Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
ಅಪರಾಧ ಸುದ್ದಿಗಳು

ಉಪ್ಪಳದ ಅಪಘಾತದಲ್ಲಿ ಐವರು ಮೃತ್ಯು : ಅಜ್ಜಿನಡ್ಕದ ಮನೆಯಲ್ಲಿ ಶೋಕತಪ್ತ ವಾತಾವರಣ

UllalaVaniBy UllalaVaniJuly 10, 2018No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

UN NETWORKS

ಉಳ್ಳಾಲ: ಇನ್ನೇನು 30 ನಿಮಿಷಗಳಲ್ಲಿ ಮನೆ ತಲುಪುವವರಿದ್ದರು. ಆದರೆ ವಿಧಿಲೀಲೆಯೇ ಬೇರೆಯಾಗಿತ್ತು. ಮನೆ ತಲುಪಬೇಕಾದ ಐದು ಮಂದಿಯೂ ರಸ್ತೆಮಧ್ಯೆ ಸಂಭವಿಸಿದ ಅಪಘಾತದಲ್ಲಿ ಇಹಲೋಕ ತ್ಯಜಿಸಿದ್ದಾರೆ.

ಉಪ್ಪಳ ನಯಾಬಜಾರಿನಲ್ಲಿ ಬೆಳಿಗ್ಗೆ 6.30ರ ಸುಮಾರಿಗೆ ಲಾರಿ ಮತ್ತು ತೂಫಾನ್ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ಕೆ.ಸಿ ರೋಡ್ ಅಜ್ಜಿನಡ್ಕ ನಿವಾಸಿ ಬಿಫಾತಿಮ (67), ಅವರ ಪುತ್ರಿ ಜೆಪ್ಪು ನಿವಾಸಿ ನಸೀಮಾ (38), ಇನ್ನೋರ್ವ ಪುತ್ರಿ ಸೌದಾ ಎಂಬವರ ಪತಿ ಉಳ್ಳಾಲ ಮುಕ್ಕಚ್ಚೇರಿ ನಿವಾಸಿ ಮುಸ್ತಾಕ್ (41), ಮೊಮ್ಮಗಳು ಉಳ್ಳಾಲ ಮುಕ್ಕಚ್ಚೇರಿಯವರೇ ಆಗಿರುವ ಆಸ್ಮಾ (30) ಹಾಗೂ ಅವರ ಪತಿ ಇಮ್ತಿಯಾಝ್ (35) ದಾರುಣವಾಗಿ ಮೃತಪಟ್ಟವರು. ಮೃತ ಬೀಫಾತಿಮ ಅವರ ಪುತ್ರಿ ಸೌದಾ, ಸೌದಾ ಪುತ್ರ ಫವಾಝ್ (13) ಹಾಗೂ ಮೃತ ನಸೀಮಾ ಅವರ ಮಗು ಫಾತಿಮಾ (1) ಚಿಂತಾಜನಕ ಸ್ಥಿತಿಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನಿಬ್ಬರು ಮಕ್ಕಳಾದ ಫಾರಿಷ್, ಶಾಹೀದ್ ಗಂಭೀರ ಸ್ಥಿತಿಯಲ್ಲಿದ್ದಾರೆ.

ಗೃಹಪ್ರವೇಶದಿಂದ ವಾಪಸ್ಸಾಗುತ್ತಿದ್ದರು !
ಒಂದೇ ಕುಟುಂಬದ ಏಳು ಮಂದಿ ದೊಡ್ಡವರು ಮತ್ತು 11 ಮಂದಿ ಮಕ್ಕಳು ಶನಿವಾರ ರಾತ್ರಿ ಅಜ್ಜಿನಡ್ಕದ ಮನೆಯಿಂದ ಕೇರಳದ ಪಾಲಕ್ಕಾಡ್ ನಲ್ಲಿ ಭಾನುವಾರ ನಡೆಯಲಿರುವ ಗೃಹಪ್ರವೇಶ ಸಮಾರಂಭಕ್ಕೆ ಜೀಪಿನಲ್ಲಿ ತೆರಳಿದ್ದರು. ಬೀಫಾತಿಮ್ಮ ಅವರಿಗೆ 10 ಮಕ್ಕಳು , ಈ ಪೈಕಿ 3 ಪುತ್ರರು ಹಾಗೂ 7 ಮಂದಿ ಪುತ್ರಿಯರು. ಇವರಲ್ಲಿ ಕೊನೆಯ ಪುತ್ರಿ ರುಖಿಯಾ ಎಂಬವರ ಗೃಹಪ್ರವೇಶ ಸಮಾರಂಭವಿತ್ತು. ಸಮಾರಂಭವನ್ನು ಮುಗಿಸಿದ ಮಂದಿ ಪಾಲಕ್ಕಾಡ್ ನಿಂದ ಭಾನುವಾರ ಸಂಜೆ 7 ಗಂಟೆ ಹೊತ್ತಿಗೆ ಹೊರಟು ಸೋಮವಾರ 7 ಗಂಟೆಗೆ ಮನೆಗೆ ತಲುಪುವವರಿದ್ದರು.

ರಿಕ್ಷಾ ಚಾಲಕರು
ಮೃತರಲ್ಲಿ ಇಮ್ತಿಯಾಝ್ ಮತ್ತು ಮುಸ್ತಾಕ್ ಇಬ್ಬರು ಉಳ್ಳಾಲದಲ್ಲಿ ರಿಕ್ಷಾ ಚಾಲಕರಾಗಿ ದುಡಿಯುತ್ತಿದ್ದಾರೆ. ಇತರೆ ವಾಹನಗಳಲ್ಲಿಯೂ ದುಡಿಯುತ್ತಿದ್ದ ಇಬ್ಬರೂ ಶಾಲಾ ಮಕ್ಕಳನ್ನು ಕರೆತರುವ ವಾಹನದಲ್ಲಿ ದುಡಿಯುತ್ತಿದ್ದರು. ಶ್ರಮಜೀವಿಗಳಾಗಿರುವ ಇಬ್ಬರು ಎಲ್ಲರೊಂದಿಗೂ ಉತ್ತಮ ಬಾಂಧವ್ಯವನ್ನು ಇಟ್ಟುಕೊಂಡು ಸಹೃದಯಿಗಳಾಗಿದ್ದರು. ತಲಪಾಡಿಯಿಂದ ಪಾಲಕ್ಕಾಡಿಗೆ 338 ಕಿ.ಮೀ ಕ್ರಮಿಸಲು ಇರುವುದರಿಂದ ಇಬ್ಬರು ಹಂಚಿ ವಾಹನವನ್ನು ಚಲಾಯಿಸುತ್ತಿದ್ದರು. ಅಪಘಾತ ಸಂದರ್ಭ ಇಮ್ತಿಯಾಝ್ ವಾಹನ ಚಲಾಯಿಸುತ್ತಿದ್ದರೆನ್ನಲಾಗಿದೆ. ಮುಸ್ತಾಕ್ ಮುಂಬದಿ ಸೀಟಿನಲ್ಲೇ ಕುಳಿತ್ತಿದ್ದರು. ಮುಸ್ತಾಕ್ ಸ್ನೇಹಿತನ ಜೀಪನ್ನು ಪಡೆದುಕೊಂಡು, ಅದರಲ್ಲಿ ತೆರಳಿದ್ದರು.

ಶಾಲೆಗಾಗಿ ಆತುರದಲ್ಲಿ ವಾಪಸ್ಸಾಗಿದ್ದರು
ವಾಹನದಲ್ಲಿ 7 ಮಂದಿ ದೊಡ್ಡವರಿದ್ದರೆ, ಉಳಿದ 11 ಮಂದಿ ಮಕ್ಕಳಲ್ಲಿ 9 ಮಂದಿ ಶಾಲೆಗೆ ಹೋಗುವವರಾಗಿದ್ದರು. ಸೋಮವಾರ ದಿನವಾಗಿದ್ದರಿಂದಾಗಿ ಮಕ್ಕಳಿಗೆ ಶಾಲೆಯಿರುವ ಹಿನ್ನೆಲೆಯಲ್ಲಿ ದೂರದ ಪಾಲಕ್ಕಾಡಿಗೆ ತೆರಳಿ ಸಮಾರಂಭದ ದಿನದಂದೇ ವಾಪಸ್ಸಾಗಿದ್ದರು. ಈ ಪೈಕಿ ಮೂರು ಹಾಲುಣಿಸುವ ಮಕ್ಕಳೂ ಇದ್ದರು.

ಮಡುಗಟ್ಟಿದ ಶೋಕ
ಮಂಗಲ್ಪಾಡಿ ಸಿ.ಹೆಚ್.ಸಿ ಆಸ್ಪತ್ರೆಯಲ್ಲಿ ಐದು ಮೃತದೇಹಗಳನ್ನು ಮಹಜರು ನಡೆಸಿದ ಬಳಿಕ ಸಂಜೆ ವೇಳೆಗೆ ಅಜ್ಜಿನಡ್ಕದಲ್ಲಿರುವ ಬೀಫಾತಿಮ್ಮ ಅವರ ಮನೆಗೆ ತರಲಾಯಿತು. ನೂರಾರು ಬಂಧು ಮಿತ್ರರು, ಊರಿನ ಮಂದಿ ಜಮಾಯಿಸಿದ್ದು, ಶೋಕ ಮಡುಗಟ್ಟಿತ್ತು. ಐವರ ದಫನ ಕಾರ್ಯವೂ ಕಲ್ಲಾಪು ಪಟ್ಲ ಮಸೀದಿಯಲ್ಲಿ ನಡೆಯಿತು.

ದು:ಖ ಮಾಸುವ ಮುನ್ನವೇ
ವರ್ಷದ ಹಿಂದೆಯಷ್ಟೇ ಬೀಫಾತಿಮ್ಮ ಅವರ ಇಬ್ಬರು ಅಳಿಯಂದಿರು ಅಪಘಾತವೊಂದರಲ್ಲಿ ಮೃತಪಟ್ಟಿದ್ದರು. ಘಟನೆ ನಡೆದು ವರ್ಷವಾಗುತ್ತಿದ್ದಂತೆ ಇದೀಗ ಐದು ಮಂದಿ ಸಾವನ್ನಪ್ಪಿರುವುದು ಇಡೀ ಕುಟುಂಬಕ್ಕೆ ಆಘಾತವನ್ನುಂಟು ಮಾಡಿದೆ. ನೋವಿನಿಂದ ಹೊರಬರುವ ಸಂದರ್ಭವೇ ಇಂತಹ ಘೋರ ದುರಂತ ಸಂಭವಿಸಿದೆ.

ಹೊಂಡಮಯ ಹೆದ್ದಾರಿ
ಲಾರಿಯ ಮುಂಭಾಗದ ಚಕ್ರ ಸ್ಫೋಟಗೊಂಡು ಅಪಘಾತ ಸಂಭವಿಸಿರುವುದಾಗಿ ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಲಪಾಡಿಯಿಂದ ಕಾಸರಗೋಡಿಗೆ ತೆರಳುವ ರಸ್ತೆ ಕಿರಿದಾಗಿದ್ದು, ಅದರಲ್ಲೂ ಮಳೆ ನಂತರ ಸಂಪೂರ್ಣ ಹೊಂಡಗಳೇ ಕಾಣುತ್ತಿವೆ. ಇದರಿಂದಲೇ ಹೆಚ್ಚಿನ ಅನಾಹುತಗಳು ಸಂಭವಿಸುತ್ತಿವೆ. ಹೆದ್ದಾರಿ ಪ್ರಾಧಿಕಾರದವರ ಬೇಜವಾಬ್ದಾರಿಯೂ ಅಪಘಾತಗಳಿಗೆ ಕಾರಣವಾಗುತ್ತಿದೆ ಎಂದು ಮೃತರ ಸಂಬಂಧಿಕರು ಆರೋಪಿಸಿದ್ದಾರೆ.

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಣೆ

June 30, 2026

ಬೀರಿ ಜಂಕ್ಷನ್‌ ತರಕಾರಿ ಅಂಗಡಿ ಮೇಲೆ ಬಿದ್ದ ಮರ

June 29, 2026

ಜೀವನದ ಹಾಡು ನಿಲ್ಲಿಸಿದ ಜ್ಯೂನಿಯರ್‌ ಎಸ್.ಪಿ ಖ್ಯಾತಿಯ ಚಂದ್ರಹಾಸ್‌ ಸುವರ್ಣ

June 29, 2026
Leave A Reply

Advertise
ಸಂಪರ್ಕಿಸಿ

ಕರ್ನಾಟಕದಾದ್ಯಂತ ಆರೋಗ್ಯ ಇಲಾಖೆಯಲ್ಲಿ ಮೆಗಾ ನೇಮಕಾತಿ: ಸಾರ್ವಜನಿಕ ಆರೋಗ್ಯ ಸೇವೆ ಬಲಪಡಿಸಲು ಮಹತ್ವದ ಹೆಜ್ಜೆ

June 11, 2026

ರಾಜ್ಯದಲ್ಲಿ ಖಾಸಗಿ ಅಸ್ಪತ್ರೆಯಲ್ಲಿ ಆಯುಷ್ಮಾನ್ ಯೋಜನೆ ಸಮರ್ಪಕ ಜಾರಿಗೆ ಜ್ಯಾರಿ ಆಗದಿದ್ದರೆ ಜಿಲ್ಲೆಯ ಅರೋಗ್ಯಧಾರಿಗಳ ಮೇಲೆ ಕ್ರಮ :- ಅರೋಗ್ಯ ಸಚಿವ ಯು.ಟಿ ಖಾದರ್

June 9, 2026

ಫೀಲ್ಡ್ ಗೆ ಇಳಿದ ಯು.ಟಿ. ಖಾದರ್ – ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ಕ್ಲಾಸ್…!

June 5, 2026

ವೆನ್ಲಾಕ್ ಆಸ್ಪತ್ರೆಯಲ್ಲಿ ಮನೋವೈದ್ಯರು ಮತ್ತು ಕ್ಲಿನಿಕಲ್ ಸೈಕಾಲಜಿಸ್ಟ್‌ಗಳ ತೀವ್ರ ಕೊರತೆ – ಬಡ ರೋಗಿಗಳ ನಿರ್ಲಕ್ಷ್ಯ ಯಾಕೆ ಎಂದು ಸಾರ್ವಜನಿಕರ ಪ್ರಶ್ನೆ

May 26, 2026
suddi

ನಾಗುರಿ ದುರಂತ ; ಸಚಿವ ಖಾದರ್ ದೆಹಲಿ ಪ್ರವಾಸ ಮೊಟಕು: ಶೀಘ್ರ ಪರಿಹಾರ ನೀಡಲು ಸೂಚನೆ 

By UllalaVaniJuly 1, 20260

ಕಂಕನಾಡಿ ಜು.01: ಮಂಗಳವಾರ ರಾತ್ರಿಯಿಂದ ಸುರಿಯುತ್ತಿರುವ ಭಾರೀ ಮಳೆಗೆ ಮಂಗಳೂರಿನ  ಕಂಕನಾಡಿ ಸಮೀಪದ ನಾಗುರಿ ಸಮೀಪ ತಡೆಗೋಡೆ ಕುಸಿದು ಮನೆ…

ನಿಜವಾಯಿತು ಉಳ್ಳಾಲವಾಣಿ ವರದಿ -ಮಂಜನಾಡಿ ದುರಂತದಿಂದಲೂ ಪಾಠ ಕಲಿಯಲಿಲ್ಲವೇ? – ನಾಗುರಿ ಗುಡ್ಡ ಕುಸಿತದಲ್ಲಿ ಮೂವರು ಬಲಿ; ಹೊಣೆ ಯಾರದು

July 1, 2026

ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಣೆ

June 30, 2026

ಮಂಗಳೂರು: ಮೀನುಗಾರಿಕಾ ಬೋಟ್ ಮುಳುಗಡೆ; 6 ಮಂದಿ ಮೀನುಗಾರರ ರಕ್ಷಣೆ

June 30, 2026
1 2 3 … 1,991 Next
Automatic YouTube Gallery

ಉರುಮಣೆ : ನಿನ್ನೆ ಕಾಣೆಯಾಗಿದ್ದ ಉಸ್ತಾದ್‌ ಅಶ್ರಫ್‌ ಅವರ ಸ್ಕೂಟಿ ಗುರುಪುರ ಸೇತುವೆ ಮೇಲೆ ಪತ್ತೆ..!

ನಿನ್ನೆ ಕಾಣೆಯಾಗಿದ್ದ ಉಸ್ತಾದ್‌ ಅಶ್ರಫ್‌ ಅವರ ಸ್ಕೂಟಿ ಪತ್ತೆ;ಗುರುಪುರ ಸೇತುವೆ ಮೇಲೆ ಪತ್ತೆಯಾದ ಉಸ್ತಾದರ ವಾಹನ

ಮಸೀದಿಗೆ ತೆರಳುವುದಾಗಿ ಹೇಳಿದ್ದ ಅಶ್ರಫ್‌ ಮಾಲಿಕಿ ಉರುಮಣೆ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ...
ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಉರುಮಣೆ : ನಿನ್ನೆ ಕಾಣೆಯಾಗಿದ್ದ ಉಸ್ತಾದ್‌ ಅಶ್ರಫ್‌ ಅವರ ಸ್ಕೂಟಿ ಗುರುಪುರ ಸೇತುವೆ ಮೇಲೆ ಪತ್ತೆ..!
Now Playing
ಉರುಮಣೆ : ನಿನ್ನೆ ಕಾಣೆಯಾಗಿದ್ದ ಉಸ್ತಾದ್‌ ಅಶ್ರಫ್‌ ಅವರ ಸ್ಕೂಟಿ ಗುರುಪುರ ಸೇತುವೆ ಮೇಲೆ ಪತ್ತೆ..!
ನಿನ್ನೆ ಕಾಣೆಯಾಗಿದ್ದ ಉಸ್ತಾದ್‌ ಅಶ್ರಫ್‌ ಅವರ ಸ್ಕೂಟಿ ಪತ್ತೆ;ಗುರುಪುರ ಸೇತುವೆ ...
ನಿನ್ನೆ ಕಾಣೆಯಾಗಿದ್ದ ಉಸ್ತಾದ್‌ ಅಶ್ರಫ್‌ ಅವರ ಸ್ಕೂಟಿ ಪತ್ತೆ;ಗುರುಪುರ ಸೇತುವೆ ಮೇಲೆ ಪತ್ತೆಯಾದ ಉಸ್ತಾದರ ವಾಹನ

ಮಸೀದಿಗೆ ತೆರಳುವುದಾಗಿ ಹೇಳಿದ್ದ ಅಶ್ರಫ್‌ ಮಾಲಿಕಿ ಉರುಮಣೆ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ...
ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ನಾಟೆಕಲ್ ಅ*#ಪಘಾ*ತ; ಮಾಜಿ ಪ್ರಯಾಣಿಕನೋರ್ವನ ಸ್ಪೋಟಕ ಕಾಮೆಂಟ್...!!
Now Playing
ನಾಟೆಕಲ್ ಅ*#ಪಘಾ*ತ; ಮಾಜಿ ಪ್ರಯಾಣಿಕನೋರ್ವನ ಸ್ಪೋಟಕ ಕಾಮೆಂಟ್...!!
ನಾಟೆಕಲ್ ಬಸ್ ಅ**ಪಘಾ#ತ;# ಕಾಮೆಂಟ್ ಮಾಡಿದ ಮಾಜಿ ಪ್ರಯಾಣಿಕ;ಪಿ.ಎ.ಕಾಲೇಜು ಬಸ್ ...
ನಾಟೆಕಲ್ ಬಸ್ ಅ**ಪಘಾ#ತ;# ಕಾಮೆಂಟ್ ಮಾಡಿದ ಮಾಜಿ ಪ್ರಯಾಣಿಕ;ಪಿ.ಎ.ಕಾಲೇಜು ಬಸ್ ನಿರ್ವಹಣೆ ಕುರಿತು ಕಾಮೆಂಟ್

ಹಾಗಾದರೆ ಆ ಕಾಮೆಂಟ್‌ನಲ್ಲಿ ಏನಿದೆ..??
📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ...
ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version