UN NETWORKS
ಉಳ್ಳಾಲ: ಬಂಟರ ಸಂಘ ಉಳ್ಳಾಲ ವಲಯ ಇದರ ಉಳ್ಳಾಲ ಗ್ರಾಮ ಸಮಿತಿಯ ನೂತನ ಅಧ್ಯಕ್ಷರಾಗಿ ಆನಂದ ಶೆಟ್ಟಿ ಎಂ. ಆಯ್ಕೆಯಾಗಿದ್ದಾರೆ. ಗ್ರಾಮ ಸಮಿತಿಯ ಮಹಾಸಭೆಯಲ್ಲಿ 2018-20ನೇ ಸಾಲಿನ ಎರಡು ವರ್ಷಗಳ ಅವಧಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು.
ಗೌರವಾಧ್ಯಕ್ಷರಾಗಿ ರವೀಂದ್ರ ಶೆಟ್ಟಿ ಮೂನ್ಲೈಟ್, ಮಾರ್ಗದರ್ಶಕರಾಗಿ ಗಂಗಾಧರ ಶೆಟ್ಟಿ, ಡಾ| ಆರ್.ಕೆ. ಶೆಟ್ಟಿ, ಗೌರವ ಸಲಹೆಗಾರರಾಗಿ ವೈ. ಜಯರಾಮ ಶೆಟ್ಟಿ, ನಾರಾಯಣ ಶೆಟ್ಟಿ, ಹರೀಶ್ ಆಳ್ವ, ವಿದ್ಯಾಧರ್ ಶೆಟ್ಟಿ, ಶಾಂತಾ ಆರ್.ಶೆಟ್ಟಿ, ಉಪಾಧ್ಯಕ್ಷರುಗಳಾಗಿ ಪ್ರಕಾಶ್ ಶೆಟ್ಟಿ, ರೇಣುಕಾ ಆರ್. ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಸುಜಾತ ಭಂಡಾರಿ, ಕೋಶಾಧಿಕಾರಿಯಾಗಿ ಇಂದಿರಾ ಕೆ. ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ಗೋಪಾಲ ಶೆಟ್ಟಿ, ಉಮಾವತಿ ಶೆಟ್ಟಿ, ಸಂಘಟನಾ ಕಾರ್ಯದರ್ಶಿಯಾಗಿ ಪದ್ಮನಾಭ ಶೆಟ್ಟಿ, ಅಶೋಕ ಶೆಟ್ಟಿ, ಕಾರ್ಯಕಾರಿ ಸದಸ್ಯರುಗಳಾಗಿ ಇಂದಿರಾ ಅಶೋಕ್ ಶೆಟ್ಟಿ, ಸುಜೀರ್ ಶೆಟ್ಟಿ, ಲೀಲಾ ಜಯಂತ್ ಶೆಟ್ಟಿ, ಸಮಿತಾ ಶೆಟ್ಟಿ ಇವರುಗಳನ್ನು ಆಯ್ಕೆಮಾಡಲಾಯಿತು.
ಯುವ ವಿಭಾಗಕ್ಕೆ ಆಕಾಶ್ ಎ. ಶೆಟ್ಟಿ, ಸೃಜನ್ ಶೆಟ್ಟಿ, ಕ್ರೀಡಾ ವಿಭಾಗಕ್ಕೆ ಆಕಾಶ್ ಶೆಟ್ಟಿ, ಬರ್ಕೆ, ಆಶಿಕ್ ಹೆಚ್ ಆಳ್ವ, ಸಾಂಸ್ಕೃತಿಕ ವಿಭಾಗಕ್ಕೆ ಸಹರಾ ಶೆಟ್ಟಿ, ನಿಖಿತಾ ವಿ. ಶೆಟ್ಟಿ ಆಯ್ಕೆಯಾಗಿದ್ದು, ಗ್ರಾಮ ಸಮಿತಿಯಿಂದ ಉಳ್ಳಾಲ ವಲಯ ಬಂಟರ ಸಂಘ ಪ್ರತಿನಿಧಿಗಳಾಗಿ ರಘುರಾಮ ಶೆಟ್ಟಿ ಟಿ., ದಿನೇಶ್ ರೈ ಕಳ್ಳಿಗೆ, ಜಗದೀಶ ಸುಲಾಯ, ವಾಣಿ ಎಚ್., ಆಳ್ವ ಆಯ್ಕೆಯಾಗಿದ್ದು, ವಲಯ ಮಹಿಳಾ ವಿಭಾಗಕ್ಕೆ ಶಶಿಕಲಾ ಎ. ಶೆಟ್ಟಿ ಹಾಗೂ ಸಿರಿ ಸ್ವ-ಸಹಾಯ ಸಂಘಗಳ ಒಕ್ಕೂಟಕ್ಕೆ ಶಾರದ ಎಚ್. ಶೆಟ್ಟಿ ಆಯ್ಕೆಯಾಗಿದ್ದಾರೆ.


