UN NETWORKS
ಇರಾ: ವಿಶ್ವ ಪರಿಸರ ದಿನಾಚರಣೆಯ ಸಲುವಾಗಿ ಇರಾ ಗ್ರಾಮ ಪಂಚಾಯತ್ ಹಾಗು ಇರಾ ತಾಳಿತ್ತಬೆಟ್ಟು ದ.ಕ.ಜಿ.ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ ವತಿಯಿಂದ ಗಿಡ ನೆಡುವ ಮೂಲಕ ಆಚರಿಸಲಾಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕುಕ್ಕಾಜೆ, ಉಪಾಧ್ಯಕ್ಷೆ ಚಂದ್ರಾವತಿ ಕರ್ಕೇರ, ಪಂಚಾಯತ್ ಸದಸ್ಯರಾದ ಮೊಯಿದಿನ್ ಕುಂಞಿ, ಗೋಪಾಲ ಅಶ್ವತ್ಥಡಿ, ರಮೇಶ್ ಪೂಜಾರಿ, ಎಂ.ಬಿ.ಉಮರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಳಿನಿ.ಎ.ಕೆ, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಮುರಳೀಧರ ಭಂಡಾರಿ, ಶಾಲಾ ಶಿಕ್ಷಕ ವೃಂದ, ಪಂಚಾಯತ್ ಸಿಬ್ಬಂದಿ ವರ್ಗ ಈ ಸಂದರ್ಭದಲ್ಲಿ ಉಪಸ್ಥಿತಿತರಿದ್ದರು. ಶಿಕ್ಷಕರಾದ ಶಂಕರ್ ಸ್ವಾಗತಿಸಿ, ಜೋನ್ ಫೆರ್ನಾಂಡೀಸ್ ಧನ್ಯವಾದ ಸಲ್ಲಿಸಿದರು.




