಂದಿಸಿದರು.


