UN NETWORKS
ಮಂಗಳೂರು:ಯು.ಟಿ.ಖಾದರ್ ಮತ್ತೊಮ್ಮೆ ಕರ್ನಾಟಕ ಸರಕಾರದ ಸಂಪುಟ ದರ್ಜೆಯ ಸಚಿವರಾಗಿರುವುದು ದ.ಕನ್ನಡ, ಉಡುಪಿ, ಕೊಡುಗು ಜಿಲ್ಲೆಗಳ ಅಭಿವೃದ್ಧಿ ಮತ್ತು ಸಾಮರಸ್ಯ ಬಯಸುವ ಜನರ ಗೆಲುವಾಗಿದೆ ಎಂದು ದ.ಕನ್ನಡ ಜಿಲ್ಲಾ ಕಾಂಗ್ರೇಸ್ ವಕ್ತಾರ ಫಾರೂಕ್ ಉಳ್ಳಾಲ್ ವಿಶ್ಲೇಷಿಸಿದ್ದಾರೆ.
ಸಿದ್ಧರಾಮಯ್ಯ ನೇತ್ರತ್ವದ ಸರಕಾರ ಜನಪರ ಆಡಳಿತ ನೀಡಿಯೂ ದ.ಕನ್ನಡದಲ್ಲಿ ಯುಟಿಕೆ ಪ್ರತಿನಿಧಿಸುವ ಕ್ಷೇತ್ರವನ್ನು ಹೊರತು ಪಡಿಸಿ ಉಳಿದ ಏಳು ವಿಧಾನ ಸಭಾ ಕ್ಷೇತ್ರಗಳಲ್ಲಿ, ಹಾಗೂ ಉಡುಪಿ, ಕೊಡುಗು ಜಿಲ್ಲೆಗಳ ಎಲ್ಲಾ ಕ್ಷೇತ್ರಗಳಲ್ಲೂ ಕಂಡ ಪರಾಜಯ ಮತ್ತು ಬಿಜೆಪಿಯ ಗೆಲುವಿನಿಂದ ಕಳವಳಕ್ಕೊಳಗಾದವರಿಗೆ, ನೂತನ ಸಮಿಶ್ರ ಸರಕಾರದ ಸಂಪುಟದಲ್ಲಿ ಯು.ಟಿ.ಖಾದರ್ ಪ್ರಮುಖ ಖಾತೆಯ ಸಚಿವರಾಗಿರುವುದು,ಹುರುಪು, ಉತ್ಸಾಹ , ಸಂಭ್ರಮ ತಂದಿದೆ ಎಂದು ಫಾರೂಕ್ ಉಳ್ಳಾಲ್ ಹೇಳಿದ್ದಾರೆ. ಸರಳತೆ ಮತ್ತು ಎಲ್ಲರ ವಿಶ್ವಾಸಕ್ಕೆ ಪಾತ್ರವಾಗುವ ಖಾದರ್ ರವರ ಜನಪರ ನಿಲುವು ಈ ಭಾಗದ ಜನರ ಬೇಡಿಕೆಗಳಿಗೆ ನ್ಯಾಯ ಒದಗಲಿದೆ.
ಪಕ್ಷ ಮತ್ತು ನಾಡಿನ ಅಭ್ಯುದಯಕ್ಕೆ ಯುಟಿ ಖಾದರ್, ಅರ್ಹ ಆಯ್ಕೆಯಾಗಿದ್ದಾರೆ.
ಕಳೆದ ಬಾರಿ ಆರೋಗ್ಯ ಮತ್ತು ಆಹಾರ ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿ, ಗಳಿಸಿರುವ ಪ್ರಶಂಸೆ, ಅನುಭವ, ಈ ಬಾರಿಯ ‘ಸಮಿಶ್ರ ಸಂಪುಟ’ದಲ್ಲಿ ಮುಕುಟದಂತೆ ಕಂಗೊಳಿಸಲು ಸಹಕಾರಿಯಾಗಲಿದೆ ಎಂದೂ ಫಾರೂಕ್ ಉಳ್ಳಾಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.


