UN NETWORKS
ಉಳ್ಳಾಲ: ಕೊಣಾಜೆ ಠಾಣಾ ವ್ಯಾಪ್ತಿಯ ನರಿಂಗಾನ ಗ್ರಾಮದ ಕೊಲ್ಲರಕೋಡಿ ಎಂಬಲ್ಲಿರುವ ಮದ್ರಸವೊಂದಕ್ಕೆ ಕಿಡಿಗೇಡಿಗಳು ಕಲ್ಲೆಸೆದು ಹಾನಿಗೊಳಿಸಿರುವ ಘಟನೆ ಶುಕ್ರವಾರ ತಡರಾತ್ರಿ ನಡೆದಿದ್ದು, ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಮಂಜೇಶ್ವರ ಮೂಲದ ಭರತ್ ಮತ್ತು ಮಿಥುನ್ ಎಂದು ಗುರುತಿಸಲಾಗಿದೆ.
ಕೊಲ್ಲರಕೋಡಿಯ ನೂರುಲ್ ಉಲೂಮ್ ಮದ್ರಸಕ್ಕೆ ಕಿಡಿಗೇಡಿಗಳು ಶುಕ್ರವಾರ ಬೈಕ್‍ನಲ್ಲಿ ಆರೋಪಿಗಳು ಕಲ್ಲೆಸಿದ್ದರು. ಈ ಸಂದರ್ಭದಲ್ಲಿ ಮದ್ರಸದ ಬಳಿ ಇದ್ದ ಅಬ್ದುಲ್ ಮಜೀದ್ ಎಂಬವರು ಗೊಬ್ಬೆ ಹೊಡೆದಾಗ ಅವರಿಗೂ ಆರೋಪಿಗಳು ಬೆದರಿಕೆಯೊಡ್ಡಿ ಅಲ್ಲಿಂದ ಪರಾರಿಯಾಗಿದ್ದರು. ಬಳಿಕ ಸ್ಥಳೀಯರು ಒಟ್ಟು ಸೇರಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳು ಮಂಜನಾಡಿ ಜಾತ್ರಾ ಉತ್ಸವಕ್ಕೆ ಬಂದು ಇದೇ ದಾರಿಯಲ್ಲಿ ಹಿಂದಿರುವಾಗ ಮದ್ರಸಕ್ಕೆ ಕಲ್ಲೆಸೆದು ಪರಾರಿಯಾಗಿದ್ದರು. ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


