UN NETWORKS
ತಲಪಾಡಿ: ಚೀನಾದಲ್ಲಿ ನಡೆದ ಅಂತರಾಷ್ಟ್ರೀಯ ಟೈಕ್ವಾಂಡೋ ಚಾಂಪಿಯನ್ಶಿಪ್ನಲ್ಲಿ ಭಾರತವನ್ನು ಪ್ರತಿನಿಧಿಸಿದ ತಲಪಾಡಿಯ ಶಾರದಾ ವಿದ್ಯಾನಿಕೇತನದ ವಿದ್ಯಾರ್ಥಿಗಳು 8 ಪದಕಗಳನ್ನು ಗಳಿಸಿದ್ದಾರೆ.
ಶಾರದಾ ವಿದ್ಯಾನಿಕೇತನ ಪದವಿಪೂರ್ವ ಕಾಲೇಜಿನ ರೀಪು ದಮನ್ ಸಿಂಗ್ ಒಂದು ಚಿನ್ನ ಮತ್ತು ಒಂದು ಕಂಚಿನ ಪದಕ ಪಡೆದರೆ, ಪ್ರೌಢಶಾಲಾ ವಿದ್ಯಾರ್ಥಿ ಯಶಸ್ ಆರ್. ಗೌಡ ಒಂದು ಬೆಳ್ಳಿ ಮತ್ತು ಒಂದು ಕಂಚು, ಸಾತ್ವಿಕ್ ಜಿ. ನವೀನ್ ಒಂದು ಬೆಳ್ಳಿ ಮತ್ತು ಒಂದು ಕಂಚು, ಕೀರ್ತನ್ ವಿ. ಒಂದು ಕಂಚು, ಶ್ರೀಚರಣ್ ರೆಡ್ಡಿ ಒಂದು ಕಂಚಿನ ಪದಕವನ್ನು ಪಡೆದಿದ್ದಾರೆ.


