UN NETWORKS
ಉಳ್ಳಾಲ: ಇಂದಿನ ಕಾಲದಲ್ಲಿ ರಾಮಾಯಣದಂತಹ ಕಥೆಗಳನ್ನು ಹರಿಕಥೆಯ ಮೂಲಕ ತಿಳಿಸುವುದರಿಂದ ನಮ್ಮ ಸಂಸ್ಕೃತಿ ಸಂಸ್ಕಾರ ಆಚಾರ ವಿಚಾರ ಉಳಿಸಿ ಬೆಳೆಸಲು ಸಹಕಾರಿ ಎಂದು ಹರಿಕಥಾ ಸತ್ಸಂಗ ಸಮಿತಿಯ ಗೌರವ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ಅಭಿಪ್ರಾಯಪಟ್ಟರು.
ಕೀರ್ತನ ಪ್ರವೀಣ ಯೋಗಾಚಾರ್ಯ ಪುಂಡರಿಕಾಕ್ಷ ಬೆಳ್ಳೊರು ಇವರ ಎರಡನೇ ವರ್ಷದ ಶ್ರೀ ರಾಮಾಯಣ ಮಾಸಾಚರಣೆಯ ಅಂಗವಾಗಿ ಜಿಲ್ಲೆಯ ವಿವಿದೆಡೆ ಜು. 16ರಿಂದ ಆ.7ರವರೆಗೆ ನಡೆಯಲಿರುವ ಹರಿಕಥಾ ಸತ್ಸಂಗ, ರಾಮನಾಮ ಜಪಯಜ್ಞ ಹಾಗೂ ಆದಿತ್ಯ ಹೃದಯ ಹವನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಯನ್ನು ಕೊಲ್ಯ ಶ್ರೀ ಸೌಭಾಗ್ಯ ಸಭಾಭವನ ದಲ್ಲಿ ನಡೆದ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ ಮುಂದಿನ ದಿನಗಳಲ್ಲಿ ಉತ್ತಮ ಪ್ರಜೆಗಳ ನಿರ್ಮಾಣ ಮಾಡಲು ಹರಿಕಥಾ ಸತ್ಸಂಗ ತುಂಬಾ ಒಳ್ಳೆಯ ಕೆಲಸ. ಆ ಕಾರ್ಯಕ್ರಮವನ್ನು ಎಲ್ಲರೂ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಾವೆಲ್ಲ ಒಟ್ಟು ಸೇರಿ ಕೆಲಸ ಮಾಡೋಣ ಎಂದು ಹೇಳಿದರು.
ಪುಂಡರಿಕಾಕ್ಷ ಬೆಳ್ಳೊರು ಮಾತನಾಡಿ ಮನೆ ಮನೆಗೆ ರಾಮಾಯಣ ಮನಮನಕೆ ರಾಮಾಯಣ ಮುಟ್ಟಿಸುವ ಆಮೂಲಕ ರಾಮಾದರ್ಶ ಜೀವನ ಹಾಗೂ ಗ್ರಾಮ ಆದರ್ಶ ಜೀವನ ನಡೆಸಲು ನಾವೆಲ್ಲರೂ ಪ್ರಯತ್ನಿಸೋಣ ಎಂದರು. ಹರಿಕಥಾ ಸತ್ಸಂಗ ಸಮಿತಿ ಅಧ್ಯಕ್ಷ ಹರಿದಾಸ ಮಾಡೂರು ಅಧ್ಯಕ್ಷತೆ ವಹಿಸಿದ್ದರು. ಹರಿಕಥಾ ಮಾಸಚಾರಣೆಯ ಸಮಿತಿ ಪ್ರ. ಕಾರ್ಯದರ್ಶಿ ನಾರಾಯಣ ಕುಂಪಲ ಸ್ವಾಗತಿಸಿ ಪ್ರಸ್ತಾವನೆಗೈದರು. ಕಾರ್ಯದರ್ಶಿ ಯತಿರಾಜ್ ಶೆಟ್ಟಿ ವಂದಿಸಿದರು.


