UN NETWORKS
ಉಳ್ಳಾಲ: ಮನೆಯೊಂದು ಕುಸಿದು ಬಿದ್ದು ವ್ಯಕ್ತಿಯೋರ್ವರು ಗಾಯಗೊಂಡಿರುವ ಘಟನೆ ಉಳ್ಳಾಲ ನಗರಸಭೆ ವ್ಯಾಪ್ತಿಯ 23 ನೇ ವಾರ್ಡಿನ ಕೆರೆಬೈಲು ಎಂಬಲ್ಲಿ ಬುಧವಾರ ತಡರಾತ್ರಿ ವೇಳೆ ಸಂಭವಿಸಿದೆ. ಘಟನೆಯಲ್ಲಿ ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ.

ಕೆರೆಬೈಲು ಗುಡ್ಡೆ ನಿವಾಸಿ ಶಾರದಾ (50) ಗಾಯಗೊಂಡವರು. ಇವರಿಗೆ ಸೇರಿದ ಮನೆಯಲ್ಲಿ ಸೊಸೆ ಮತ್ತು ಮೊಮ್ಮಗ ಇದ್ದು, ಮನೆ ಮುರಿದು ಬೀಳುವ ಸದ್ದು ಕೇಳುತ್ತಿದ್ದಂತೆ ಇಬ್ಬರು ಹೊರ ಓಡಿಬಂದರೆ, ಶಾರದಾ ಅವರು ಮನೆಯೊಳಗೆ ಸಿಲುಕಿಕೊಂಡು ಗಾಯಗೊಂಡಿದ್ದಾರೆ. ಅವರನ್ನೂ ಕೂಡಲೇ ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಮನೆ ಸಂಪೂರ್ಣವಾಗಿ ಕುಸಿದು ಬಿದ್ದಿದ್ದು ಲಕ್ಷಾಂತರ ನಷ್ಟ ಸಂಭವಿಸಿದೆ.


