UN NETWORKS
ಉಳ್ಳಾಲ: ಮಂಗಳೂರು ವಿಶ್ವವಿದ್ಯಾನಿಲಯ ಎಪ್ರಿಲ್ – ಮೇ 2018ರಲ್ಲಿ ನಡೆಸಿದ ಪದವಿ ಪರೀಕ್ಷೆಗಳ ಫಲಿತಾಂಶ ಜು. 5ರಂದು ಅಪರಾಹ್ನ 3 ಗಂಟೆಗೆ ವಿಶ್ವವಿದ್ಯಾನಿಲಯದ ಅಧಿಕೃತ ವೆಬ್ಸೈಟ್ನಲ್ಲಿ (www.mangaloreuniversity.ac.in) ಪ್ರಕಟಗೊಳ್ಳಲಿದೆ.
ಪದವಿಗಳಾದ ಬಿ.ಎ./ ಬಿ.ಎಸ್ಸಿ./ ಬಿ.ಕಾಂ./ ಬಿ.ಸಿ.ಎ./ ಬಿಬಿಎಂ/ ಬಿಬಿಎ/ ಬಿ.ಎಸ್ಸಿ. (ಎಫ್.ಎನ್.ಡಿ)/ ಬಿ.ಎಚ್.ಎಂ./ ಬಿ.ಎಚ್.ಎಸ್/ ಬಿ.ಎಸ್ಸಿ (ಎಫ್.ಡಿ./ಐ.ಡಿ.)/ಬಿ.ಎ.ಎಸ್.ಎಲ್.ಪಿ, ಬಿ.ಎಸ್.ಡಬ್ಲ್ಯೂ/ಬಿ.ಎ. (ಎಚ್.ಆರ್.ಡಿ.) ವಿಷಯಗಳ ಫಲಿತಾಂಶ ಪ್ರಕಟಗೊಳ್ಳಲಿದ್ದು, ಮರು ಮೌಲ್ಯಮಾಪನಕ್ಕೆ ಅರ್ಜಿಯನ್ನು ವಿದ್ಯಾರ್ಥಿಗಳು ಜು. 14ರೊಳಗೆ ಆನ್ಲೈನ್ ಅಂಕಪಟ್ಟಿಯೊಂದಿಗೆ ಕಾಲೇಜು ಮುಖಾಂತರ ಸಲ್ಲಿಸಬಹುದು ಎಂದು ಪ್ರಕಟನೆ ತಿಳಿಸಿದೆ.


