UN NETWORKS
ಉಳ್ಳಾಲ : ಉಳ್ಳಾಲದಾದ್ಯಂತ ಮಂಗಳವಾರ ಸುರಿದ ಮಳೆಗೆ ತೊಕ್ಕೊಟ್ಟು ಜಂಕ್ಷನ್, ಕುತ್ತಾರು ಜಂಕ್ಷನ್ ಜಲಾವೃತಗೊಂಡಿದ್ದು, ತೊಕ್ಕೊಟ್ಟುವಿನಲ್ಲಿ ಹೋಟೆಲ್ ಅಂಗಡಿ ಮಳಿಗೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ಉಳ್ಳಾಲದಲ್ಲಿ ಸಮುದ್ರ ಬಿರುಸುಗೊಂಡಿದ್ದು, ಯಾವುದೇ ಹಾನಿಯಾಗಿಲ್ಲ.
ರಾಷ್ಟ್ರೀಯ ಹೆದ್ದಾರಿ 66ರ ತೊಕ್ಕೊಟ್ಟು ಜಂಕ್ಷನ್ನಲ್ಲಿ ಫ್ಲೈಓವರ್ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದ್ದು, ಕಾಮಗಾರಿಗೆ ಸಂಬಂಧಪಟ್ಟಂತೆ ರಸ್ತೆಯನ್ನು ಅಗೆದಿದ್ದು, ಮಂಗಳವಾರ ಸುರಿದ ಭಾರೀ ಮಳೆಗೆ ಫ್ಲೈ ಓವರ್ಗೆ ತೆಗೆದಿದ್ದ ಹೊಂಡದಲ್ಲಿ ನೀರು ತುಂಬಿ ರಸ್ತೆ ಮತ್ತು ಪಕ್ಕದ ಮೂರು ಕಟ್ಟಡಗಳಲ್ಲಿರುವ ಅಂಗಡಿಗಳಿಗೆ ನೀರು ತುಂಬಿದೆ. ಹೆದ್ದಾರಿಯಲ್ಲಿ ನೀರು ನಿಂತ ಪರಿಣಾಮ ಮಂಗಳೂರಿನಿಂದ ತೊಕ್ಕೊಟ್ಟು ಕಡೆಗೆ ಸಂಚರಿಸುವ ವಾಹನಗಳಿಗೆ ಸಂಚಾರಕ್ಕೆ ತಡೆಯಾಯಿತು. ಘಟನೆಗೆ ಸಂಬಂ„ಸಿದಂತೆ ಉಳ್ಳಾಲ ಮುಖ್ಯಾ„ಕಾರಿಗಳು ಜನಪ್ರತಿನಿಧಿಗಳು ಭೇಟಿ ನೀಡಿದ್ದು, ಹೆದ್ದಾರಿ ಇಲಾಖೆಯ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದರು. ರಾತ್ರಿ ವೇಳೆಯೂ ಅಂಗಡಿಗಳಿಗೆ ನೀರು ತುಂಬಿರುವುದನ್ನು ಅಂಗಡಿ ಮಾಲೀಕರುಇ ಸೇರಿದಂತೆ ನೌಕರರು ಶ್ರ,ಮಪಟ್ಟರು. ಕೃತಕ ನೆರೆಯಿಂದ ಲಕ್ಷಾಂತರ ನಷ್ಟ ಅಂದಾಜಿಸಲಾಗಿದೆ.
ಬಿರುಸುಗೊಂಡ ಸಮುದ್ರ : ಉಳ್ಳಾಲ ಸೇರಿದಂತೆ ಸೋಮೇಶ್ವರ ಉಚ್ಚಿಲದಲ್ಲಿ ಸಮುದ್ರ ಬಿರುಸುಗೊಂಡಿದೆ. ಬೆಳಗ್ಗಿನಿಂದಲೇ ಮಳೆಯೊಂದಿಗೆ ಗಾಳಿ ಬೀಸುತ್ತಿದ್ದು ಯಾವುದೇ ಹಾನಿಯಾಗಿಲ್ಲ. ಸಂಜೆಯ ವೇಳೆಗೆ ದೊಡ್ಡ ಅಲೆಗಳು ದಡಕ್ಕಪ್ಪಳಿಸುತ್ತಿದೆ.
ಕುತ್ತಾರ್ ಜಂಕ್ಷನ್ ಜಲಾವೃತ: ಕುತ್ತಾರ್ ಜಂಕ್ಷನ್ನಲ್ಲಿ ಮಳೆ ನೀರಿನಿಂದ ಜಲಾವೃತಗೊಂಡಿದ್ದು, ಕೃತಕ ನೆರೆಯಾಗಿದೆ. ರಸ್ತೆ ಚರಂಡಿ ಸಮರ್ಪಕವಾಗಿರದೆ ಹರಿಯುವ ನೀರು ತಗ್ಗು ಪ್ರದೇಶವಾದ ಕುತ್ತಾರ್ ಜಂಕ್ಷನ್ನಲ್ಲಿ ಶೇಖರಣೆಗೊಂಡಿದ್ದು, ರಸ್ತೆಯಲ್ಲಿ ನೀರು ತುಂಬಿದ್ದರಿಂದ ಸಂಚಾರಕ್ಕೆ ತಡೆಯಾಯಿತು. ಉಳಿದಂತೆ ಅಂಬ್ಲಮೊಗರುವಿನಲ್ಲಿ ಸಂಪರ್ಕ ಸೇತುವೆ ನಿರ್ಮಾಣ ಕಾಮಗಾರಿ ನಿಧಾನ ಗತಿಯಲ್ಲಿ ನಡೆಯುತ್ತಿದ್ದಂರಿಂದ ಬದಲಿ ರಸ್ತೆಯಲ್ಲಿ ನೀರು ತುಂಬಿ ಸಂಚಾರಕ್ಕೆ ತಡೆಯಾಗಿದೆ. ಉಳಿದಂತೆ ಹೆದ್ದಾರಿ ಸೇರಿದಂತೆ ಒಳರಸ್ತೆಗಳಲ್ಲಿ ಚರಂಡಿ ಸಮರ್ಪಲವಾಗಿರದ ಕಾರಣ ನೀರು ರಸ್ತೆಯಲ್ಲೆ ಹರಿಯುತ್ತಿದೆ. ಯಾವುದೇ ಹಾನಿಯಾದ ಕುರಿತು ಮಾಹಿತಿ ಬಂದಿಲ್ಲ.
ಮನೆಗೆ ಬಿದ್ದ ತಡೆಗೋಡೆ: ತಡರಾತ್ರಿ ಬೆಳ್ಮ ಗ್ರಾ.ಪಂ .ನ ಕುಕ್ಕುದಕಟ್ಟೆ ಎಂಬಲ್ಲಿನ ರಘುರಾಮ ಎಂಬವರ ಮನೆಗೆ ತಡೆಗೋಡೆ ಕುಸಿದು ಮನೆ ಭಾಗಶ: ಹಾನಿಯಾಗಿರುವ ಘಟನೆ ನಡೆದಿದೆ. ಬಚ್ಚಲು ಮನೆಯ ಮೇಲೆ ತಡೆಗೋಡೆ ಉರುಳಿದ್ದು, ಕೆಲವೇ ನಿಮಿಷಗಳಲ್ಲಿ ಅಲ್ಲಿ ಯುವತಿ ಸ್ನಾನ ಮಾಡಿ ವಾಪಸ್ಸಾಗುವಷ್ಟರಲ್ಲಿ ಘಟನೆ ಸಂಭವಿಸಿದೆ.


