UN NETWORKS
ಮಂಗಳೂರು : ಶೈಕ್ಷಣಿಕ ಕ್ಷೇತ್ರದಲ್ಲಿ ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಹೆಣ್ಣು ಮಕ್ಕಳ ರಕ್ಷಣೆ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಮುಸ್ಲಿಂ ಹೆಣ್ಣು ಮಕ್ಕಳು ಧರಿಸುವ ಸ್ಕಾರ್ಫ್ ಅದು ಅವರ ಹಕ್ಕು ಅದನ್ನು ಕಸಿದುಕೊಳ್ಳುತ್ತಿರುವ ಆಗ್ನೆಸ್ ಕಾಲೇಜು ಆಡಳಿತ ಮಂಡಳಿಯ ನೀತಿ ಖಂಡನೀಯ ಎಂದು ಮಂಗಳೂರು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ರವೂಫ್ ಸಿ ಎಂ ತಿಳಿಸಿದ್ದಾರೆ.
ಸ್ಕಾರ್ಫ್ ಕಾರಣ ಮುಂದಿಟ್ಟುಕೊಂಡು ಕೆಲವು ವಿದ್ಯಾರ್ಥಿನಿಯರನ್ನು ಅಮಾನತು ಮಾಡಲಾಗಿದ್ದು ಕಾಲೇಜು ಮಂಡಳಿಯ ಈ ನಡವಳಿಕೆ ಹೆಣ್ಣು ಮಕ್ಕಳ ಶಿಕ್ಷಣವನ್ನು ಕಸಿದುಕೊಳ್ಳುವಂತಿದೆ. ಈ ತೀರ್ಮಾನ ವಿದ್ಯಾರ್ಥಿನಿಯರ ಉಜ್ವಲ ಭವಿಷ್ಯವನ್ನು ಹಾನಿಗೊಳಿಸುವಂತಿದೆ.
ಈ ನಿಟ್ಟಿನಲ್ಲಿ ಸ್ಕಾರ್ಫ್ ವಿವಾದವನ್ನು ಆಡಳಿತ ಮಂಡಳಿ ಹಾಗೂ ವಿದ್ಯಾರ್ಥಿಗಳ ಪೋಷಕರ ಜೊತೆ ಚರ್ಚೆ ನಡೆಸಿ ಬಗೆಹರಿಸಿಕೊಳ್ಳಬೇಕು, ಈ ವಿವಾದದಲ್ಲಿ ಬಡ ವಿದ್ಯಾರ್ಥಿನಿಯರ ಶಿಕ್ಷಣ ಕಸಿದು ಕೊಳ್ಳದೆ ಶಿಕ್ಷಣ ಮುಂದುವರಿಸಲು ಅವಕಾಶ ಮಾಡಿ ಕೊಡಬೇಕು ಎಂದು ರವೂಫ್ ಸಿ ಎಂ ಆಗ್ರಹಿಸಿದರು.


