UN NETWORKS
ಉಳ್ಳಾಲ: ಸಹಕಾರಿ ಸಂಘ ಸಮಾಜಮುಖಿಯಾಗಿ ಸೇವೆಯನ್ನು ನಡೆಸುತ್ತಾ ಬಂದಿದ್ದು, ಹಲವು ಕಡೆಗಳಲ್ಲಿ ಶಾಖೆಯನ್ನು ತೆರೆದು ಸಮಾಜದ ಬೆಳವಣಿಗೆಗೆ ಕಾರಣೀಭೂತವಾಗಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ಇದರ ಶ್ರೀ ಗುರುದೇವಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.
ಅವರು ತೊಕ್ಕೊಟ್ಟು ಆರ್.ಇ.ಬಿ ಕಾಂಪ್ಲೆಕ್ಸ್ ನಿಂದ ತೊಕ್ಕೊಟ್ಟು ವಿಜಯ ಬ್ಯಾಂಕ್ ಸಮೀಪದ ಪ್ರಗತಿ ಕಾಂಪ್ಲೆಕ್ಸ್ ಕಟ್ಟಡಕ್ಕೆ ಸ್ಥಳಾಂತರಗೊಂಡ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ ಇದರ ತೊಕ್ಕೊಟ್ಟು ಶಾಖಾ ಕಚೇರಿಯನ್ನು ಸೋಮವಾರ ಉದ್ಘಾಟಿಸಿ ಆಶೀರ್ವಚನ ನೀಡಿದರು. ಅನುಕೂಲಕರವಾದ ಜಾಗ ಬೇಕಾಗಿರುವುದರಿಂದ ಮಂಗಳೂರಿನ ಇನ್ನೊಂದು ಭಾಗ ಆಗಿರುವ ತೊಕ್ಕೊಟ್ಟು ಪ್ರದೇಶದಲ್ಲಿ ಜನಪರವಾಗಿ ಸೇವೆಯನ್ನು ಮಾಡುವ ಅವಕಾಶ ದೊರೆತಿದೆ. ವಿವಿಧ ಉದ್ದೇಶಗಳಿಗೆ, ಸೌಹಾರ್ದತೆಯನ್ನು ನೆಲೆಸುವ ಸಲುವಾಗಿ ಸಂಸ್ಥೆ ಕಾರ್ಯಾಚರಿಸುತ್ತಿದೆ. ಇದಕ್ಕೆ ಸಾಕ್ಷಿಯಾಗಿ ಅಲ್ಲಲ್ಲಿ ಯಶಸ್ವಿ ಜನಪರ ಸೇವೆಯನ್ನು ಮಾಡುತ್ತಾ ಬಂದಿದೆ. ಈ ಮೂಲಕ ಸಂಸ್ಥೆಯೂ ಬೆಳೆಯುವುದು, ಸಮಾಜವೂ ಬೆಳೆಯಲು ಸಾಧ್ಯ. ತೊಕ್ಕೊಟ್ಟು ಪ್ರದೇಶ ಮಂಗಳೂರಿನ ಇನ್ನೊಂದು ಕೇಂದ್ರವಾಗಿ ರೂಪುಗೊಳ್ಳುವ ಎಲ್ಲಾ ಲಕ್ಷಣಗಳಿವೆ. ಈ ನಿಟ್ಟಿನಲ್ಲಿ ಆರಂಭವಾಗಿರುವ ಸಂಘ ಯಶಸ್ವಿವಾಗಲು ಸಿಬ್ಬಂದಿ ವರ್ಗದ ಸಹಕಾರಿಯೂ ಅಗತ್ಯ . ಸಹಕಾರಿ ತತ್ವ ಬದುಕಿನ ತತ್ವ , ಅದು ಅನುಷ್ಠಾನಗೊಳ್ಳಬೇಕಿದೆ ಎಂದ ಅವರು ಕೊಡು-ಕೊಳ್ಳುವಿಕೆ ವ್ಯವಹಾರದ ಜೊತೆಗೆ ಪರಿಶುದ್ಧವಾದ ವ್ಯವಹಾರಕ್ಕೆ ಯಶಸ್ವಿ ಇದೆ ಎಂದರು.
ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ ಇದರ ಅಧ್ಯಕ್ಷರಾದ ಸುರೇಶ್ ರೈ, ಉಪಾಧ್ಯಕ್ಷ ಟಿ.ತಾರನಾಥ ಕೊಟ್ಟಾರಿ, ನಿರ್ದೇಶಕರುಗಳಾದ ಜಯಂತ್.ಜೆ.ಕೋಟ್ಯಾನ್, ಬಿ.ಕೆ.ಚಂದ್ರಶೇಖರ್, ವೇಣುಗೋಪಾಲ್ ಮಾರ್ಲ, ಉಗ್ಗಪ್ಪ ಶೆಟ್ಟಿ, ಸ್ವಾತಿ ಅಶೋಕ್, ಲಿಂಗಪ್ಪ ಗೌಡ, ಪದ್ಮನಾಭ ಶೆಟ್ಟಿ, ದೇವಪ್ಪ ನಂದ, ಶಾರದಾ ಮಣಿ, ತಾರನಾಥ ಶೆಟ್ಟಿ, ಸರಿತಾ ಅಶೋಕ್ ಭಾಗವಹಿಸಿದ್ದರು.
ಮಹಾಪ್ರಬಂಧಕರಾದ ಭಾಸ್ಕರ್ ಮಂಗಲ್ಪಾಡಿ, ಉಪಮಹಾಪ್ರಬಂಧಕ ತಾರನಾಥ ಶೆಟ್ಟಿ, ತೊಕ್ಕೊಟ್ಟು ಶಾಖಾ ವ್ಯವಸ್ಥಾಪಕರಾದ ಜಯಲಕ್ಷ್ಮೀ ಪಿ.ಯಸ್, ಸಲಹಾ ಸಮಿತಿಯ ಕೃಷ್ಣ ಶೆಟ್ಟಿ, ಸಂಜೀವ ಶೆಟ್ಟಿ, ಸಂಜೀವ ಶೆಟ್ಟಿ.ಪಿ, ಮಾಧವ.ಎ, ಚಂದ್ರಾವತಿ , ರವೀಂದ್ರ ರೈ, ರವೀಂದ್ರ ಶೆಟ್ಟಿ ಉಳಿದೊಟ್ಟು ಹಾಗೂ ವಿವಿಧ ಶಾಖಾ ವ್ಯವಸ್ಥಾಪಕರು, ಗ್ರಾಹಕರು , ಸ್ವಸಹಾಯ ಸಂಘದ ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.


