UN NETWORKS
ರಥಬೀದಿ: ಪ್ಲಾಸ್ಟಿಕ್ ಸೇರಿದಂತೆ ತ್ಯಾಜ್ಯದಿಂದ ನೀರು ಕಲುಷಿತಗೊಂಡು ಪರಿಸರ ನಾಶವಾಗಿ ಸಂಕ್ರಾಮಿಕ ರೋಗಗಳು ಸೇರಿದಂತೆ ಅಸ್ತಮಾ, ಕ್ಯಾನ್ಸರ್ ಚರ್ಮರೋಗಗಗಳು ನಮಗರಿವಿಲ್ಲದಂತೆ ಕದತಟ್ಟಿ ಸಾವಿನ ದವಡೆಗೆ ಸಾಗಿಸುತ್ತಿದ್ದು, ಭವಿಷ್ಯದ ದಿನಗಳಲ್ಲಿ ಜಾಗತಿಕ ದುರಂತವಾಗುವುದರ ಮೊದಲು ನಾವೆಲ್ಲ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ತುಮಕೂರಿನ ಡಾ| ಶೈಲ ಬಾದಾಮಿ ಅಭಿಪ್ರಾಯಪಟ್ಟರು.
ಮಂಗಳೂರು ರಥಬೀದಿಯ ಡಾ| ಪಿ ದಯಾನಂದ ಪೈ, ಪಿ ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸ್ವಯಂ ಸೇವಾ ಯೋಜನೆ ಮತ್ತು ವಿಜ್ಞಾನ ಸಂಘಗಳ ಇದರ ಆಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ರಾಸಾಯನಿಕ ಜಗತ್ತು ಮನುಕುಲಕ್ಕೆ ಆಪತ್ತು ವಿಷಯದ ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾಹಿತಿ ನೀಡಿದರು.
50 ವರ್ಷದ ಹಿಂದೆ ಪ್ಲಾಸ್ಟಿಕ್ ಬಳಕೆ ತೀರಾಕಡಿಮೆಯಾಗಿತ್ತು. ನಗರಗಳಿದ್ದರೂ ಯಾವುದೇ ಸಾಂಕ್ರಾಮಿಕ ರೋಗಗಳ ಬಗ್ಗೆ ಭಯ ಇರಲಿಲ್ಲ. ಪ್ರಸ್ತುತ ಪ್ಲಾಸ್ಟಿಕ್ ಬಳಕೆ ಜಾಸ್ತಿಯಾಗಿದೆ, ಕಸ ವಿಲೇವಾರಿಕಷ್ಟವಾಗಿದೆ, ಪ್ರಾಣಿ ಸಂಕುಲ ನಾಶವಾಗುತ್ತಿದೆ. ಜೀವ ಜಲಚರಗಳು ಪ್ಲಾಸ್ಟಿಕ್ನಿಂದಾಗಿ ಒದ್ದಾಡುತ್ತಿವೆ. ದನ, ನಾಯಿ ಪ್ರಾಣಿಗಳಿಗೂ ಕ್ಯಾನ್ಸ್ರ್ ಬರುತ್ತಿದೆ. ಕೋಟಿಗಟ್ಟಲೆ ಜೀವಗಳು ಬಲಿಯಾಗುತ್ತಿದೆ. ಕೈಗಾರಿಕೆಯ, ತ್ಯಾಜ, ಮನೆಯತ್ಯಾಜ್ಯ ಸೇರಿದಂತೆ ವಿಷ ಪದಾರ್ಥಗಳನ್ನು ಮನಸ್ವೇಚ್ಚೆ ನೀರಿಗೆ, ಭೂಮಿಯೊಡಲಿಗೆ ಬಿಡುತ್ತಿದ್ದೇವೆ. ಇದರಿಂದ ಉಸಿರಾಡುವ ಗಾಳಿ, ಕುಡಿಯುವ ನೀರು, ಆಹಾರ ಪದಾರ್ಥಗಳು ವಿಷಮಯವಾಗಿ ಆಸ್ತಮಾ, ಕ್ಯಾನ್ಸ್ರ್ ಚರ್ಮರೋಗ ಮಾತ್ರವಲ್ಲ ಸಾಂಕ್ರಾಮಿಕ ರೋಗಗಳು ನಮಗರಿವಿಲ್ಲದಂತೆ ಕದತಟ್ಟಿ ಸಾವಿನ ದವಡೆಗೆ ಸಾಗುತ್ತಿರುವುದು ದುರಂತ. ನಾಗರೀಕ ಸೋಗು ಹಾಕಿ ಆಧುನಿಕ ಜೀವನ ಶೈಲಿಯಿಂದ ಕುಣಿಯುತ್ತಿದ್ದು ಜ್ಞಾನವಂತರಿದ್ದರೂ ಅಜ್ಞಾನಿಗಳಾಗುತ್ತಿದ್ದೇವೆ. ಗೊತ್ತಿಲ್ಲದೆಯೇ ವಿಷ ಕುಡಿದ ಪರಿಣಾಮವಾಗಿ ಸಂತಾನ ಶಕ್ತಿ ಇಲ್ಲವಾಗುತ್ತಿದೆ. ಆಧುನಿಕಜೀವನ ಶೈಲಿ ಆರೋಗ್ಯದ ದೃಷ್ಟಿಯಿಂದ ಅಪಾಯಕಾರಿಯಾಗಿದ್ದು ಪಾರಂಪರಿಕ ಜೀವನ ಪದ್ದತಿಯನ್ನು ನಡೆಸಿದ್ದೆ ಆದಲ್ಲಿ ಮುಂಬರುವ ಅಪಾಯಗಳನ್ನು ತಡೆಯಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ| ರಾಜಶೇಖರ್ ಹೆಬ್ಬಾರ್ ಸಿ. ಯೋಗದ ಮೂಲಕ ಇವತ್ತಿನ ದೈಹಿಕ ಸಮಸ್ಯೆಗಳಿಗೆ ಪರಿಹಾರ ಕಾಣಬಹುದು ಮಾತ್ರವಲ್ಲ ಆರೋಗ್ಯವಂತ ವಿದ್ಯಾರ್ಥಿಗಳು ದೇಶದ ಸಂಪತ್ತು ಎಂದರು. ವಿಜ್ಞಾನ ಸಂಘದ ಸಂಚಾಲಕ ಡಾ| ಸುಧಾಕರನ್, ಹಿಂದಿ ವಿಭಾಗದ ಮುಖ್ಯಸ್ಥ ಡಾ| ಶಿವರಾಮ್ ಪಿ., ಸಮಾಜ ಶಾಸ್ತ್ರ ವಿಭಾಗದ ಮುಖ್ಯಸ್ಥ ಸಹಾಯಕ ಪ್ರಾಧ್ಯಾಪಕ ಪ್ರೊ| ಶೇಷಪ್ಪ, ಡಾ| ಜಯಶ್ರೀ ಬಿ., ಸಹಾಯಕ ಪ್ರಾಧ್ಯಾಪಕ ಇಂಗ್ಲೀಷ್ ವಿಭಾಗ ರಾ.ಸೇ.ಯೋ. ಅಧಿಕಾರಿ ಪ್ರೊ| ಜೆಫ್ರಿರಾಡ್ರಿಗಸ್ ಉಪಸ್ಥಿತರಿದ್ದರು.
ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿ ಡಾ| ನವೀನ್ ಕೊಣಾಜೆ ಕಾರ್ಯಕ್ರಮ ನಿರ್ವಹಿಸಿದರು. ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಹಾಗೂ ಸಹ ಪ್ರಾಧ್ಯಾಪಕ ಪ್ರೊ| ಅಪ್ಪು ವಂದಿಸಿದರು.


