UN NETWORKS
ಉಳ್ಳಾಲ: ದೇರಳಕಟ್ಟೆಯ ಯೇನೆಪೊಯ ಆಸ್ಪತ್ರೆಗೆ ಹೊರರೋಗಿಯಾಗಿ ಚಿಕಿತ್ಸೆ ಪಡೆದು ತೆರಳಿದ್ದ ಸುಮಾರು 47 ವಯೋಮಿತಿಯ ವ್ಯಕ್ತಿಯೊಬ್ಬರು ಆಸ್ಪತ್ರೆ ಹೊರಭಾಗದಲ್ಲಿ ಮೃತಪಟ್ಟಿದ್ದು, ಮೃತದೇಹವನ್ನು ಯೇನೆಪೊಯ ಆಸ್ಪತ್ರೆಯಲ್ಲಿ ಇರಿಸಲಾಗಿದೆ.
ಮೃತ ವ್ಯಕ್ತಿ ಆರೋಗ್ಯ ಕಾರ್ಡ್ ಪಡೆದುಕೊಂಡಿದ್ದು. ಅದರಲ್ಲಿ ಲವನ್ ಗೌಡ ಪಟೀಲ್ ತಂದೆ ಷಣ್ಮಖ ಎಂದು ಹೆಸರು ನೋಂದಾಯಿಸಿದ್ದು,ಮಂಗಳೂರಿನ ಪಡಿಲ್, ಅಡ್ಯಾರ್ ನಿವಾಸಿಯೆಂದು ನೋಂದಾಯಿಸಿದ್ದು, ವಾರಾಸುದಾರರು ಇದ್ದಲ್ಲಿ ಉಳ್ಳಾಲ ಪೊಲೀಸ್ ಠಾಣೆ ಅಥವಾ ಯೇನೆಪೊಯ ಆಸ್ಪತ್ರೆಯನ್ನು ಸಂಪರ್ಕಿಸಬಹುದು ಎಂದು ಪೊಲೀಸ್ ಪ್ರಕಟನೆ ತಿಳಿಸಿದೆ.


