UN NETWORKS
ಇರಾ: ನಾವು ದಿನನಿತ್ಯ ಬಳಸುವ ವಿಷಪೂರಿತ ರಸಾಯನಿಕ ಬಳಸಿದ ತರಕಾರಿಯ ಬದಲು ಮನೆಯಲ್ಲೇ ನಮಗೆ ಬೇಕಾದಷ್ಟು ಸಾವಯವ ತರಕಾರಿ ಬೆಳಸುವ ನಿಟ್ಟಿನಲ್ಲಿ ಯುವ ಜನತೆ ಮುಂದಾಗಬೇಕು ಎಂದು ಪ್ರಗತಿಪರ ಕೃಷಿಕ ಅಬ್ದುಲ್ ಖಾದರ್ ಸಣ್ಣಬೈಲ್ ಅಭಿಪ್ರಾಯಪಟ್ಟರು.
ಇರಾ ಗ್ರಾಮದ ಪರಪ್ಪಿನ ಎಸ್ಸಸ್ಸಫ್ ವತಿಯಿಂದ ತಿಂಗಳಿಗೊಮ್ಮೆ ಮಹಿಳಾ ಕ್ಲಾಸ್ ಇದರ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಸಾವಯವ ಕೃಷಿಯ ಕುರಿತು ಮಾಹಿತಿ ನೀಡಿ ಸಂವಾದ ನಡೆಸಿಕೊಟ್ಟರು.
ಪರಪ್ಪು ಜುಮಾ ಮಸೀದಿ ಉಸ್ತಾದರಾದ ಅಬ್ದುಲ್ ರಝಾಕ್ ಸಖಾಫಿ,ಹಮೀದ್ ಸಖಾಫಿ (ಸದರ್ ಪರಪ್ಪು) ಉಮ್ಮರ್ ಮದನಿ ಮುರ್ಕಂಙ ಎಸ್ಸಸ್ಸಫ್ ಪರಪ್ಪು ಅಧ್ಯಕ್ಷ ಅಶ್ರಫ್ ಎಸ್ಟೇಟ್ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಹಿಳೆಯರಿಗೆ ವಿವಿಧ ತಳಿಯ ತರಕಾರಿ ಬೀಜಗಳನ್ನು ನೀಡಿ ಕೃಷಿಗೆ ಮತ್ತಷ್ಟು ಉತ್ತೇಜನ ನೀಡಿದರು.




