UN NETWORKS
ಮೈಸೂರು: ಎಸ್.ಡಿ.ಪಿ.ಐಕರ್ನಾಟಕದ ನೂತನರಾಜ್ಯಾಧ್ಯಕ್ಷರಾಗಿಇಲ್ಯಾಸ್ ಮಹಮ್ಮದ್ ತುಂಬೆ ಆಯ್ಕೆಯಾಗಿದ್ದಾರೆ.
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿಆಫ್ಇಂಡಿಯಾ (ಎಸ್ಡಿಪಿಐ) ಕರ್ನಾಟಕ ರಾಜ್ಯ ನೂತನ ಪದಾಧಿಕಾರಿಗಳನ್ನು ಎಸ್.ಡಿ.ಪಿ.ಐ ರಾಷ್ಟ್ರೀಯ ಅಧ್ಯಕ್ಷರಾದ ಎ. ಸಯೀದ್ರವರು 2018 ರಜುಲೈ 2ರಂದು ಮೈಸೂರಿನ ಹೋಟೆಲ್ ನಲಪಾಡ್ ರೆಸಿಡೆನ್ಸಿಯಲ್ಲಿ ನಡೆದ ಎಸ್.ಡಿ.ಪಿ.ಐ ರಾಜ್ಯ ಪ್ರತಿನಿಧಿ ಸಭೆಯಲ್ಲಿ ಘೋಷಿಸಿದರು.
ಸಭೆಯಲ್ಲಿ ರಾಜ್ಯ ಮತ್ತು ರಾಷ್ಟ್ರದ ಸಾಮಾಜಿಕ, ರಾಜಕೀಯ ಸನ್ನಿವೇಶಗಳ ಬಗ್ಗೆ ಚರ್ಚೆ ನಡೆಯಿತು. ಬಳಿಕ ಕಳೆದ ಮೂರು ವರ್ಷಗಳಲ್ಲಿ ಪಕ್ಷದ ವತಿಯಿಂದ ನಡೆದ ಚಟುವಟಿಕೆಗಳ ವರದಿ ವಾಚನ ಹಾಗೂ ವಿಚಾರಗೋಷ್ಠಿ ನಡೆಸಲಾಯಿತು. ಮುಂದಿನ ಮೂರು ವರ್ಷ (2018-21)ಗಳ ಅವಧಿಗೆ ನಡೆದ ರಾಜ್ಯ ಸಮಿತಿ ಚುನಾವಣೆಯಲ್ಲಿ 21 ಮಂದಿಯನ್ನು ರಾಜ್ಯ ಸಮಿತಿಗೆ ಆರಿಸಲಾಯಿತು. ಬಳಿಕ ನಡೆದ ಪದಾಧಿಕಾರಿಗಳ ಚುನಾವಣೆಯಲ್ಲಿ ಈ ಕೆಳಗಿನವರನ್ನು ಆಯ್ಕೆ ಮಾಡಲಾಯಿತು.
ರಾಜ್ಯ ಉಪಾಧ್ಯಕ್ಷರಾಗಿ ದೇವನೂರು ಪುಟ್ಟನಂಜಯ್ಯ, ಅಬ್ದುಲ್ ಮಜೀದ್ , ಪ್ರಧಾನ ಕಾರ್ಯದರ್ಶಿಗಳಾಗಿ ಅಬ್ದುಲ್ ಹನ್ನಾನ್, ರಿಯಾಝ್ ಫರಂಗಿಪೇಟೆ, ಕಾರ್ಯದರ್ಶಿಗಳಾಗಿ ಅಕ್ರಂ ಹಸನ್, ಅಲ್ಫಾನ್ಸೋ ಫ್ರಾಂಕೋ, ಅಪ್ಸರ್ಕೊಡ್ಲಿಪೇಟೆ, ಅಶ್ರಫ್ ಮಾಚಾರ್, ಕೋಶಾಧಿಕಾರಿಯಾಗಿ ಜಾವೆದ್ಆಝಾಂ ಆಯ್ಕೆಯಾಗಿದ್ದಾರೆ.
ರಾಜ್ಯ ಸಮಿತಿ ಸದಸ್ಯರಾಗಿ ಅಬ್ರಾರ್ ಅಹಮದ್,ಅಬ್ದುಲ್ ಲತೀಫ್, ಜಲೀಲ್ಕೃಷ್ಣಾಪುರಾ, ಅಬ್ದುಲ್ರಹೀಂ ಪಟೇಲ್, ಮುಜಾಹಿದ್ ಪಾಶಾ, ಮಜೀದ್ಖಾನ್, ಅಮ್ಜದ್ಖಾನ್, ಕುಮಾರಸ್ವಾಮಿ, ಫಯಾಝ್ ಬೆಂಗಳೂರು, ಅಮೀನ್ ಮೊಹ್ಸಿನ್, ಸಮಿ ಹಝ್ರತ್ಆಯ್ಕೆಯಾಗಿದ್ದಾರೆ.
ರಾಷ್ಟ್ರೀಯ ಉಪಾಧ್ಯಕ್ಷರಾದ ಅಡ್ವಕೇಟ್ ಅಶ್ರಫ್ ರಾಜ್ಯ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ವೇದಿಕೆಯಲ್ಲಿ ರಾಷ್ಟ್ರೀಯ ಉಪಾಧ್ಯಕ್ಷರಾದ ಅಡ್ವಕೇಟ್ ಶರಫುದ್ದೀನ್, ಡಾ.ನಾಝ್ನೀಂ ಬೇಗಂ ಉಪಸ್ಥಿತರಿದ್ದರು.
ಸಭೆಯಲ್ಲಿ ದಲಿತ ಮತ್ತು ಬಹುಜನ ಚಳುವಳಿಯ ಹಿರಿಯ ಮುಖಂಡರಾದ ಅಡ್ವಕೇಟ್ ಮೋಹನ್ರವರು ಹಿಂದುಳಿದ’ವರ್ಗಗಳ ರಾಜಕೀಯ ಸಬಲೀಕರಣ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು. ಮುಂಬರುವ ಲೋಕಸಭಾ ಚುನಾವಣೆಯ ಬಗ್ಗೆಯೂ ಸಭೆಯಲ್ಲಿ ವಿಸ್ಕೃತವಾದಚರ್ಚೆ ನಡೆಸಲಾಯಿತು.


