UN NETWORKS
ಬಿಕರ್ನಕಟ್ಟೆ: ಪುರಾತನ ಕಾಲದಿಂದಲೂ ನಮ್ಮ ಪೂರ್ವಜರು ಪ್ರಕೃತಿಯ ಸಮತೋಲನಕ್ಕಾಗಿ ಯಾಗಯಜ್ಞದಿಗಳನ್ನು ಮಾಡುತ್ತಿದ್ದರು, ಅದೂ ಆಧುನಿಕ ಯುಗದಲ್ಲಿಯೂ ಬೆರೆತಿರುವುದು ನಮ್ಮ ಸನಾತನ ಪರಂಪರೆಯನ್ನು ಉಳಿಸಿದಂತಾಗುತ್ತದೆ, ಈ ನಿಟ್ಟಿನಲ್ಲಿ ಗತಕಾಲವನ್ನು ನೆನಪಿಸುವ ಸಗ್ರಹಮುಖ ಶನೈಶ್ಚರ ಯಾಗ ಶಯಸ್ಸಾಗಿ ನಡೆಯಲಿ ಎಂದು ಮಂಗಳೂರು ದಕ್ಷಿಣ ಶಾಸಕರಾದ ವೇದವ್ಯಾಸ್ ಕಾಮತ್ ಅಭಿಪ್ರಾಯಪಟ್ಟರು.
ಅವರು ಹಿಂದೂ ಯುವ ಸೇನೆ ಪದವು ಶಾಖೆ, ಶನೈಶ್ಚರ ಪೂಜಾ ಸಮಿತಿ, ಅಯ್ಯಪ್ಪ ಭಕ್ತಮಂಡಳಿ ಇದರ ವತಿಯಿಂದ ಬಿಕರ್ನಕಟ್ಟೆಯಲ್ಲಿ ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ಸಾರ್ವಜನಿಕ ಸಗ್ರಹಮುಖ ಶನೈಶ್ಚರ ಮಹಾಯಾಗದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಬಾಳಂಭಟ್ ಮನೆತನದ ವೇದಮೂರ್ತಿ ಗಿರಿಧರ್ ಭಟ್ ದೀಪಬೆಳಗಿಸಿ, ಶನೈಶ್ಚರ ಮಹಾಯಾಗದ ಮಹತ್ವವವನ್ನು ತಿಳಿಸಿದರು.
ಸಭೆಯ ಅಧ್ಯಕ್ಷತೆಯನ್ನು ಪದವು ಮೇಗಿನ ಮನೆ ಮಂಜಣ್ಷ ಶೆಟ್ಟಿ ವಹಿಸಿದ್ದರು. ಅತಿಥಿಗಳಾಗಿ ಹಿಂದೂ ಯುವ ಸೇನೆ ಕೇಂದ್ರೀಯ ಮಂಡಳಿಯ ಗೌರವಾದ್ಯಕ್ಷ ಭಾಸ್ಕರಚಂದ್ರ ಶೆಟ್ಟಿ, ಅಧ್ಯಕ್ಷ ಯಶೋಧರ ಚೌಟ, ಸತ್ಸಂಗ ಸಮಿತಿ ಅಳಪೆಯ ಸಂಚಾಲಕ ವಾಸುದೇವ ಕೊಟ್ಟಾರಿ, ಪದವು ಮೇಗಿನ ಮನೆ ಉಮೇಶ್ ರೈ, ಒಡಿಯೂರು ಗುರುದೇವಾ ಸೇವಾ ಬಳಗದ ಹೆಚ್.ಕೆ ಪುರುಷೋತ್ತಮ, ಮಂಗಳೂರು ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಶಶಿಕಾಂತ್ ನಾಗ್ವೇಕರ್, ಬಿಕರ್ನಕಟ್ಟೆ ಸುಬ್ರಹ್ಮಣ್ಯ ಭಜನಾ ಮಂದಿರದ ಅವಿನಾಶ್ ಬಂಗೇರ, ಹಿಂದೂ ಸೇವಾ ಸಮಿತಿಯ ಶ್ರೀನಿವಾಸ್ ಸೇರಿಗಾರ್, ಬಿಜೆಪಿ ಹಿಂದುಳಿದ ವರ್ಗದ ಉಪಾಧ್ಯಕ್ಷ ಕಿಶೋರ್ ಕೊಟ್ಟಾರಿ, ಉದ್ಯಮಿ ಜನಾರ್ಧನ ಅರ್ಕುಳ, ಹಿಂದೂ ಯುವ ಸೇನೆ ಪದವು ಶಾಖೆಯ ಪದ್ಮನಾಭ ಅಂಚನ್ ಕಕ್ಕೆಬೆಟ್ಟು, ಗಿರೀಶ್ ಕೊಟ್ಟಾರಿ, ಹಿಂದೂ ಯವ ಸೇನಾ ಜಿಲ್ಲಾಧ್ಯಕ್ಷ ವೀರಪ್ಪ ಮೂಡುಶೆಡ್ಡೆ ಉಪಸ್ಥಿತರಿದ್ದರು.
ಮಂಗಳೂರು ಗಣೇಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ರಾಮಂಚಂದ್ರ ಚೌಟ ಪದವು ಸ್ವಾಗತಿಸಿದರು. ಪ್ರವೀಣ್.ಎಸ್.ಕುಂಪಲ ನಿರೂಪಿಸಿದರು.


